ಬೆಂಗಳೂರು: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ ವೈ ವಿಜಯೇಂದ್ರ ಖುಷಿ ಹಂಚಿಕೊಂಡಿದ್ದಾರೆ.
''ಜನವರಿ 22 ರಂದು ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ವಿಷಯ ಅತ್ಯಂತ ಖುಷಿ ತಂದಿತ್ತಿದೆ. ಶ್ರೀರಾಮನಿಗೂ ಕರ್ನಾಟಕಕ್ಕೂ ವಿಶೇಷವಾದ ಬಾಂಧವ್ಯವಿದೆ. ಹನುಮಂತನು ಕರ್ನಾಟಕದಲ್ಲೇ ಜನಿಸಿದ್ದು, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ'' ಎಂದು ಬಿ ವೈ ವಿಜಯೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
''ಅರುಣ್ ಯೋಗಿರಾಜ್ ಅವರು ಕೆತ್ತಿದ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ. ಅರುಣ್ ಯೋಗಿರಾಜ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
-
ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
— R. Ashoka (ಆರ್. ಅಶೋಕ) (@RAshokaBJP) January 1, 2024 " class="align-text-top noRightClick twitterSection" data="
ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ… pic.twitter.com/vsxU5Apqou
">ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
— R. Ashoka (ಆರ್. ಅಶೋಕ) (@RAshokaBJP) January 1, 2024
ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ… pic.twitter.com/vsxU5Apqouಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ.
— R. Ashoka (ಆರ್. ಅಶೋಕ) (@RAshokaBJP) January 1, 2024
ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ… pic.twitter.com/vsxU5Apqou
ಕರುನಾಡಿನ ಹೆಮ್ಮೆಯ ಶಿಲ್ಪಿಗೆ ಅಭನಂದನೆಗಳು- ಆರ್. ಅಶೋಕ್: ''ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಬಾಲ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ಆಯ್ಕೆಯಾಗಿದೆ. ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ. ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ. ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿಗೆ ಹೃದಯ ಪೂರ್ವಕ ಅಭನಂದನೆಗಳು'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
51 ಇಂಚಿನ ಬಾಲ ಶ್ರೀರಾಮನ ವಿಗ್ರಹ ಆಯ್ಕೆ: 51 ಇಂಚಿನ ಐದು ವರ್ಷದ ಬಾಲ ರಾಮನ ರೂಪದಲ್ಲಿ ಭಗವಾನ್ ರಾಮನ ಅದ್ಭುತವಾಗಿ ರಚಿಸಲಾದ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ" ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
''ರಾಮನ ವಿಗ್ರಹದ ಕಣ್ಣುಗಳನ್ನು ಕಮಲದ ದಳಗಳನ್ನು ಹೋಲುತ್ತಿದ್ದು, ಬಾಲ ರಾಮ ಮುಖವು ಚಂದ್ರನಂತೆ ಹೊಳೆಯುತ್ತದೆ. ಬಾಲ ರಾಮ ಉದ್ದನೆಯ ತೋಳುಗಳು ಗಮನ ಸೆಳೆಯುತ್ತದೆ. ತುಟಿಗಳ ಮೇಲೆ ಪ್ರಶಾಂತವಾದ ನಗುವಿದೆ. ರಾಮ ಲಲ್ಲಾ ಮೂರ್ತಿಯು ಅಂತರ್ಗತ ದೈವಿಕ ಪ್ರಶಾಂತತೆಯ ನೋಟವು ಕಣ್ಮನ ಸೆಳೆಯುತ್ತದೆ. ಆಕರ್ಷಕವಾಗಿ ಕೆತ್ತಲಾದ ವಿಗ್ರಹದಲ್ಲಿ ರಾಜ ದಶರಥನ ಪುತ್ರ ಮತ್ತು ವಿಷ್ಣುವಿನ ಅವತಾರವನ್ನು ನೋಡಬಹುದು. ರಾಮನ ಮಂದಿರದ ಗರ್ಭಗುಡಿಯಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಈ ಮೂರ್ತಿಯನ್ನು ಪ್ರತಿಷ್ಠಾಪಿಸುವ ದೇವಾಲಯದ ಭಾಗ ಕೂಡ ಸಿದ್ಧವಾಗಿದೆ'' ಎಂದು ಚಂಪತ್ ರೈ ವಿವರಿಸಿದ್ದಾರೆ.
ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿದ 51 ಇಂಚಿನ ವಿಗ್ರಹ ಆಯ್ಕೆ ಪ್ರಕ್ರಿಯಲ್ಲಿ ಇದ್ದಿದ್ದರಿಂದ, ಇದೇ ವಿಗ್ರಹ ಆಯ್ಕೆ ಆಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ: 51 ಇಂಚಿನ ಎತ್ತರದ 5 ವರ್ಷದ ರಾಮ ಲಲ್ಲಾ ವಿಗ್ರಹ ಸ್ಥಾಪನೆಗೆ ನಿರ್ಧಾರ: ದೇವಾಲಯ ಟ್ರಸ್ಟ್