ETV Bharat / state

ಆನ್​ಲೈನ್ ಮೂಲಕ ಹಣ ಲಪಟಾಯಿಸುವುದಕ್ಕೆ ಬ್ರೇಕ್: ಸರ್ಕಾರದ ಅಧೀನದ ಸ್ಟಾರ್ಟ್ ಅಪ್ ಕಂಪನಿಯಿಂದ ಸಿದ್ದವಾಯ್ತು ಆ್ಯಪ್..! - ಆನ್​ಲೈನ್​ ವಂಚನೆ ತಡೆ ಆ್ಯಪ್​

ಆನ್​ಲೈನ್ ಮೂಲಕ ಹಣ ವಂಚನೆಗೆ ಬ್ರೇಕ್​ ಹಾಕಲು ಸರ್ಕಾರದ ಅಧೀನ ಕಂಪನಿ ಆ್ಯಪ್​ ಒಂದನ್ನು ಸಿದ್ದಪಡಿಸಿದೆ. ಅದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಆನ್​ಲೈನ್ ಮೂಲಕ ಹಣ ಲಪಟಾಯಿಸುವುದಕ್ಕೆ ಬ್ರೇಕ್
ಆನ್​ಲೈನ್ ಮೂಲಕ ಹಣ ಲಪಟಾಯಿಸುವುದಕ್ಕೆ ಬ್ರೇಕ್
author img

By ETV Bharat Karnataka Team

Published : Nov 29, 2023, 9:03 PM IST

Updated : Nov 29, 2023, 10:49 PM IST

ಸೈಸೆಕ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಹೇಳಿಕೆ

ಬೆಂಗಳೂರು: ಆನ್​ಲೈನ್ ಮೂಲಕ ಹಣಕಾಸು ವಂಚನೆ ನಡೆಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಅಧೀನ ಸ್ಟಾರ್ಟ್ ಅಪ್ ಸಂಸ್ಥೆ ಸೈಸೆಕ್ ಹೊಸ ಆ್ಯಪ್ ಸಿದ್ದಪಡಿಸಿದೆ. ಈ ಆ್ಯಪ್ ಬಳಸಿದರೆ ಲಿಂಕ್​ಗಳನ್ನು ಒತ್ತಿ ಹಣ ಕಳೆದುಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.

ಹೌದು, ಇತ್ತೀಚೆಗೆ ಸೈಬರ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಬಹುತೇಕ ದೂರುಗಳಲ್ಲಿ ಹಣ ಕಳೆದುಕೊಂಡಿರುವ ಪ್ರಕರಣಗಳೇ ಹೆಚ್ಚು. ಅದರಲ್ಲೂ ಮೊಬೈಲ್​ಗೆ ಬಂದ ಯಾವುದೋ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡವರೇ ಹೆಚ್ಚಿನವರಾಗಿರುತ್ತಾರೆ. ನಿಮಗೆ ಲೋನ್ ಸ್ಯಾಂಕ್ಷನ್ ಆಗಿದೆ, ಯಾವುದೇ ದಾಖಲಾತಿ ಬೇಕಿಲ್ಲ, ಮಾಹಿತಿ ಖಚಿತಪಡಿಸಿ ಸಾಕು ಎನ್ನುವ ಲಿಂಕ್, ಲಾಟರಿ ಬಂದಿದೆ ಕ್ಲೈಮ್ ಮಾಡಿ ಎನ್ನುವ ಲಿಂಕ್, ಕೆವೈಸಿ ಅಪ್ ಡೇಟ್ ಮಾಡಿ ಎನ್ನುವ ಲಿಂಕ್ ಮೊಬೈಲ್​ಗಳಿಗೆ ಬರುತ್ತಲೇ ಇರುತ್ತವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಲಿಂಕ್ ಒತ್ತಿ ಒಟಿಪಿ ದಾಖಲಿಸಿದರೆ ಅವರ ಖಾತೆಯಲ್ಲಿ ಹಣ ಯಾರಿಗೋ ವರ್ಗಾವಣೆಯಾಗಿರುತ್ತದೆ, ಹಣ ಕಡಿತಗೊಂಡ ಸಂದೇಶ ಬಂದಿರುತ್ತದೆ, ಆನ್​ಲೈನ್ ಪೇಮೆಂಟ್, ಆನ್​ಲೈನ್ ಹಣ ವರ್ಗಾವಣೆಯ ಸೌಲಭ್ಯವನ್ನು ಈ ರೀತಿಯಾಗಿ ದುರುಪಯೋಗ ಮಾಡಿಕೊಳ್ಳಲಾಗುತ್ತದೆ, ಜನರು ಇದರ ಬಗ್ಗೆ ಮಾಹಿತಿ ಇಲ್ಲದೇ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡು ದೂರು ಕೊಡುತ್ತಾರೆ.

