ETV Bharat / state

ನಗು ಮೊಗದಿಂದ ಸಭೆಗೆ ಆಗಮಿಸಿದ ಬಿಎಸ್​ವೈ: ಇಂದು ರೆಸಾರ್ಟ್​ನಲ್ಲೇ ವಾಸ್ತವ್ಯ

ರಮಡ ರೆಸಾರ್ಟ್​ನಲ್ಲಿ ತಂಗಿರುವ ಶಾಸಕರೊಂದಿಗೆ ಇಂದು ಬಿಎಸ್​ವೈ ಸಭೆ ನಡೆಸಲು ಹೋಟೆಲ್​ಗೆ ಆಗಮಿಸಿದ್ದು, ಇಂದು ಅಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆಗಳಿವೆ.

ನಗುಮೊಗದಿಂದ ಸಭೆಗೆ ಆಗಮಿಸಿದ ಬಿಎಸ್​ವೈ: ಇಂದು ರೆಸಾರ್ಟ್​ನಲ್ಲೆ ವಾಸ್ತವ್ಯ
author img

By

Published : Jul 15, 2019, 9:48 PM IST

ಬೆಂಗಳೂರು: ರಮಡ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರೊಂದಿಗೆ ಸಭೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಬಹಳ ನಗು ಮುಖದಿಂದಲೇ ಬಂದ ಬಿಎಸ್​ವೈ ರೆಸಾರ್ಟ್ ಒಳಗಡೆ ಹೋದರು.

ನಗು ಮೊಗದಿಂದ ಸಭೆಗೆ ಆಗಮಿಸಿದ ಬಿಎಸ್​ವೈ: ಇಂದು ರೆಸಾರ್ಟ್​ನಲ್ಲೇ ವಾಸ್ತವ್ಯ

ಬಿಎಸ್​ವೈ ಜೊತೆಗೆ ಗೋವಿಂದ ಕಾರಜೋಳ, ಮಾಧುಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ ಕೂಡ ಆಗಮಿಸಿದರು. ಇದಕ್ಕೂ ಮುಂಚೆ ರೆಸಾರ್ಟ್​ಗೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಸ್ವಲ್ಪ ಹೊತ್ತು ರೆಸಾರ್ಟ್​ನಲ್ಲಿದ್ದು ವಾಪಾಸ್ ತೆರಳಿದರು.

ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ, ದೋಸ್ತಿಗಳು ವಿಶ್ವಾಸಮತ ಸಾಬೀತು ಪಡಿಸುತ್ತಾರೆಯೇ? ಇಲ್ಲ ವಿಫಲವಾಗುತ್ತಾರಾ? ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸುವುದರ ಜೊತೆಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ಕೂಲಂಕಶವಾಗಿ ಮಾತುಕತೆ ನಡೆಸಿ ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಎಲ್ಲಾ ಶಾಸಕರ ಜೊತೆ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಬಿಎಸ್​ವೈ, ಇಂದು ರಾತ್ರಿ ರಮಡ ರೆಸಾರ್ಟ್​ನಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇಂದು ಶಾಸಕರ ಸಭೆ ನಡೆಸಿದ ಬಳಿಕ ಕಡಬಗೆರೆ ಮುನಿರಾಜು ಅವರ ತಂಡದಿಂದ ಸಂಗೀತಗೋಷ್ಠಿ ಏರ್ಪಡಿಸಲಾಗಿದೆ. ಇನ್ನು ಶಾಸಕರು ಹಾಗೂ ಬಿಜೆಪಿ ಮುಖಂಡರಿಗೆ ಭರ್ಜರಿ ಔತಣಕೂಟ ಏರ್ಪಡಿಸಲಾಗಿದೆ ಎಂದು ಗೊತ್ತಾಗಿದೆ.

Intro:ನಗುಮೊಗದಿಂದ ಸಭೆಗೆ ಆಗಮಿಸಿದ ಬಿಎಸ್ವೈ: ಇಂದು ರೆಸಾರ್ಟ್ ನಲ್ಲೆ ವಾಸ್ತವ್ಯ

ಬೆಂಗಳೂರು: ರಮಡ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರೊಂದಿಗೆ ಸಭೆನಡೆಸಲು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಬಹಳ ನಗುಮೊಗದಿಂದಲೆ ಬಂದ ಬಿಎಸ್ವೈ ನಗುಮುಖದಿಂದಲೇ ರೆಸಾರ್ಟ್ ಗೆ ಒಳಗಡೆ ಹೋದರು.

ಬಿಎಸ್ ವೈ ಜೊತೆಗೆ ಗೋವಿಂದಕಾರಜೋಳ , ಮಾಧುಸ್ವಾಮಿ ಮತ್ತು ಬಸವರಾಜ್ ಬೊಮ್ಮಾಯಿ, ಕೂಡ ಆಗಮಿಸಿದರು.ಇದಕ್ಕೂ ಮುಂಚೆ ರೆಸಾರ್ಟ್ ಗೆ ಆಗಮಿಸಿದ ಕೆ.ಎಸ್.ಈಶ್ವರಪ್ಪ ಸ್ವಲ್ಪ ಹೊತ್ತು ರೆಸಾರ್ಟ್ ನಲ್ಲಿದ್ದು ವಾಪಾಸ್ ತೆರಳಿದರು.

ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ, ದೋಸ್ತಿಗಳು ವಿಶ್ವಾಸ ಮತ ಸಾಬೀತು ಪಡಿಸುತ್ತಾರೆಯೇ? ಇಲ್ಲ ವಿಫಲವಾಗುತ್ತಾರ? ಹೀಗೆ ಅನೇಕ ಅಂಶಗಳನ್ನು ಚರ್ಚಿಸುವುದರ ಜೊತೆಗೆ ಮುಂದಿನ ರಾಜಕೀಯ ನಡೆಯ ಬಗ್ಗೆ ಕೂಲಕುಂಶವಾಗಿ ಮಾತುಕತೆ ನಡೆಸಿ ಸರ್ಕಾರ ರಚಿಸಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Body:ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಎಲ್ಲಾ ಶಾಸಕರ ಜೊತೆ ಜೌತಣಕೂಟ ದಲ್ಲಿ ಪಾಲ್ಗೊಳ್ಳಲಿರುವ ಬಿಎಸ್ವೈ, ಇಂದು ರಾತ್ರಿ
ರಮಡ ರೆಸಾರ್ಟ್ ನಲ್ಲೆ ಉಳಿದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

Conclusion:ಇಂದು ಶಾಸಕರ ಸಭೆ ನಡೆಸಿದ ಬಳಿಕ ಕಡಬಗೆರೆ ಮುನಿರಾಜು ಅವರ ತಂಡದಿಂದ ಸಂಗೀತ ಗೋಷ್ಟಿ ಏರ್ಪಡಿಸಲಾಗಿದೆ. ಇನ್ನು ಶಾಸಕರು ಹಾಗೂ ಬಿಜೆಪಿ ಮುಖಂಡರುಗಳಿಗೆ ಭರ್ಜರಿ ಜೌತಣಕೂಟ ಏರ್ಪಡಿಸಲಾಗಿದೆ ಎಂದು ಗೊತ್ತಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.