ETV Bharat / state

ಪ್ರಶಾಂತ್ ಮಾಡಾಳು ಅಮಾನತಿಗೆ ಜಲಮಂಡಳಿಗೆ ಸೂಚಿಸಲಾಗುವುದು: ಸಚಿವ ಮಾಧುಸ್ವಾಮಿ

ಲಂಚ ಪ್ರಕರಣ ಸರ್ಕಾರಕ್ಕೆ ಮುಜುಗರ ತರುವ ವಿಚಾರವೇ ಎಂದು ಜೆ.ಸಿ.ಮಾಧುಸ್ವಾಮಿ ಹೇಳಿದರು.

MADHUSWAMY
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ
author img

By

Published : Mar 9, 2023, 8:17 AM IST

Updated : Mar 9, 2023, 10:08 AM IST

ಪ್ರಶಾಂತ್ ಮಾಡಾಳು ಲಂಚ ಪ್ರಕರಣದ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಬೆಂಗಳೂರು : ಲಂಚ ಪ್ರಕರಣದಲ್ಲಿ ಸಿಲುಕಿರುವ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅವರನ್ನು ಇತ್ತೀಚೆಗೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಅಧಿಕಾರಿಯನ್ನು ಅಮಾನತು ಮಾಡಲು ಸಂಬಂಧ ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗುವುದು ಎಂದರು. ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಈ ಲಂಚ ಪ್ರಕರಣ ಸರ್ಕಾರಕ್ಕೆ ಮುಜುಗರ ತರುವ ವಿಚಾರವೇ. ಮುಜುಗರ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.

"ಆರೋಪಿ ಅಧಿಕಾರಿ 48 ತಾಸು ಪೊಲೀಸ್ ಬಂಧನದಲ್ಲಿದ್ದರೆ ನಿಯಮದಂತೆ ಅಮಾನತು ಮಾಡಬೇಕು. ಮಾಡಿಲ್ಲ ಎಂದರೆ ಜಲಮಂಡಳಿಗೆ ಸೂಚನೆ‌ ನೀಡುತ್ತೇವೆ. ಬೆಂಗಳೂರು ಜಲಮಂಡಳಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ಕ್ರಮ ಕೈಗೊಂಡಿಲ್ಲ ಎಂದಾದರೆ ಶಿಸ್ತು ಕ್ರಮ ಕೈಗೊಳ್ಳುವಂತೆ ಹೇಳಲಾಗುವುದು" ಎಂದು ಸ್ಪಷ್ಟಪಡಿಸಿದರು.

ಲೋಕಾಯುಕ್ತ ಸಂಸ್ಥೆ ಸ್ವಾಯತ್ತ: "ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಸಮರ್ಥವಾಗಿ ವಾದ ಮಂಡಿಸಲು ವಕೀಲರ ನೇಮಕಾತಿ ಮಾಡದ ಕುರಿತು ಚರ್ಚೆಯಾಗುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇದಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಲೋಕಾಯುಕ್ತದಿಂದ ವಕೀಲರ ನೇಮಕ ಮಾಡುವುದಕ್ಕೂ ಸರ್ಕಾರಕ್ಕೂ ಏನೂ ಸಂಬಂಧ ಇಲ್ಲ. ಅದಕ್ಕೆ ಸರ್ಕಾರ ಪ್ರತಿಕ್ರಿಯಿಸುವುದಿಲ್ಲ. ಲೋಕಾಯುಕ್ತಕ್ಕೆ ಸೇರಿದ ವಿಚಾರವಾಗಿದ್ದು ನಾವು ನಿರ್ದೇಶನ ಮಾಡಲು ಸಾಧ್ಯವೇ?. ಲೋಕಾಯುಕ್ತ ಸಂಸ್ಥೆಯೇ ಇದನ್ನು ನೋಡಿಕೊಳ್ಳಲಿದೆ. ಆ ಸಂಸ್ಥೆ ಸ್ವಾಯತ್ತವಾಗಿದ್ದು, ಸರ್ಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ" ಎಂದು ಹೇಳಿದರು.

ನೆರೆ ರಾಜ್ಯ ತಮಿಳುನಾಡು ಕಾವೇರಿ ನದಿನೀರು ವಿಚಾರವಾಗಿ ಪ್ರತಿವರ್ಷ ಒಂದಲ್ಲೊಂದು ಕ್ಯಾತೆ ತೆಗೆಯುತ್ತಿರುತ್ತದೆ. ಪ್ರಕರಣ ಸಂಬಂಧ ವಾದ ಮಂಡಿಸಲು ಸರ್ಕಾರ ವಕೀಲರ ನೇಮಕಾತಿ ಮಾಡಲಿದೆ. ‌ ಇನ್ನು, ಎಸ್‌ಸಿ ಒಳಮೀಸಲಾತಿ ಕುರಿತು ಸಂಪುಟ ಉಪಸಮಿತಿಯು ತನ್ನ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿಲ್ಲ ಎಂದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಸಂಜಯನಗರ ನಿವಾಸಕ್ಕೆ ಲೋಕಾಯುಕ್ತ ಪೊಲೀಸರು ಆಗಮಿಸಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಇನ್ಸ್‌ಪೆಕ್ಟರ್ ಮಹದೇವಯ್ಯ ನೇತೃತ್ವದ ಅಧಿಕಾರಿಗಳ ತಂಡ ಮಾಡಾಳ್ ನಿವಾಸಕ್ಕೆ ಬಂದು ಪರಿಶೀಲನೆ ನಡೆಸಿದೆ.

ಇಂದು ವಿಚಾರಣೆ: ಷರತ್ತುಬದ್ದ ನಿರೀಕ್ಷಣಾ ಜಾಮೀನು ಪಡೆದಿರುವ ಮಾಡಾಳ್ ವಿರೂಪಾಕ್ಷಪ್ಪ 48 ಗಂಟೆಗೊಳಗಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕೆಂದು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಿಲ ಇಂದು ಅವರು ಲೋಕಾಯುಕ್ತ ಕಚೇರಿಗೆ ಹಾಜರಾಗುವ ಸಾಧ್ಯತೆ ಇದೆ.

ಇನ್ನು ಈಗಾಗಲೇ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ವಿರೂಪಾಕ್ಷಪ್ಪ ಮಾಡಾಳ್ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣ ರಾಷ್ಟ್ರದ ಗಮನ ಸೆಳೆದಿದ್ದು, ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ ಸೇರಿದಂತೆ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಟೀಕಾಸಮರ ನಡೆಸುತ್ತಿವೆ.

ಇದನ್ನೂ ಓದಿ: ನಮ್ಮನ್ನು ಜೈಲಿಗೆ ಕಳುಹಿಸುವುದರಲಿ, ಕಾಂಗ್ರೆಸ್ಸಿಗರು ಜೈಲಿಗೆ ಹೋಗುವುದರಿಂದ ಮೊದಲು ತಪ್ಪಿಸಿಕೊಳ್ಳಲಿ: ಸಿಎಂ

Last Updated : Mar 9, 2023, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.