ETV Bharat / state

ಹೊರಗಿನಿಂದ ಬಂದವರೆಂದು ಏನೂ ಇಲ್ಲ, ಎಲ್ಲರೂ ನಮ್ಮವರೇ.. ಸಿ ಟಿ ರವಿ - C T Ravi talk about Basavaraja Bommai

ಸಿಎಂ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಸಾಕಷ್ಟು ಅನುಭವ ಇದೆ. ರಾಜ್ಯದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ತಂದೆಯ ಕಾಲದಿಂದ ಅನುಭವ ಬಳುವಳಿಯಾಗಿದೆ ಬಂದಿದೆ. ಎಂಎಲ್​ಸಿ, ಎಂಎಲ್ಎ ಆಗಿ ಕೆಲಸ ಮಾಡಿದ್ದಾರೆ‌. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ಕೊಡ್ತಾರೆ ಅನ್ನೋ ವಿಶ್ವಾಸವಿದೆ..

c-t-ravi
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
author img

By

Published : Jul 28, 2021, 3:56 PM IST

ಬೆಂಗಳೂರು : ಹೊರಗಿನಿಂದ ಬಂದವರು ಅಂಥ ಏನು ಇಲ್ಲ. ಎಲ್ಲಾ ನಮ್ಮವರೇ.. ನಾಡಿನ ಜನರ ಹಿತಕ್ಕೆ ಕೆಲಸ ಮಾಡಬೇಕು. ಜೊತೆಗೆ ಪಕ್ಷದ ಹಿತವನ್ನು ಕಾಪಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು.

ಕೆ ಕೆ ಗೆಸ್ಟ್ ಹೌಸ್‌ನಲ್ಲಿ ಮಾತನಾಡಿದ ಅವರು, ವಲಸಿಗ ಶಾಸಕರ ಸಚಿವ ಸ್ಥಾನ ಕೈತಪ್ಪುವ ಆತಂಕ ವಿಚಾರವಾಗಿ ಪ್ರತಿಕ್ರಿಯಿಸಿದರು. ಹೊರಗಡೆಯವರನ್ನ, ಬಿಜೆಪಿಯವರನ್ನ ನಂಬಲ್ಲ ಅಂತಾ ಅಸ್ಸೋಂನ ಸಿಎಂ ಹೇಮಂತ ವಿಶ್ವಾಸ್ ಹೇಳ್ತಾ ಇದ್ರು. ಈಗ ಬಸವರಾಜ ಬೊಮ್ಮಾಯಿ ಹೊರಗಿಂದ ಬಂದು ಸಿಎಂ ಆಗಿದ್ದಾರೆ. ಹೊರಗಿನಿಂದ ಬಂದವರು ಅಂತಾ ಏನ್ ಇಲ್ಲ. ಎಲ್ಲಾ ನಮ್ಮವರೇ.. ಅವರ ಕಾರ್ಯಶೈಲಿಗಳಲ್ಲಿ ವ್ಯತ್ಯಾಸವಾದ್ರೆ, ಆವಾಗ ಪಕ್ಷ ಮತ್ತು ಮುಖ್ಯಮಂತ್ರಿಗಳು ಅಂತಹ ಸಚಿವರ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ ಎಂದರು.

ಸಿಎಂ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಸಾಕಷ್ಟು ಅನುಭವ ಇದೆ.. ಸಿ ಟಿ ರವಿ

ಸಿಎಂ ಬೊಮ್ಮಾಯಿ ಅವರಿಗೆ ರಾಜಕೀಯವಾಗಿ ಸಾಕಷ್ಟು ಅನುಭವ ಇದೆ. ರಾಜ್ಯದಲ್ಲಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ತಂದೆಯ ಕಾಲದಿಂದ ಅನುಭವ ಬಳುವಳಿಯಾಗಿದೆ ಬಂದಿದೆ. ಎಂಎಲ್​ಸಿ, ಎಂಎಲ್ಎ ಆಗಿ ಕೆಲಸ ಮಾಡಿದ್ದಾರೆ‌. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ಕೊಡ್ತಾರೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು. ನೂತನ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಂ ಬೊಮ್ಮಾಯಿ ಬಿಜೆಪಿ ವರಿಷ್ಠರ ಜೊತೆಗೆ ಚರ್ಚಿಸಿ, ತನ್ನ ಸಂಪುಟದಲ್ಲಿ ಯಾರು ಇರಬೇಕು ಅಂತಾ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಹಿರಿಯ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿದ ಅವರು, ಇದು ಮಾಧ್ಯಮಗಳಲ್ಲಿ ಅಷ್ಟೇ ಚರ್ಚೆ ಆಗ್ತಾ ಇದೆ. ಇದರಿಂದ ನಿಮಗೆ ಉಪಯೋಗ ಆಗಬಹುದು ಅಷ್ಟೇ.. ವರಿಷ್ಠರನ್ನ ಭೇಟಿ ಮಾಡಿದ ನಂತರ ಎಲ್ಲವೂ ನಿರ್ಧಾರ ಆಗುತ್ತದೆ ಎಂದರು.

ಓದಿ: ಬಿಎಸ್‌ವೈ ಪರಮಾಪ್ತ ಬೊಮ್ಮಾಯಿಗೆ ಪಟ್ಟ.. ದೂರವಾದ ಮಿತ್ರಮಂಡಳಿಯಲ್ಲಿನ ಆತಂಕ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.