ETV Bharat / state

ಹಬ್ಬಕ್ಕೆ ತವರೂರುಗಳಿಗೆ ಹೋಗುವ ಆತುರ.. ಸಿಕ್ಕಂಗೆ ಸುಲಿಯುತ್ತಿರುವ ಖಾಸಗಿ ಬಸ್​ಗಳು..

ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರೂ ಇಲ್ಲದಂತಾಗಿದೆ. ಈಗಾಗಲೇ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿರುವ ವರದಿಗಳು ಕೇಳಿ ಬರುತ್ತಿವೆ..

private bus
ಖಾಸಗಿ ಬಸ್
author img

By

Published : Sep 8, 2021, 8:18 PM IST

Updated : Sep 8, 2021, 8:33 PM IST

ಬೆಂಗಳೂರು : ಬರುವ ಶುಕ್ರವಾರ, ಶನಿವಾರ ಮತ್ತು ಭಾನುವಾರ ಸತತ ಮೂರು ದಿನಗಳ ಸಾಲು ಸಾಲು ರಜೆಗಳಿರುವುದರಿಂದ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಸ್ ಪ್ರಯಾಣ ದರ ಏರಿಕೆಯಿಂದ ಶಾಕ್ ಆಗಿದೆ.

ನಗರದಿಂದ ಹೊರಡುವ ಖಾಸಗಿ ಬಸ್​ಗಳು ಟಿಕೆಟ್ ದರವನ್ನು ಏರಿಕೆ ಮಾಡಿ ಮಾರಾಟ ಮಾಡುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಜನಸಾಮಾನ್ಯರ ಗತಿಯೇನಾಗುತ್ತದೆ ಎನ್ನುವ ಪ್ರಶ್ನೆ ಎದುರಾಗಿದೆ.

ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು ಇಲ್ಲದಂತಾಗಿದೆ. ಈಗಾಗಲೇ ಖಾಸಗಿ ಬಸ್​​ಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿರುವ ವರದಿ ಕೇಳಿ ಬರುತ್ತಿವೆ. ಗೌರಿ ಗಣೇಶ ಹಬ್ಬಕ್ಕೆ ಖಾಸಗಿ ಬಸ್ ದರ್ಬಾರ್ ಶುರುವಾದಂತಾಗಿದೆ. ಹಬ್ಬಗಳ ಸೀಸನ್​ನಲ್ಲಿ ದಿಢೀರಾಗಿ ಬಸ್​ ಟಿಕೆಟ್ ದರ ಏರಿಕೆ ಮಾಡುವುದರಿಂದ ಜನ ಕಂಗಾಲಾಗಿದ್ದಾರೆ.

ನಗರದಿಂದ ಹೊರಡುವ ಖಾಸಗಿ ಬಸ್​ಗಳ ಟಿಕೆಟ್ ದರದ ಪಟ್ಟಿ ಈ ಕೆಳಕಂಡಂತಿದೆ.

ನಗರ ಹಬ್ಬದ ದರ ಹಿಂದಿನ ದರ
ಉಡುಪಿ ₹1,400 - 1,800 700 - 750
ಬೆಳಗಾವಿ ₹1,100 - 1, 300 800 - 900
ಧಾರವಾಡ ₹900 - 1,100 600 - 650
ಮಂಗಳೂರು ₹1,000 -1,300700 - 800
ಹುಬ್ಬಳ್ಳಿ ₹1,200 - 1,500 750 - 800
ಕಲಬುರ್ಗಿ ₹1,200 - 1,550 800 - 900

ಓದಿ: ಕನ್ನಡ ಭಾಷೆ ಹೀಗಳೆದಿದ್ದ ಗೂಗಲ್ ಕ್ಷಮೆ ಯಾಚನೆ : ಮಾನನಷ್ಟ ಅರ್ಜಿ ಹಿಂಪಡೆದ ಅರ್ಜಿದಾರರು

Last Updated : Sep 8, 2021, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.