ETV Bharat / state

ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯ ವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಸಿಎಜಿ ವರದಿ - State Road Transport Corporation news

ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯ ವೈಖರಿ ಬಗ್ಗೆ ಸಿಎಜಿ ವರದಿಯಲ್ಲಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲತೆಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಬಸ್ ನಿಲ್ದಾಣಗಳಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಶುಚಿತ್ವ, ತ್ಯಾಜ್ಯ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ನೀಡುತ್ತಿಲ್ಲ. ಶೇ. 75ರಷ್ಟು ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆಗಳಿಲ್ಲ. ವಿಕಲಚೇತನರಿಗೆ ವಿಶೇಷ ಶೌಚಾಲಯ ಮತ್ತು ರ್ಯಾಂಪ್​ ವ್ಯವಸ್ಥೆ ಮಾಡಿಲ್ಲವೆಂದು ಲೆಕ್ಕಪರಿಶೋಧನ ವರದಿಯಲ್ಲಿ ಅತೃಪ್ತಿ ವ್ಯಕ್ತಪಡಿಸಲಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Feb 3, 2021, 9:53 PM IST

ಬೆಂಗಳೂರು: ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇಲೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ ಮಾರ್ಚ್ 2019ಕ್ಕೆ ಕೊನೆಗೊಂಡ ವರ್ಷದ ಸಾರ್ವಜನಿಕ ವಲಯದ ಉದ್ಯಮಗಳ ಮೇಲಿನ ವರದಿಯನ್ನು ಸಿಎಂ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದರು.

ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯ ವೈಖರಿ ಬಗ್ಗೆ ಸಿಎಜಿ ವರದಿಯಲ್ಲಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರ ಅನುಕೂಲತೆಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ. ಬಸ್ ನಿಲ್ದಾಣಗಳಲ್ಲಿ ಆರೋಗ್ಯಕರ ವಾತಾವರಣ ಇಲ್ಲ. ಶುಚಿತ್ವ, ತ್ಯಾಜ್ಯ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ನೀಡುತ್ತಿಲ್ಲ. ಶೇ. 75ರಷ್ಟು ಬಸ್ ನಿಲ್ದಾಣಗಳಲ್ಲಿ ವ್ಯವಸ್ಥೆಗಳಿಲ್ಲ. ವಿಕಲಚೇತನರಿಗೆ ವಿಶೇಷ ಶೌಚಾಲಯ ಮತ್ತು ರ್ಯಾಂಪ್​ ವ್ಯವಸ್ಥೆ ಮಾಡಿಲ್ಲವೆಂದು ಲೆಕ್ಕಪರಿಶೋಧನ ವರದಿಯಲ್ಲಿ ಅತೃಪ್ತಿ ವ್ಯಕ್ತಪಡಿಸಲಾಗಿದೆ.

ಕೆಪಿಟಿಸಿಎಲ್​ನ 50 ಯೋಜನೆಗಳು ವಿಳಂಬವಾಗಿ ಮುಕ್ತಾಯ. ಇದರಿಂದ 556 ಕೋಟಿ ರೂ. ಮೊತ್ತದ 1,659 ದಶಲಕ್ಷ ಯೂನಿಟ್ ವಿದ್ಯುತ್ ನಷ್ಟ. ವಿದ್ಯುತ್ ನಷ್ಟಗಳನ್ನು ತಗ್ಗಿಸುವುದಕ್ಕಾಗಿ ನಿಗದಿತ ಗುರಿ ಸಾಧಿಸಿಲ್ಲ. ಇದರಿಂದ 374 ಕೋಟಿ ರೂ. ಅನಗತ್ಯ ದಂಡದ ಹಣ ವ್ಯರ್ಥವಾಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್​​ಫಾರ್ಮರ್ ದುರಸ್ತಿಯಲ್ಲಿ ವೈಫಲ್ಯವಾಗಿದೆ. 41.55 ಕೋಟಿ ರೂ. ಮೌಲ್ಯದ 55 ಟ್ರಾನ್ಸ್​​ಫಾರ್ಮರ್​ಗಳ ದುರಸ್ತಿ ವಿಳಂಬವಾಗಿದೆ.

