ಅನೇಕ ಮಂದಿ ಯುವತಿಯರಿಗೆ ಗಗನ ಸಖಿಯಾಗಬೇಕು ಎಂಬ ಕನಸು ಇರುತ್ತದೆ. ಇಂತಹ ಕನಸಿಗೆ ಇದೀಗ ಏರ್ ಇಂಡಿಯಾ ಸಂಸ್ಥೆ ವೇದಿಕೆ ಒದಗಿಸಿದೆ. ಏರ್ ಇಂಡಿಯಾ ಸಂಸ್ಥೆಯಿಂದ ಕ್ಯಾಬಿನ್ ಕ್ರೂ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಈ ಹುದ್ದೆ ನೇಮಕಾತಿಯನ್ನು ನಡೆಯಲಿದೆ. ಆಗಸದಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಯುವತಿಯರು ಈ ಹುದ್ದೆಗಳಿಗೆ ನಡೆಸುವ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.
ಹುದ್ದೆ ವಿವರ: ಏರ್ ಇಂಡಿಯಾದಲ್ಲಿ ಕಾಲ ಕಾಲಕ್ಕೆ ನೇಮಕವಾಗುವ ಏರ್ ಇಂಡಿಯಾ ಕ್ಯಾಬಿನ್ ಕ್ರೂ ಹುದ್ದೆಗೆ ಇದೀಗ ಬೆಂಗಳೂರಿನಲ್ಲಿ ನೇರ ಸಂದರ್ಶನ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಒಟ್ಟು ಎಷ್ಟು ಹುದ್ದೆಗಳ ಭರ್ತಿ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟಪಡಿಸಿಲ್ಲ.
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿಯನ್ನು ಕನಿಷ್ಠ 50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಉತ್ತಮವಾಗಿ ಇಂಗ್ಲಿಷ್ ಮತ್ತು ಹಿಂದಿ ಮಾತನಾಡುವ ಸಾಮರ್ಥ್ಯವನ್ನು ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷ ವಯೋಮಿತಿ ಹೊಂದಿರಬೇಕು. ಈಗಾಗಲೇ ಈ ಹುದ್ದೆಯಲ್ಲಿ ಅನುಭವ ಹೊಂದಿರುವವರಿಗೆ 35ವರ್ಷದವರೆಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಈ ಹುದ್ದೆಗೆ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಈ ವೇಳೆ ಅಭ್ಯರ್ಥಿಗಳ ಕೌಶಲ್ಯ ಮತ್ತಿತರ ಅಂಶಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.
ವಾಕ್ ಇನ್ ಇಂಟರ್ ವ್ಯೂ ದಿನಾಂಕ: ಈ ಹುದ್ದೆಗೆ ನವೆಂಬರ್ 28ರಂದು ವಾಕ್ ಇನ್ ಇಂಟರ್ ವ್ಯೂ ನಡೆಸಲಾಗುವುದು.
ನೇರ ಸಂದರ್ಶನ ನಡೆಯುವ ಸ್ಥಳ: ಫಾರ್ಚೂನ್ ಸೆಲೆಕ್ಟ್ ಜೆಪಿ ಕೊಸ್ಮೊಸ್, ಕನ್ನಿಂಗ್ ಕ್ಯಾಮ್ ಕ್ರೆಸೆಂಟ್ ರಸ್ತೆ, ನಂ. 49, ಫೋರ್ಟಿಸ್ ಆಸ್ಪತ್ರೆ ಹಿಂಭಾಗ, ಬೆಂಗಳೂರು- 560052
ಈ ದಾಖಲೆ ಅವಶ್ಯ: ಈ ಹುದ್ದೆಗೆ ಹಾಜರಾಗುವ ಇಚ್ಛೆಯನ್ನು ಹೊಂದಿರುವ ಅಭ್ಯರ್ಥಿಗಳು ಜೂನ್ 22ರಂದು ನಡೆಯುವ ಈ ಸಂದರ್ಶನದಲ್ಲಿ ತಮ್ಮ ಶೈಕ್ಷಣಿಕ ದಾಖಲಾತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೊಂಡೊಯ್ಯುವುದು ಅತಿ ಮುಖ್ಯ. ಜೊತೆಗೆ ಹೊಸ ಅಪ್ಡೇಟ್ ರೆಸ್ಯೂಮ್ ಅನ್ನು ಜೊತೆಗೆ ಎಸ್ಇಪಿ ಕಾರ್ಡ್ ಅನ್ನು ಹೊಂದಿರಬೇಕು. ಅಭ್ಯರ್ಥಿಗಳು ವೆಸ್ಟರ್ನ್ ಫಾರ್ಮಲ್ ದಿರಿಸಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಸೇರಿದಂತೆ ಅಧಿಕೃತ ಅಧಿಸೂಚನೆ ವೀಕ್ಷಣೆಗೆ airindia.in ಈ ಅಧಿಕೃತ ಜಾಲತಾಣಕ್ಕೆ ಅಭ್ಯರ್ಥಿಗಳು ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಕೊಡಗು ಜಿಲ್ಲಾ ನ್ಯಾಯಾಲಯ ನೇಮಕಾತಿ; ಟೈಪಿಸ್ಟ್, ಜವಾನ ಸೇರಿದಂತೆ 64 ಹುದ್ದೆ