ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಟ ಜಗ್ಗೇಶ್ 78 ನೇ ವರ್ಷದ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಬೊಮ್ಮಾಯಿ, ಮುಂದಿನ ಮೂರು ವರ್ಷದಲ್ಲಿ ಕರ್ನಾಟಕವನ್ನು ದೇಶದಲ್ಲಿ ಅಗ್ರಮಾನ್ಯ ಸ್ಥಾನಕ್ಕೆ ತರಲು ಯಡಿಯೂರಪ್ಪನವರು ಸಂಕಲ್ಪ ಮಾಡಿದ್ದಾರೆ ಎಂದರು.
ನಟ ಜಗ್ಗೇಶ್ ಮಾತನಾಡಿ, ರಾಜ್ಯದ ಎಲ್ಲ ವರ್ಗದ ಜನರ ನಾಯಕರಾಗಿರುವ ಯಡಿಯೂರಪ್ಪನವರ ಶಕ್ತಿ ಇಂದಿನ ಯುವಕರಿಗೆ ಕೂಡಾ ಇಲ್ಲ. ಅಷ್ಟೊಂದು ಅಗಾಧವಾದ ಆತ್ಮಸ್ಥೈರ್ಯವನ್ನು ಅವರು ಹೊಂದಿದ್ದಾರೆ. ಎಂದರು.