ETV Bharat / state

4 ದಶಕದ ರಾಜಕೀಯ ಹೋರಾಟಗಾರ, ಶಾಸಕನಾಗಿ ಕಡೆಯ ಅಧಿವೇಶನ: ಸದನದಲ್ಲಿ ಬಿಎಸ್​ವೈಗೆ ಗೌರವಪೂರ್ವಕ ವಿದಾಯ? - ಬಿಎಸ್​​ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು

ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಳಿನ ಅಧಿವೇಶನ ಕಡೆಯದಾಗಿರಲಿದೆ. ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದ ಖ್ಯಾತಿ ಹೊಂದಿರುವ ಇವರ ಸುದೀರ್ಘ ರಾಜಕೀಯ ಜೀವನ ಇಲ್ಲಿದೆ.

ಬಿಎಸ್​ವೈ
ಬಿಎಸ್​ವೈ
author img

By

Published : Feb 9, 2023, 6:21 PM IST

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯಸ್ಸು ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲುತ್ತದೆ. ನಾಲ್ಕು ದಶಕದ ಚುನಾವಣಾ ರಾಜಕೀಯದಲ್ಲಿ ಹೋರಾಟದ ಮೂಲಕವೇ ಮನೆ ಮಾತಾಗಿರುವ ಬಿಎಸ್​​ವೈ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ನಾಳೆಯಿಂದ ಆರಂಭಗೊಳ್ಳಲಿರುವ ಜಂಟಿ ಅಧಿವೇಶನ ಯಡಿಯೂರಪ್ಪ ಅವರ ಕೊನೆಯ ಅಧಿವೇಶನವಾಗಲಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದಿದ್ದ ಬಿಎಸ್ವೈ, ಸದನದಲ್ಲಿ ಗೌರವಪೂರ್ವಕ ವಿದಾಯವನ್ನು ಎದುರು ನೋಡುತ್ತಿದ್ದಾರೆ.

ರಾಜ್ಯ ರಾಜಕೀಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗಿದು ಕಡೆಯ ಅಧಿವೇಶನ. 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಅವರು ಘೋಷಣೆ ಮಾಡಿರುವುದರಿಂದ ನಾಳೆಯಿಂದ ಆರಂಭಗೊಳ್ಳಲಿರುವ ಅಧಿವೇಶನವೇ ಯಡಿಯೂರಪ್ಪ ಅವರಿಗೆ ಕಡೆಯ ಅಧಿವೇಶನವಾಗಲಿದೆ. ಹಾಗಾಗಿ ಯಡಿಯೂರಪ್ಪ ಅವರಿಗೆ ಸದನದಲ್ಲಿ ಅಭಿನಂದನಾ ನುಡಿಗಳನ್ನಾಡಿ ಗೌರವಪೂರ್ವಕ ವಿದಾಯ ಹೇಳುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಬಿಜೆಪಿ ನಾಯಕರು ಒಲವು ವ್ಯಕ್ತಪಡಿಸಿದ್ದು, ಬಜೆಟ್ ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರಿಗೆ ವಿದಾಯದ ನುಡಿಗಳನ್ನಾಡಿ ಗೌರವ ಸಲ್ಲಿಸಲಾಗುತ್ತದೆ.

