ETV Bharat / state

ರಂಗೇರಿದ ಕ್ರಿಸ್​ಮಸ್ ತಯಾರಿ: ಕೋವಿಡ್​​ನಿಂದಾಗಿ ಮಿಸ್ ಆಗಿದ್ದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್​ಗೆ ಚಾಲನೆ - cake preperation for christmas

ಇನ್ನೇನು ಕ್ರಿಸ್​ಮಸ್​ ಸಮೀಪಿಸುತ್ತಿದ್ದು, ಬೆಂಗಳೂರಿನ ಪಂಚಾತಾರ ಹೋಟೆಲ್​ನಲ್ಲಿ ಕೇಕ್ ತಯಾರಿಗೆ ಮಿಕ್ಸಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯ್ತು.

christmas
ಕೇಕ್ ತಯಾರಿಗೆ ಮಿಕ್ಸಿಂಗ್ ಮಾಡುವ ಕಾರ್ಯಕ್ಕೆ ಚಾಲನೆ
author img

By

Published : Oct 23, 2021, 8:45 PM IST

ಬೆಂಗಳೂರು: ಡಿಸೆಂಬರ್ ತಿಂಗಳು ಇನ್ನೇನು ಸಮೀಪಿಸುತ್ತಿದ್ದಂತೆ ಕ್ರೈಸ್ತ ಬಾಂಧವರ ಪ್ರಮುಖ ಹಬ್ಬವಾದ ಕ್ರಿಸ್​​ಮಸ್​​ ತಯಾರಿನೂ ಭರ್ಜರಿಯಾಗೆ ನಡೆಯುತ್ತೆ. ಸಿಲಿಕಾನ್​ ಸಿಟಿಯ ಎಲ್ಲ ಪಂಚತಾರಾ ಹೋಟೆಲ್​ಗಲ್ಲಿ ಕೇಕ್ ಮಿಕ್ಸಿಂಗ್ ಜೋರಾಗಿ ಇರುತ್ತೆ.

ಈ ಹಿನ್ನೆಲೆ ಇಂದು ಖಾಸಗಿ ಹೋಟೆಲ್ ವೊಂದರಲ್ಲಿ ಸಾಂಪ್ರದಾಯಿಕ ಮತ್ತು ವಿಶೇಷ ವಿಧಾನದಲ್ಲಿ ಸ್ವಾದಿಷ್ಟಪೂರ್ಣ ಕೇಕ್ ತಯಾರಿಗೆ ಮಿಕ್ಸಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯ್ತು. ಒಣದ್ರಾಕ್ಷಿ, ಕೆಂಪು ಚೆರ್ರಿ, ಕಿತ್ತಳೆ ಸಿಪ್ಪೆ, ಟೂಟಿ ಫ್ರೂಟಿ, ಬ್ಲಾಕ್ ಕರಂಟ್ಸ್, ಕರ್ಜೂರ, ಅಂಜೂರದ ಹಣ್ಣುಗಳು ಅಬ್ಬಬ್ಬಾ.. ಒಂದಲ್ಲ ಎರಡಲ್ಲ ಹತ್ತಾರು ಬಗೆಯ ತಿಂಡಿಗಳನ್ನ ಮಿಶ್ರಣ ಮಾಡಲಾಯ್ತು‌.

ಕೇಕ್ ತಯಾರಿಗೆ ಮಿಕ್ಸಿಂಗ್ ಮಾಡುವ ಕಾರ್ಯಕ್ಕೆ ಚಾಲನೆ

ರುಚಿಕರ ಹಣ್ಣುಗಳು ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗವನ್ನು ವಿಶಾಲ ಕಡಾಯಿಗೆ ಸೇರಿಸುತ್ತಿದ್ದಂತೆ ಅದರ ಘಮ ಎಲ್ಲೆಡೆ ಹರಡಿತ್ತು.. ವಿಸ್ಕಿ, ಗಾಢ ರಮ್, ವೋಡ್ಕಾ, ಜಿನ್, ವೈನ್, ಬಿಯರ್ ಮತ್ತು ಗೋಲ್ಡನ್ ಸಿರಪ್, ಮೊಲಾಸಸ್, ಜೇನುತುಪ್ಪ ಮತ್ತು ವೆನಿಲ್ಲಾ ಎಸೆನ್ಸ್​​​ನಂತಹ ಸಿರಪ್‍ಗಳನ್ನು ಈ ಎಲ್ಲ ಪದಾರ್ಥಗಳೊಂದಿಗೆ ಮಿಶ್ರಣ ಮಾಡುತ್ತ ಎಲ್ಲರೂ ಜೋರು ಧ್ವನಿಯಲ್ಲಿ ಶುಭಾಶಯ ಕೋರುತ್ತಾ ಸಂಭ್ರಮಿಸಿದರು.

ಸಾಂಪ್ರದಾಯಿಕ ಕೇಕ್ ಮಿಕ್ಸಿಂಗ್ ಸಮಾರಂಭದ ನಂತರ, ಮಿಶ್ರಣವನ್ನು ಗಾಳಿಯಾಡದ ಚೀಲಗಳಲ್ಲಿ ಹಾಕಲಾಯಿತು. ಈ ಮಿಶ್ರಣವು ಕ್ರಿಸ್‍ಮಸ್‍ನ ತನಕ ಪಕ್ವವಾಗಲು ಬಿಡಲಾಗುತ್ತದೆ. ನಂತರ ಅದನ್ನು ಕೇಕ್ ತಯಾರಿಕೆಯ ಹಿಟ್ಟಿನೊಂದಿಗೆ ಬೆರೆಸಿ ಬೇಯಿಸಲಾಗುತ್ತದೆ.

ಕೊರೊನಾ ಲಾಕ್​ಡೌನ್​ನಿಂದಾಗಿ ಈ ಕೇಕ್​ ಮಿಕ್ಸಿಂಗ್​ ಸಂಭ್ರಮ ಮಿಸ್​ ಮಾಡಿಕೊಂಡಿದ್ದ ಐಟಿ ಸಿಟಿ ಮಂದಿ ಇಂದು ಬಹಳ ಸಂತಸ ಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.