ETV Bharat / state

ನಾಳೆ ಚಾ.ನಗರಕ್ಕೆ ಬಿಎಸ್​ವೈ: ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ಕುಟುಂಬ ಸದಸ್ಯರ ಭೇಟಿ - chamarajanagar update

ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ ರವಿ ನಿವಾಸಕ್ಕೆ ನಾಳೆ ಮಾಜಿ ಸಿಎಂ ಯಡಿಯೂರಪ್ಪ ಅವರು ಭೆಟಿ ನೀಡಲಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

BSY visits chamarajanagar tomorrow
ನಾಳೆ ಚಾ.ನಗರಕ್ಕೆ ಬಿಎಸ್​ವೈ
author img

By

Published : Jul 29, 2021, 4:50 PM IST

Updated : Jul 29, 2021, 7:26 PM IST

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್​ವೈ ರಾಜೀನಾಮೆ ನೀಡಿ ಭಾವುಕ ಕ್ಷಣವನ್ನು ಕಂಡು ಆತ್ಮಹತ್ಯೆಗೆ ಶರಣಾಗಿದ್ದ ಅವರ ಅಭಿಮಾನಿ ರವಿ ನಿವಾಸಕ್ಕೆ ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ
ಆತ್ಮಹತ್ಯೆಗೆ ಶರಣಾಗಿದ್ದ ಅಭಿಮಾನಿ

ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಗುಂಡ್ಲುಪೇಟೆಗೆ ಬಿಎಸ್​ವೈ ತೆರಳಲಿದ್ದು, ಮಧ್ಯಾಹ್ನ 12 ಗಂಟೆಗೆ ಬೊಮ್ಮಲಾಪುರದಲ್ಲಿರುವ ಅಭಿಮಾನಿ ಹಾಗು ಬಿಜೆಪಿ ಕಾರ್ಯಕರ್ತ ರವಿ ಮನೆಗೆ ಭೇಟಿ ನೀಡಲಿದ್ದಾರೆ.

BSY ಪದತ್ಯಾಗ, ಅಭಿಮಾನಿ ಪ್ರಾಣ ತ್ಯಾಗ.. ಕಂಬನಿ ಮಿಡಿದ ಯಡಿಯೂರಪ್ಪ

ಮಧ್ಯಾಹ್ನ 1:30ಕ್ಕೆ ಗುಂಡ್ಲುಪೇಟೆಯಿಂದ ಹೊರಟು ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ವಾಪಸಾಗಲಿದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ‌ ಬೇಸರದಲ್ಲಿದ್ದ ರವಿ ಸೋಮವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ಅಭಿಮಾನಿಯ ಆತ್ಮಹತ್ಯೆಗೆ ಅತೀವ ಬೇಸರ ವ್ಯಕ್ತಪಡಿಸಿದ್ದ ಯಡಿಯೂರಪ್ಪ ಯಾರೂ ಇಂತಹ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಟ್ವೀಟ್ ಮೂಲಕ ಮನವಿ ಮಾಡಿದ್ದರು.

Last Updated : Jul 29, 2021, 7:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.