ಬಿಎಸ್​ವೈ ರಾಜಕೀಯ ಹಾದಿ: 1983ರಲ್ಲಿ ಮೊದಲ ಬಾರಿ ಶಾಸನ ಸಭೆ ಪ್ರವೇಶಿಸಿದ್ದ ಯಡಿಯೂರಪ್ಪ 1999ರ ಚುನಾವಣೆ ಹೊರತುಪಡಿಸಿ 2018ರವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಶಿಕಾರಿಪುರ ಕ್ಷೇತ್ರದಿಂದ ಆಯ್ಕೆಯಾಗುತ್ತಲೇ ಬಂದಿದ್ದಾರೆ. 1983, 1985, 1989, 1994 ರವರೆಗೆ ಸತತವಾಗಿ ನಾಲ್ಕು ಬಾರಿ ಗೆದ್ದು ಜನಪ್ರಿಯತೆ ಗಳಿಸಿದ್ದಾರೆ. ಮೊದಲ ಬಾರಿ ಬಿಜೆಪಿ ಪ್ರತಿಪಕ್ಷದ ಸಾಲಿಗೆ ಬರುವಂತೆ ಮಾಡುವಲ್ಲಿ ಅವರು ಸಫಲರಾಗಿದ್ದರು. ಅಲ್ಲದೇ, ಪ್ರತಿಪಕ್ಷದ ನಾಯಕರಾಗಿಯೂ ಸಾಕಷ್ಟು ಸದ್ದು ಮಾಡಿ, ವರ್ಚಸ್ಸು ದಿಲ್ಲಿ ಮುಟ್ಟುವಂತೆ ಮಾಡಿದ್ದರು. ಆದರೆ, ನಂತರ ನಡೆದ 1999ರ ಚುನಾವಣೆ ಮೊದಲ ಬಾರಿಗೆ ಯಡಿಯೂರಪ್ಪಗೆ ಸೋಲಿನ ರುಚಿ ತೋರಿಸಿದ ಚುನಾವಣೆಯಾಯಿತು. ರಾಷ್ಟ್ರಮಟ್ಟದಲ್ಲಿ ಎನ್​ಡಿಎ ಮೈತ್ರಿಕೂಟದ ಜೊತೆ ಜೆಡಿಯು ಸೇರಿದ್ದರಿಂದಾಗಿ ರಾಜ್ಯದಲ್ಲಿಯೂ ಬಿಜೆಪಿ, ಜೆಡಿಯು ಹೊಂದಾಣಿಕೆ ಮಾಡಿಕೊಂಡು ಚುನಾವಣೆಗೆ ಸ್ಪರ್ಧೆ ಮಾಡಿತು. ಅದರ ಪರಿಣಾಮ ಎನ್ನುವಂತೆ ಯಡಿಯೂರಪ್ಪ ಸೋತಿದ್ದು ಇತಿಹಾಸ.

ನಂತರ 2004ರಲ್ಲಿ ನಡೆದ ಚುನಾವಣೆಯಲ್ಲಿ ಕಮ್ ಬ್ಯಾಕ್ ಮಾಡಿದ ಬಿಎಸ್ವೈ, ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮಾಡಲು ವಿಫಲರಾದರೂ ಕೂಡ ಅತಿ ದೊಡ್ಡ ಪಕ್ಷವನ್ನಾಗಿ ಗೆಲ್ಲಿಸಿಕೊಂಡು ಮತ್ತೊಮ್ಮೆ ಪ್ರತಿಪಕ್ಷದ ನಾಯಕರಾದರು. ಆದರೆ, ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪತನಗೊಂಡು ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರ ರಚನೆಯಾಯಿತು. ಕುಮಾರಸ್ವಾಮಿ ಸರ್ಕಾರದಲ್ಲಿ ಯಡಿಯೂರಪ್ಪ ಮೊದಲ ಬಾರಿ ಸರ್ಕಾರದ ಭಾಗವಾಗಿ ಉಪ ಮುಖ್ಯಮಂತ್ರಿಯಾದರು. 20-20 ಸರ್ಕಾರ 2006 ರಲ್ಲಿ ರಚನೆಯಾಯಿತು. 2008 ರಲ್ಲಿ ಒಪ್ಪಂದದಂತೆ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಅಧಿಕಾರ ಹಸ್ತಾಂತರ ಮಾಡದ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಜನತೆಯ ಮುಂದೆ ಹೋಗಿ ವಚನ ಭ್ರಷ್ಟತೆ ವಿಷಯ ಮುಂದಿಟ್ಟು ಚುನಾವಣೆ ಎದುರಿಸಿದರು. 2008ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಇದು ಯಡಿಯೂರಪ್ಪ ಪಾಲಿಗೆ ಬಹಳ ಮಹತ್ವದ ಚುನಾವಣೆಯಾಯಿತು. ಕಾರಣ, ಅಂದು ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಸಮಾಜವಾದಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕಣದಲ್ಲಿದ್ದರು. ಇಬ್ಬರು ಮಾಜಿ ಸಿಎಂಗಳ ಕಾಳಗ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಯಡಿಯೂರಪ್ಪನವರು 45, 000ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು.

