ETV Bharat / state

ಡೇಟಿಂಗ್‌ ಸುಂದರಿ ಮೋಡಿಗೆ ಏಳು ಲಕ್ಷ ಕಳೆದುಕೊಂಡ ಬೆಂಗಳೂರು ಬಿಲ್ಡರ್.. ದೂರು ದಾಖಲು - ಬೆಂಗಳೂರು ಬಿಲ್ಡರ್ ವಂಚನೆ

ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾಗಿ, ಬಳಿಕ ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಬಿಲ್ಡರ್​ವೊಬ್ಬರನ್ನ ಬೆದರಿಸಿ ಮಹಿಳೆಯೊಬ್ಬಳು ಹಂತ ಹಂತವಾಗಿ ಏಳು ಲಕ್ಷ ರೂ. ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡೇಟಿಂಗ್‌
bengaluru
author img

By

Published : Aug 25, 2022, 10:10 AM IST

Updated : Aug 25, 2022, 10:50 AM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಆ್ಯಪ್‌ ಸರ್ವೇ ಸಾಮಾನ್ಯವಾಗಿದೆ. ಡೇಟಿಂಗ್ ಆ್ಯಪ್​ ಹುಚ್ಚಿಗೆ ಬಿದ್ದ ಬಿಲ್ಡರ್ ಒಬ್ಬನನ್ನು ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

ಬಿಲ್ಡರ್​ವೊಬ್ಬರನ್ನ ಬೆದರಿಸಿ ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ ಹಂತ ಹಂತವಾಗಿ ಏಳು ಲಕ್ಷ ರೂ. ಸುಲಿಗೆ ಮಾಡಿದ್ದಾಳೆ. 2019 ರಲ್ಲಿ ಬಿಲ್ಡರ್​ಗೆ ಒಕೆಸಿ ಡೇಟಿಂಗ್ ಆ್ಯಪ್​ನಲ್ಲಿ ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ ಪರಿಚಯವಾಗಿದ್ದು, ನಂತರ ಇಬ್ಬರು ವಾಟ್ಸ್​ಆ್ಯಪ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು. ಬಳಿಕ ಇಬ್ಬರು ಶಿರಡಿ, ತಿರುಪತಿ ಎಂದು ಸುತ್ತಾಡಿದ್ದಾರೆ. ಈ ವೇಳೆ, ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದ್ದು, ನಂತರ ವಂಚಕಿ ತನ್ನ ಅಸಲಿ ಆಟ ಶುರು ಮಾಡಿದ್ದಾಳೆ.

ಇದನ್ನೂ ಓದಿ: ಕೆಎಂಎಫ್​ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಕೇಸ್​: ಮತ್ತೆ ಮೂವರ ಬಂಧನ

ತಮ್ಮಿಬ್ಬರ ಅಶ್ಲೀಲ ವಿಡಿಯೋ, ಫೋಟೋ ಇಟ್ಟುಕೊಂಡು ಇದನ್ನ ನಿಮ್ಮ ಮನೆಯವರಿಗೆ ಹಾಗೂ ಫೇಸ್​ಬುಕ್​ನಲ್ಲಿ ಹಾಕ್ತಿನಿ ಎಂದು ಬೆದರಿಕೆ ಹಾಕಿ, ಹಂತ ಹಂತವಾಗಿ 7 ಲಕ್ಷ ಸುಲಿಗೆ ಮಾಡಿದ್ದಾಳೆ. ಮಹಿಳೆಗೆ ಈ ಹಿಂದೆ ಡಿವೋರ್ಸ್ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೀಗೆ ಹಣ ಪೀಕಿದ್ದಾಳೆ ಎನ್ನಲಾಗಿದೆ.

ಮರ್ಯಾದೆಗೆ ಅಂಜಿ ಬಿಲ್ಡರ್ ಸಹ ಆಕೆ ಕೇಳಿದಾಗಲೆಲ್ಲಾ ಹಣ ನೀಡುತ್ತಲೇ ಬಂದಿದ್ದ. ಜೊತೆಗೆ ತನಗೊಂದು ಹೊಸ ಫ್ಲಾಟ್ ಹಾಗೂ ಮತ್ತಷ್ಟು ಹಣ ಕೊಡಬೇಕೆಂದು ಮತ್ತೆ ಬೇಡಿಕೆ ಇಟ್ಟಾಗ ಬೇಸತ್ತ ಬಿಲ್ಡರ್ ಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಗ್ರಿಂಡರ್ ಗೇ ಆ್ಯಪ್ ಮೂಲಕ ವಂಚನೆ, ದರೋಡೆ ಮಾಡುತ್ತಿದ್ದ ಗ್ಯಾಂಗ್‌ ಅರೆಸ್ಟ್

Last Updated : Aug 25, 2022, 10:50 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.