ETV Bharat / state

"ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ" ಬಿಜೆಪಿಯ ಹೊಸ ಧ್ಯೇಯವಾಕ್ಯ: ಕಾಂಗ್ರೆಸ್ ಟೀಕೆ - ETv Bharat kannada news

ರೌಡಿಗಳ ಮೇಲೆ ರಾಜ್ಯ ಬಿಜೆಪಿ ನಾಯಕರ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಟೀಕೆ ಮಾಡಿದೆ.

"By rowdies, for rowdies, for rowdies" BJP's new motto: Congress
"ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ" ಬಿಜೆಪಿಯ ಹೊಸ ಧ್ಯೇಯವಾಕ್ಯ: ಕಾಂಗ್ರೆಸ್
author img

By

Published : Dec 4, 2022, 10:54 PM IST

Updated : Dec 5, 2022, 6:31 AM IST

ಬೆಂಗಳೂರು : ರಾಜ್ಯ ಬಿಜೆಪಿ ನಾಯಕರು ರೌಡಿಗಳ ಪರ ಮಾತನಾಡುತ್ತಿದ್ದು, ರೌಡಿಗಳ ಮೇಲೆ ಇವರಿಗೆ ಪ್ರೇಮ ಉಕ್ಕಿ ಹರಿಯುತ್ತಿದೆ ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ. ಬಿಜೆಪಿ ರೌಡಿ ಮೋರ್ಚಾ ಸೇರಲು ಬೇಡಿಕೆ ಹೆಚ್ಚುತ್ತಿದೆ, ಒಬ್ಬರ ಮೇಲೆ ಒಬ್ಬರಂತೆ ಬಿಜೆಪಿ ನಾಯಕರು ರೌಡಿಗಳ ಸಮರ್ಥನೆಗೆ ಇಳಿದಿರುವಾಗ ರಾಜ್ಯ ಬಿಜೆಪಿ ರೌಡಿ ಮೋರ್ಚಾದ ಉದ್ಘಾಟನೆ ಯಾವಾಗ? ಎಂದು ಕಾಂಗ್ರೆಸ್​ ಟ್ಟೀಟ್ ಮೂಲಕ ಪ್ರಶ್ನಿಸಿದೆ.

"ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ" ಬಿಜೆಪಿಯ ಹೊಸ ಧ್ಯೇಯವಾಕ್ಯ: ಕಾಂಗ್ರೆಸ್

ಉದ್ಘಾಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬರುವರೇ, ಅಥವಾ ಬೊಮ್ಮಾಯಿಯವರೇ ಟೇಪ್ ಕಟ್ ಮಾಡುತ್ತಾರಾ? ರೌಡಿಗಳನ್ನು ರೌಡಿಗಳೆನ್ನಬೇಡಿ - ಇದು ಮಾಜಿ ರೌಡಿ ಶೀಟರ್ ಸಿ ಟಿ ರವಿ ಫರ್ಮಾನು! ರೌಡಿ ಮೋರ್ಚಾದ ತಯಾರಿ ನಡೆಸಿರುವ ಬಿಜೆಪಿ ಈಗ ರೌಡಿಗಳ ಪರವಾಗಿ ನಿರ್ಲಜ್ಜವಾಗಿ ಸಮರ್ಥನೆಗೆ ಇಳಿದಿದೆ, ತಾವೂ ರೌಡಿಗಳಾಗಿದ್ದೆವು ಎಂಬುದನ್ನೂ ಒಪ್ಪುತ್ತಿದ್ದಾರೆ! "ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ" ಇದು ಬಿಜೆಪಿಯ ಹೊಸ ದ್ಯೇಯವಾಕ್ಯ ಎಂದಿದೆ.

If you join the BJP, even the sociopaths get the title of social worker
ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು
BJP rowdy morcha force
ಬಿಜೆಪಿಯ ರೌಡಿ ಮೋರ್ಚಾ ಪಡೆ

ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಆಶಯಗಳನ್ನು ಮುಗಿಸಲೆಂದೇ ಬಿಜೆಪಿ ರೌಡಿ ಮೋರ್ಚಾ ಕಟ್ಟುತ್ತಿದೆ. ಸಾಂವಿಧಾನಿಕ ಆಶಯದ ಮಾದರಿಯಲ್ಲಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದೆ ಬಿಜೆಪಿಯ ರೌಡಿ ಮೋರ್ಚಾ ಪಡೆ. ಇಂತಹ ಹಲ್ಲೆಗಳನ್ನು ಹೆಚ್ಚಿಸಲೆಂದೇ ರೌಡಿ ಮೋರ್ಚಾ ಕಟ್ಟುತ್ತಿದ್ದೀರಾ ಬಿಜೆಪಿ? ಬಿಜೆಪಿ ಸೇರಿದರೆ ಸಮಾಜಘಾತುಕರಿಗೂ ಸಮಾಜ ಸೇವಕರ ಬಿರುದು ನೀಡಲಾಗುತ್ತದೆ ಎಂಬುದಕ್ಕೆ ಸಂಸದ ಪ್ರತಾಪ್ ಸಿಂಹ ಅವರ ರೌಡಿಗಳ ಪರ ಸಮರ್ಥನೆಯೇ ಸಾಕ್ಷಿ. ಕೊಲೆ, ಸುಲಿಗೆ, ದರೋಡೆ ಮಾಡಿದವರಿಗೆ ರೆಡ್ ಕಾರ್ಪೆಟ್ ಹಾಕುತ್ತಿರುವ ಬಿಜೆಪಿ ನಿರ್ಲಜ್ಜತನದ ಪರಮಾವಧಿಯನ್ನು ತಲುಪಿದೆ. ಬಿಜೆಪಿಯ ಅಸಲಿ ಸಂಸ್ಕೃತಿ ಬೆತ್ತಲಾಗಿದೆ ಎಂದು ಕಾಂಗ್ರೆಸ್​ ಹರಿಹಾಯ್ದಿದೆ.

ಇದನ್ನೂ ಓದಿ :ರೌಡಿ ಶೀಟರ್ ವಿವಾದಕ್ಕೆ ತತ್ತರಿಸಿದ ಬಿಜೆಪಿ ನಾಯಕರು: ಸಮರ್ಥನೆ, ಸ್ಪಷ್ಟೀಕರಣದಿಂದ ಕೇಸರಿ ಪಡೆಯಲ್ಲಿ ಗೊಂದಲ

Last Updated : Dec 5, 2022, 6:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.