ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆ ಜೂನ್ 27 ರಿಂದ ಕೆಲವು ದಿನಗಳ ಮಟ್ಟಿಗೆ ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ ಹೋಟೆಲ್ನಲ್ಲಿ ಸಾರ್ವಜನಿಕರು ಕುಳಿತು ಆಹಾರ ಸೇವಿಸುವ ವ್ಯವಸ್ಥೆಯನ್ನು ತಡೆಹಿಡಿಯಲು ಮಾಲೀಕರು ನಿರ್ಧರಿಸಿದ್ದಾರೆ.
ಜೂನ್ 08 ರಿಂದ ಹೊಸ ಟೇಬಲ್ ವ್ಯವಸ್ಥೆ ಮೂಲಕ ಗ್ರಾಹಕರಿಗೆ ಮತ್ತೆ ಊಟದ ವ್ಯವಸ್ಥೆ ಆರಂಭಿಸಿತ್ತು. ಅಲ್ಲದೇ ಎಂದಿನಂತೆ ಹೋಟೆಲ್ಗೆ ಆಗಮಿಸುತ್ತಿದ್ದ ಗ್ರಾಹಕರು ದೋಸೆಯನ್ನು ಸವಿಯುತ್ತಿದ್ದರು. ಇದೀಗ ಕೊರೊನಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಮಾಲೀಕರು ಆತಂಕಕ್ಕೀಡಾಗಿದ್ದಾರೆ.
![Breakdown of food intake syste](https://etvbharatimages.akamaized.net/etvbharat/prod-images/ka-bng-1-vidhyarthi-bhavan-table-service-stop-photo-ka10012_24062020114343_2406f_1592979223_227.jpg)