ETV Bharat / state

ಮಳೆ ಹಾನಿ ವಿವರ ಪಡೆದ ಸಿಎಂ... ಮತ್ತಷ್ಟು ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚನೆ

author img

By

Published : Aug 9, 2020, 1:09 PM IST

ಪ್ರವಾಹದ ತಲೆಬಿಸಿ ನಡುವೆ ಕೊರೊನಾ ನಿಭಾಯಿಸುವಲ್ಲಿ ಹಿನ್ನಡೆಯಾಗಬಾರದು. ಕೊರೊನಾ ನಿಯಂತ್ರಣಕ್ಕೂ ಅಷ್ಟೇ ಆದ್ಯತೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

BSY collects information about flood
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯ ಬಗ್ಗೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಹಾಗೂ ಅಪರ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಗ್ರವಾದ ಮಾಹಿತಿ ಪಡೆದುಕೊಂಡರು.

ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಸಿಎಂ‌ ಅಲ್ಲಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವುದನ್ನು ಮುಂದುವರೆಸಿದ್ದಾರೆ. ಬೆಳಗಿನ ವೈದ್ಯಕೀಯ ತಪಾಸಣೆ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರವಾಣಿ ಕರೆಮಾಡಿ ರಾಜ್ಯಾದ್ಯಂತ ಮಳೆಯಿಂದ ಆದ ಹಾನಿ, ಸಂಕಷ್ಟ ಪರಿಹಾರ ಕ್ರಮಗಳ ಕುರಿತು ಮಾಹಿತಿ ಪಡೆದು ಮತ್ತಷ್ಟು ಕಾರ್ಯ ಪೃವೃತ್ತರಾಗುವಂತೆ ಸೂಚಿಸಿದ್ದಾರೆ.

ಕೊಡಗು, ಕರಾವಳಿ ಭಾಗದ ಜಿಲ್ಲೆಗಳು, ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಮತ್ತಷ್ಟು ನಿಗಾ ಇಟ್ಟು ಕೆಲಸ ಮಾಡಬೇಕು. ನನಗೆ ಪ್ರತಿ ಹಂತದ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಪ್ರವಾಹದ ತಲೆಬಿಸಿ ನಡುವೆ ಕೊರೊನಾ ನಿಭಾಯಿಸುವಲ್ಲಿಯೂ ಹಿನ್ನಡೆಯಾಗಬಾರದು. ಕೊರೊನಾ ನಿಯಂತ್ರಣಕ್ಕೂ ಅಷ್ಟೇ ಆದ್ಯತೆ ನೀಡಬೇಕೆಂದು ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.