ಸದನದಲ್ಲಿ ಬಿಎಸ್​ವೈಗೆ ಗೌರವಪೂರ್ವಕ ವಿದಾಯ?
ಬೊಮ್ಮಾಯಿ ಅವರೊಂದಿಗೆ ಬಿಎಸ್‌ವೈ

110 ಸ್ಥಾನ ಗಳಿಸಿದ ಬಿಜೆಪಿ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಿತು. ಯಡಿಯೂರಪ್ಪ 2008ರ ಮೇ 30 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಗಟ್ಟಿಗೊಳಿಸಿಕೊಂಡರು. ಆದರೆ, ಪಕ್ಷದಲ್ಲಿನ ಆಂತರಿಕ ಕಲಹದಿಂದ ಯಡಿಯೂರಪ್ಪ ಹೈರಾಣಾಗಬೇಕಾಯಿತು. ರೆಸಾರ್ಟ್ ರಾಜಕಾರಣದಿಂದ ಬಸವಳಿಯಬೇಕಾಯಿತು. ತನ್ನವರನ್ನೇ ಸಂಬಾಳಿಸಿಕೊಂಡ ಸರ್ಕಾರ ನಡೆಸುವ ಅನಿವಾರ್ಯತೆಗೆ ಬೀಳಬೇಕಾಯಿತು. ಪರಿಣಾಮ ಎಲ್ಲದಕ್ಕೂ ಹೈಕಮಾಂಡ್ ಕಡೆ ನೋಡುವ ಸ್ಥಿತಿಗೆ ಯಡಿಯೂರಪ್ಪ ಬರಬೇಕಾಯಿತು. ಎಲ್ಲವನ್ನೂ ನಿಭಾಯಿಸುತ್ತಿದ್ದಾಗಲೇ ಅಕ್ರಮ ಗಣಿಗಾರಿಕೆಗೆ ಸಂಬಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಹೈಕಮಾಂಡ್ ಯಡಿಯೂರಪ್ಪನವರಿಗೆ ಸೂಚಿಸಿತು.

ಕೆಜಿಪಿ ಸ್ಥಾಪಿಸಿದ ಬಿಎಸ್​ವೈ: ಬಳಿಕ ತಮ್ಮ ಪಕ್ಷದಲ್ಲಿ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಬೇಸತ್ತು 2011ರ ನವೆಂಬರ್ 30 ಶಾಸಕರ ಜೊತೆ ಬಿಜೆಪಿ ತೊರೆದರು . 2011ರ ಏಪ್ರಿಲ್‍ನಲ್ಲಿ ಕರ್ನಾಟಕ ಜನತಾ ಪಕ್ಷ ಎಂಬ ನೂತನ ಪಕ್ಷವನ್ನು ನೋಂದಾಯಿಸಿದರು. 2012ರಲ್ಲಿ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. 2013ರ ಮೇನಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾದರು. ಕೇವಲ 6 ಸ್ಥಾನ ಗಳಿಸಿದರೂ ಬಿಜೆಪಿಯನ್ನು ಸೋಲಿಸುವಲ್ಲಿ ಸಫಲರಾಗಿದ್ದರು. 6 ಸದಸ್ಯರನ್ನು ಇರಿಸಿಕೊಂಡೇ ಸದನದಲ್ಲಿ ಧರಣಿ ನಡೆಸಿ ಗಮನ ಸೆಳೆದಿದ್ದರು. ನಂತರ ಹೈಕಮಾಂಡ್ ನಲ್ಲಿ ಬದಲಾವಣೆಯಿಂದಾಗಿ ಮೋದಿ, ಅಮಿತ್ ಶಾ ಜೋಡಿ ಮುನ್ನಲೆಗೆ ಬಂದಿತು. ಪರಿಣಾಮ 2013 ರ ನವೆಂಬರ್ ನಲ್ಲಿ ಯಾವುದೇ ಷರತ್ತಿಲ್ಲದೇ ಬಿಜೆಪಿಗೆ ಹಿಂದಿರುಗುವುದಾಗಿ ಯಡಿಯೂರಪ್ಪ ಘೋಷಿಸಿದರು. 2014ರ ಜನವರಿ 2ಯಲ್ಲಿ ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಗೊಳಿಸಿದರು.

ನಂತರ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 3,63,305 ಅಂತರದಿಂದ ಜಯಗಳಿಸಿದರು. 2018ರ ಚುನಾವಣೆಗೆ ಸ್ಪರ್ಧಿಸಲು ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2018 ರಲ್ಲಿ 105 ಸ್ಥಾನಗಳಿಸಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಬಹುಮತಕ್ಕೆ ಬೇಕಾದ ಸ್ಥಾನ ಇರಲಿಲ್ಲ. ಆದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆಪರೇಷನ್ ಕಮಲದ ಮೂಲಕ ಬಹುಮತ ಸಾಬೀತಿಗೆ ಪ್ರಯತ್ನಿಸಿದರು. ಆದರೆ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಸುಪ್ರಿಂ ಕೋರ್ಟ್ ಕದ ತಟ್ಟಿದ್ದರಿಂದಾಗಿ ಯಡಿಯೂರಪ್ಪ ರಾಜೀನಾಮೆ ನೀಡಬೇಕಾಯಿತು. ಆದರೆ 2019ರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್ ನ 17 ಶಾಸಕರ ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಪತನವಾಗಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಯಿತು. 2019ರ ಜುಲೈ 26 ರಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದಾಗಿ 2 ವರ್ಷದ ಸರ್ಕಾರದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಆಪ್ತ ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದರು. 2022 ರ ಜುಲೈನಲ್ಲಿ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಡುವ ಘೋಷಣೆ ಮಾಡಿದರು.
ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಇರುವ ಯಡಿಯೂರಪ್ಪ ಅವರ ಸೇವೆ ಪರಿಗಣಿಸಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪರನ್ನು ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದೆ.