ಬ್ರೌಸ್​ ಸೇಫ್ ಆ್ಯಪ್​: ಈ ರೀತಿ ವಂಚನೆಗೆ ಒಳಗಾಗುವುದನ್ನು ತಡೆಯಲೆಂದೇ ಸರ್ಕಾರದ ಅಧೀನದಲ್ಲೇ ಕಾರ್ಯನಿರ್ವಹಿಸುವ ಸೈಸೆಕ್ ಎನ್ನುವ ಸ್ಟಾರ್ಟ್ ಆ್ಯಪ್ ಕಂಪನಿ ಬ್ರೌಸ್​ ಸೇಫ್ ಎನ್ನುವ ಆ್ಯಪ್ ಸಿದ್ದಪಡಿಸಿದೆ. ಮೊಬೈಲ್ ಮತ್ತು ಡೆಸ್ಕ್ ಟಾಪ್ ಎರಡಕ್ಕೂ ಉಚಿತವಾಗಿ ಈ ಆ್ಯಪ್ ಬಳಸಿಕೊಳ್ಳಬಹುದಾಗಿದೆ. ಆ ಮೂಲಕ ಸೈಬರ್ ವಂಚನೆಯಿಂದ ಹಣ ಕಳೆದುಕೊಳ್ಳುವುದು ತಪ್ಪಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಕ್ಲಾಸ್​ಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಸ್ಮಾರ್ಟ್ ಫೋನ್​ಗಳಿಗೆ ಬರುವ ಕೆಲವೊಂದು ಅಡಲ್ಟ್ ಕಂಟೆಂಟ್ ಇರುವ ವೆಬ್​ಗಳ ಲಿಂಕ್ ಒತ್ತಿ ಮಕ್ಕಳು ಅಡಲ್ಟ್ ಕಂಟೆಂಟ್ ನೋಡುವುದು ವರದಿಯಾಗಿತ್ತಲೇ ಇದೆ. ಇದಕ್ಕೂ ಈ ಆಪ್ ಬ್ರೇಕ್ ಹಾಕಲಿದೆ. ಸೈಬರ್ ಸೇಫ್ ಎನ್ನುವ ಒಂದೇ ಆ್ಯಪ್ ಬಳಸಿ ಎರಡು ಉಪಯೋಗ ಪಡೆದುಕೊಳ್ಳುವ ಅವಕಾಶವನ್ನು ಸರ್ಕಾರವೇ ಒದಗಿಸಿಕೊಟ್ಟಿದೆ. ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಬ್ರೌಸ್ ಸೇಫ್ ಕುರಿತು ಪ್ರದರ್ಶನ ಮಳಿಗೆ ತೆರದು ಮಾಹಿತಿ ನೀಡಲಾಗುತ್ತಿದೆ.

ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಸೈಸೆಕ್ ಕಂಪನಿಯ ಅಸಿಸ್ಟೆಂಟ್ ಮ್ಯಾನೇಜರ್ ಕೌಶಿಕ್, ಬ್ರೌಸ್ ಸೇಫ್ ಎನ್ನುವ ಆ್ಯಪ್ ಸಿದ್ದಪಡಿಸಲಾಗಿದೆ. ಬಹುತೇಕ ಎಲ್ಲರ ಮೊಬೈಲ್​ಗಳಿಗೂ ಫಿಶ್ಸಿಂಗ್ ಮೇಲ್ಸ್, ಫಿಶ್ಶಿಂಗ್ ಮೆಸೇಜ್ ಬರಲಿದೆ, ಅದರಲ್ಲಿ ಬರುವ ಲಿಂಕ್ ಒತ್ತಿದರೆ ಯಾವುದೋ ವೆಬ್​ಗೆ ಹೋಗಿ ನಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬರಲಿದೆ, ಆದರೆ ಈ ಬ್ರೌಸ್ ಸೇಫ್ ಮೂಲಕ ಮಲೀಷಿಯಸ್ ಕಂಟೆಂಟ್ ಮತ್ತು ಅಡಲ್ಟ್ ಕಂಟೆಂಟ್ ಲಾಕ್ ಮಾಡಲಾಗುತ್ತದೆ ಎಂದರು.

ಪ್ಲೇ ಸ್ಟೋರ್​, ಆ್ಯಪ್​ ಸ್ಟೋರ್​ನಲ್ಲಿ ಲಭ್ಯ: ನಮ್ಮ ಸ್ಟಾರ್ಟ್ ಅಪ್ ಸರ್ಕಾರದ ಅಧೀನದಲ್ಲಿ ಬರುವುದರಿಂದಾಗಿ ಉಚಿತವಾಗಿ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಆ್ಯಪ್ ಲಾಂಚ್ ಮಾಡಲಾಗಿದೆ. ಮೊಬೈಲ್ ಮತ್ತು ಡೆಸ್ಕ್​ ಟಾಪ್​ನಲ್ಲಿ ಕಾನ್ಫಿಗರ್ ಮಾಡಿದರೆ ನಮ್ಮ ಮೊಬೈಲ್ ಮತ್ತು ಡೆಸ್ಕ್ ಟಾಪ್ ಸೇಫ್ ಆಗಿರಲಿದೆ. ಅದಕ್ಕಾಗಿ ಡೆಸ್ಕ್ ಟಾಪ್ ಹಾಗೂ ಲ್ಯಾಪ್ ಟಾಪ್​ನಲ್ಲಿ 139.5.190.57 ಮಲೀಶಿಯಸ್(malicious) ಬ್ಲಾಕ್ ಮಾಡಲು ಮತ್ತು 139.5.190.47 ಅಡಲ್ಟ್ ಕಂಟೆಂಟ್ ಬ್ಲಾಕ್ ಮಾಡಲು ಐಪಿ ವಿಳಾಸಗಳನ್ನು ಕಾನ್ಫಿಗರ್ ಮಾಡಿಕೊಳ್ಳಬೇಕು ಹಾಗೆಯೇ ಬ್ರೌಸ್ ಸೇಫ್ ಎನ್ನುವ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್ ಪ್ಲೇ ಸ್ಟೋರ್ ನಲ್ಲಿದೆ. ಅದನ್ನು ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ನಲ್ಲಿ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ ಎಂದರು.

ನಮ್ಮ ಸ್ಟಾರ್ಟ್ ಅಪ್ ಸೈಬರ್ ಸೆಕ್ಯುರಿಟಿ ಕರ್ನಾಟಕ, ಐಟಿ ಬಿಟಿ ಅಂಡರ್ ಬರಲಿದೆ. ನಾವು ಐಐಎಸ್ಸಿಯಲ್ಲಿ ಇರಲಿದ್ದೇವೆ, ಜನರಲ್ಲಿ ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸುತ್ತೇವೆ, ಶಿಕ್ಷಣ ವಲಯದಲ್ಲಿ ಸ್ಕಿಲ್ ಡೆವೆಲಪ್ಮೆಂಟ್ ಮಾಡಲಿದ್ದೇವೆ. ಬೋಧಕ ಸಿಬ್ಭಂದಿಗಾಗಿ ಫ್ಯಾಕಲ್ಟಿ ಡೆವೆಲಪ್ಮೆಂಟ್ ಕಾರ್ಯಕ್ರಮ ಮಾಡಲಿದ್ದೇವೆ. ವಿದ್ಯಾರ್ಥಿಗಳಿಗೆ ಕೈಗಾರಿಕಾ ಭೇಟಿ ಮಾಡಿಸಲಿದ್ದೇವೆ, ಸ್ಟಾರ್ಟ್ ಅಪ್​ಗಳಲ್ಲಿ ಹ್ಯಾಕ್ ಎನ್ನುವ ಕಾರ್ಯಕ್ರಮದ ಮೂಲಕ ಫಂಡಿಂಗ್ ಮಾಡಿ ಉದ್ಯಮಿಯಾಗಲು ಸಹಕರಿಸುತ್ತೇವೆ ಎಂದು ತಮ್ಮ ಸಂಸ್ಥೆಯ ಇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರಿಗೂ ಬಂತು ನೆಬುಲಾ : ಹೇಗಿರುತ್ತೆ 3ಡಿ ವಾಲ್ಯುಮೆಟ್ರಿಕ್ ಡಿಸ್​ಪ್ಲೇ ಕಾರ್ಯಾಚರಣೆ?

Last Updated : Nov 29, 2023, 10:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.