ಬೆಂಗಳೂರು: ನೆರೆ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ನೆರೆ ಪರಿಹಾರ ಕೇಳಲು ದೆಹಲಿಗೆ ತೆರಳಲು ಯಡಿಯೂರಪ್ಪರಿಗೆ ಸಮಯಾಕಾಶವೇ ಸಿಗಲ್ಲ. ಆದರೆ, ಅಮಿತ್ ಶಾ ಅವರ ಪ್ರಭಾವವನ್ನು ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲ, ಅನರ್ಹ ಶಾಸಕರನ್ನು ಬಚಾವ್ ಮಾಡಿಸುವುದಕ್ಕೆ ದೆಹಲಿಗೆ ತೆರಳಲು ನಮ್ಮ ಮುಖ್ಯಮಂತ್ರಿಯವರಿಗೆ ಸಾಕಷ್ಟು ಸಮಯವಿದೆ ಎಂದು ಲೇವಡಿ ಮಾಡಿದ್ದಾರೆ.