ಇದರ ನಡುವೆ 2021ರ ಸೆಪ್ಟಂಬರ್‌ನಲ್ಲಿ ಯಡಿಯೂರಪ್ಪಗೆ ಉತ್ತಮ ಶಾಸಕ ಪ್ರಶಸ್ತಿಯನ್ನು ಸದನದಲ್ಲಿ ಪ್ರದಾನಿಸಲಾಯಿತು. ಇದೀಗ ಯಡಿಯೂರಪ್ಪ ಶಾಸಕರಾಗಿ ತಮ್ಮ ಕೊನೆಯ ಅಧಿವೇಶನಕ್ಕೆ ನಾಳೆ ಆಗಮಿಸಲಿದ್ದಾರೆ. ಸದನದಲ್ಲಿ ಹಿರಿಯ ನಾಯಕರಿಗೆ ಅಭಿನಂದನೆ ಸಲ್ಲಿಕೆಯಾಗಲಿದೆ ಎನ್ನಲಾಗಿದೆ.

ಬಿಎಸ್ವೈ ಸಾಗಿಬಂದ ಹಾದಿ:

1972: ಶಿಕಾರಿಪುರ ತಾಲೂಕು ಜನ ಸಂಘದ ಅಧ್ಯಕ್ಷ
1975: ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ
1977: ಪುರಸಭೆ ಅಧ್ಯಕ್ಷರಾಗಿ ಆಯ್ಕೆ
1980: ಶಿಕಾರಿಪುರ ತಾಲೂಕು ಬಿಜೆಪಿ ಆಧ್ಯಕ್ಷರಾಗಿ ಆಯ್ಕೆ
1983: ಶಿಕಾರಿಪುರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ
1983: ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆ
1988: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ
1992: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ
1994: ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಆಯ್ಕೆ
1999: ಶಿಕಾರಿಪುರದಲ್ಲಿ ಮೊದಲ ಸೋಲು. ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿ ನೇಮಕ
2000: ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ
2004: ಐದನೇ ಬಾರಿ ಶಿಕಾರಿಪುರದಿಂದ ಗೆಲುವು. ಎರಡನೇ ಬಾರಿ ಪ್ರತಿಪಕ್ಷ ನಾಯಕನಾಗಿ ನೇಮಕ
2006: ಡಿಸಿಎಂ ಆಗಿ ಪ್ರಮಾಣ ವಚನ. ಹಣಕಾಸು, ಅಬಕಾರಿ ಖಾತೆ ನಿರ್ವಹಣೆ
2007: ಏಳು ದಿನ ಮುಖ್ಯಮಂತ್ರಿಯಾಗಿ ಕಾರ್ಯಭಾರ
2008: ಶಿಕಾರಿಪುರದಲ್ಲಿ ಆರನೇ ಬಾರಿ ಗೆಲುವು. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2011: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ
2012: ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಬಿಎಸ್ವೈ
2013: ಶಿಕಾರಿಪುರದಿಂದ ಕೆಜೆಪಿ ಅಭ್ಯರ್ಥಿಯಾಗಿ ಗೆಲುವು. ಏಳನೇ ಬಾರಿ ಶಾಸನ ಸಭೆ ಪ್ರವೇಶ
2014: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿ ಸೇರ್ಪಡೆ, ಶಿವಮೊಗ್ಗ ಸಂಸತ್ ಸದಸ್ಯರಾಗಿ ಆಯ್ಕೆ
2014: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆ
2018: ಶಿಕಾರಿಪುರದಿಂದ ಎಂಟನೇ ಬಾರಿ ಆಯ್ಕೆ. 2 ದಿನ ಮುಖ್ಯಮಂತ್ರಿ ಸ್ಥಾನ ಅಲಂಕಾರ
2019: ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2021: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

ಇದನ್ನೂ ಓದಿ: ಪುಣ್ಯಕೋಟಿ ಗೋ ದತ್ತು ಯೋಜನೆಗೆ ಇನ್ನೂ ಸಿಗದ ಜನಸ್ಪಂದನೆ: ಯೋಜನೆ ಮೇಲೆ ಶಾಸಕರಿಗೇ ಇಲ್ಲದ ಕಾಳಜಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.