ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2022-23ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯಲು ಪಾಲಿಕೆ ಉದ್ದೇಶಿಸಿದೆ.
ನಗರದ ಸಾರ್ವಜನಿಕರು ಅಥವಾ ಸಂಘ - ಸಂಸ್ಥೆಗಳು ತಮ್ಮ ಸಲಹೆಗಳನ್ನು ಮಾರ್ಚ್ 3ರ ಒಳಗಾಗಿ, ಪಾಲಿಕೆಗೆ ಸಲ್ಲಿಸಲು ಅನುಕೂಲವಾಗುವಂತೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ದ್ವಾರದ ಬಳಿ ಸಲಹೆಗಳ ಸ್ವೀಕೃತಿ ಎಂಬ ಪೆಟ್ಟಿಗೆ(ಬಾಕ್ಸ್)ಯನ್ನು ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ನಗರದ ಎಲ್ಲ ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಲಹೆಗಳನ್ನು ಮಾರ್ಚ್ 3 ರ ಒಳಗಾಗಿ ಇ-ಮೇಲ್: adcfbbmp@gmail.com ಮೂಲಕವೂ ಸಲ್ಲಿಸಲು ಹಣಕಾಸು ವಿಭಾಗದ ಅಪರ ಆಯುಕ್ತ ನಾಗರಾಜ್ ಶೆರೇಗಾರ್ ಕೋರಿದ್ದಾರೆ.
ಇದನ್ನೂ ಓದಿ: ಫೆ.28ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಕೆ : ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