ETV Bharat / state

ಹೊರ ರಾಜ್ಯದಿಂದ ಗಾಂಜಾ ತಂದು ಸಿಲಿಕಾನ್​ ಸಿಟಿಯಲ್ಲಿ ಮಾರಾಟ: ಆರು ಮಂದಿ ಅಂದರ್ - ಬೆಂಗಳೂರು ಸುದ್ದಿ

ಹೊರ ರಾಜ್ಯದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಟ ಮಾಡಲು‌ ಯತ್ನಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ‌ ಮಾದಕದ್ರವ್ಯ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ.

ganja
ಸಿಲಿಕಾನ್​ ಸಿಟಿಯಲ್ಲಿ ಗಾಂಜಾ ಮಾರಾಟ
author img

By

Published : Mar 4, 2020, 11:37 AM IST

ಬೆಂಗಳೂರು: ಹೊರ ರಾಜ್ಯದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಟ ಮಾಡಲು‌ ಯತ್ನಿಸುತ್ತಿದ್ದ ಆರೋಪಿಗಳನ್ನು ಸಿಸಿಬಿ‌ ಮಾದಕದ್ರವ್ಯ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ.

ಕವಿತಾ, ಧನುರಾಜ್, ಮತ್ಯಾರಾಜ್, ಉಪ್ಪಲಪಟ್ಟಿ, ಗೌರವ್, ಮಹಮ್ಮದ್ ಅಮರ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಸಿಲಿಕಾನ್ ಸಿಟಿಯ ಇಂದಿರಾನಗರ ಮತ್ತು ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಂಧ್ರ ಪ್ರದೇಶದ ವೈಜಾಗ್​​​ನಿಂದ ಬಸ್ ನಲ್ಲಿ‌ ಗಾಂಜಾ ತಂದು ತಮ್ಮದೇ ಗಿರಾಕಿಗಳನ್ನ ಸೃಷ್ಟಿ ಮಾಡಿಕೊಂಡು ವಿದ್ಯಾರ್ಥಿಗಳು, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದರು.

ಈ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ತಿಳಿದು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಗಳು ಗಾಂಜಾ ಸಮೇತ ಸಿಕ್ಕಿಬಿದ್ದಿದ್ದು, ಗಾಂಜಾ ಮಾರಟ ಮಾಡುತ್ತಿದ್ದ ಮಹಿಳೆ ಸೇರಿದಂತೆ 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಹಾಗೂ ಆರೋಪಿಗಳ ಬಳಿಯಿಂದ 43 ಕೆ.ಜಿ ಗಾಂಜಾ, 6 ಮೊಬೈಲ್, 23 ಲಕ್ಷ ರೂ. ಹಣ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಕಲಂ 8 (ಸಿ) 20 ಎನ್ ಡಿ.ಪಿ.ಎಸ್ ಕಾಯ್ದೆ 1985 ಅಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಸದ್ಯ ಆರೋಪಿಗಳು ತನಿಖೆ ವೇಳೆ ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ಈ ರೀತಿಯ ಕೃತ್ಯ ಮಾಡುತ್ತಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೀಗಾಗಿ ಈ ಆರೋಪಿಗಳ ಹಿಂದೆ ಯಾರಾದರು ಇದ್ದಾರಾ ಎನ್ನುವ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.