ETV Bharat / state

ಅವಶ್ಯಕತೆ ಇಲ್ಲದಿದ್ರೆ ನಿಮ್ಮ ಬೈಕ್​ಅನ್ನು ಅಗತ್ಯ ಸೇವೆಗೆ ನೀಡಿ: ಬೌನ್ಸ್ ಸಂಸ್ಥೆ ಕಳಕಳಿ - Bounce company

ಲಾಕ್​ಡೌನ್​ನಿಂದಾಗಿ ಜನರಿಗೆ ಕೇವಲ ಅಗತ್ಯ ಸೇವೆಗಳು ಮಾತ್ರ ದೊರೆಯುತ್ತಿವೆ. ಇವುಗಳನ್ನು ಹೊರತು ಪಡಿಸಿ ಬಿಗ್ ​ಬಾಸ್ಕೆಟ್​​, ಅಮೇಜಾನ್​ ಸಂಸ್ಥೆಗಳು ಜನರಿಗೆ ಬೇಕಾದ ಸೇವೆಗಳನ್ನು ನೀಡುತ್ತಿದ್ದು, ಸಂಸ್ಥೆಗಳಿಗೆ ಡೆಲಿವರಿ ಬಾಯ್​ ಹಾಗೂ ವಾಹನಗಳ ಕೊರತೆ ಕಾಡುತ್ತಿದೆ.

Vivek is the Chief Operating Officer of Bounce Agency
ಬೌನ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿವೇಕ್
author img

By

Published : Apr 28, 2020, 1:55 PM IST

ಬೆಂಗಳೂರು: ರಾಜ್ಯಾದ್ಯಂತ ಲಾಕ್​ಡೌನ್​ನಿಂದ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಬಿಗ್​ಬ್ಯಾಕೇಟ್​, ಅಮೇಜಾನ್​ ಸಂಸ್ಥೆಗಳು ಜನರಿಗೆ ಬೇಕಾದ ