ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ತಮ್ಮನನ್ನು ಅಣ್ಣನೇ ಕೊಲೆ ಮಾಡಿರುವ ಘಟನೆ ಕೆ.ಆರ್ ಪುರಂ ಠಾಣಾ ವ್ಯಾಪ್ತಿಯ ಪ್ರಿಯಾಂಕ ನಗರದಲ್ಲಿ ನಡೆದಿದೆ. ಬಾಲಕೃಷ್ಣ(25) ಕೊಲೆಯಾಗಿರುವ ತಮ್ಮ, ಕೊಲೆ ಆರೋಪಿ ರಾಮಕೃಷ್ಣ ಎಂಬುವರನ್ನು ಬಂಧಿಸಲಾಗಿದೆ.
ತನ್ನನ್ನು ಗುರಾಯಿಸಿ ನೋಡಿದ ಎನ್ನುವ ಕಾರಣಕ್ಕೆ ರಾಮಕೃಷ್ಣ ತಮ್ಮನ ಬಳಿ ಜಗಳವಾಡಲು ಆರಂಭಿಸಿದ್ದಾರೆ. ಆದರೆ ಇದು ವಿಕೋಪಕ್ಕೆ ಹೋಗಿ ರಾಮಕೃಷ್ಣ ಚಾಕುವಿನಿಂದ ತಮ್ಮನನ್ನು ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಣ್ಣ-ತಮ್ಮನ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಅನೇಕ ಬಾರಿ ಕೊಲ್ಲಲು ಆತ ಪ್ರಯತ್ನಿಸಿದ್ದರು. ಆದರೆ, ಈ ಬಾರಿ ಕೊಂದೇಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನೆಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ನಿಂದಿಸಿದ್ದಕ್ಕೆ ಸಿಟ್ಟು.. ಸ್ನೇಹಿತನನ್ನು ಕಲ್ಲಿನಿಂದ ಜಜ್ಜಿ ಕೊಂದ ವ್ಯಕ್ತಿ