ಓದಿ: ಮೂರು-ನಾಲ್ಕು ತಿಂಗಳಲ್ಲಿ ವೈದ್ಯರ ಕೊರತೆ ನೀಗಿಸಲಾಗುವುದು : ಸಚಿವ ಡಾ.ಕೆ‌.ಸುಧಾಕರ್

ಕೆಪಿಟಿಸಿಎಲ್ ಮೂಲಕ ಖರೀದಿಸಿದ 75 ಕೋಟಿ ರೂ. ಮೌಲ್ಯದ 55 ಟ್ರಾನ್ಸ್​​ಫಾರ್ಮರ್​ಗಳು ನಿಷ್ಪ್ರಯೋಜಕವಾಗಿವೆ. ಟ್ರಾನ್ಸ್​​ಫಾರ್ಮರ್ ಖರೀದಿಯಲ್ಲಿ ಅನಗತ್ಯ ವೆಚ್ಚ ಮಾಡಲಾಗಿದೆ. ದೋಷಪೂರಿತ ಟ್ರಾನ್ಸ್​​ಫಾರ್ಮರ್ ಬದಲಾವಣೆಗೆ ಹೊಸ ಟ್ರಾನ್ಸ್​​ಫಾರ್ಮರ್ ಖರೀದಿಯಲ್ಲಿ ಅನವಶ್ಯಕ ವೆಚ್ಚ ಮಾಡಿದ್ದು, ಕೆಟ್ಟು ಹೋಗಿದ್ದ ಟ್ರಾನ್ಸ್​​ಫಾರ್ಮರ್ ಸಮಯೋಚಿತವಾಗಿ ದುರಸ್ತಿ ಮಾಡಿದ್ದಲ್ಲಿ 75.90 ಕೋಟಿ ರೂ. ವೆಚ್ಚ ಉಳಿಕೆ ಸಾಧ್ಯವಿತ್ತು . ಆದರೆ ಕಂಪನಿ ವಿಫಲತೆಯಿಂದ 41.55 ಕೋಟಿ ರೂ. ಮೌಲ್ಯದಲ್ಲಿ ಖರೀದಿ ಮಾಡಿದ ಟ್ರಾನ್ಸ್​​ಫಾರ್ಮರ್ ನಿಷ್ಪ್ರಯೋಜಕವಾಗಿ ಉಳಿಯುವಂತಾಯಿತು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕೆಟ್ಟು ಹೋಗಿರುವ ವಿದ್ಯುತ್ ಟ್ರಾನ್ಸ್​​ಫಾರ್ಮರ್ ದುರಸ್ತಿಗಾಗಿ ತನ್ನದೇ ಆದ ಸುತ್ತೋಲೆಗಳು ಹಾಗೂ ಮಾರ್ಗಸೂಚಿ ಅನುಸರಿಸುವಲ್ಲಿ ವಿಫಲವಾಗಿದೆ. 41.55 ಕೋಟಿ ಮೌಲ್ಯದ 55 ಟ್ರಾನ್ಸ್​​ಫಾರ್ಮರ್​ಗಳನ್ನು ಒಂದು ವರ್ಷದೊಳಗಡೆ ದುರಸ್ತಿ ಮಾಡಬೇಕಾಗಿದ್ದರು ಏಳೂವರೆ ವರ್ಷಗಳವರೆಗೆ ದುರಸ್ತಿ ಮಾಡಿರಲಿಲ್ಲ. ಇದರಿಂದ ಟ್ರಾನ್ಸ್​​ಫಾರ್ಮರ್​ಗಳನ್ನು ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿ ಬಳಸಲು ಸಾಧ್ಯವಾಗಿರದ ಕಾರಣ 75.90 ಕೋಟಿ ರೂ. ಮೊತ್ತದಲ್ಲಿ ಹೊಸ ಟ್ರಾನ್ಸ್​​ಫಾರ್ಮರ್ ಖರೀದಿ ಮಾಡಬೇಕಾಗಿ ಬಂತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಲೋಪದೋಷಗಳ ಬಗ್ಗೆಯೂ ಸಿಎಜಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.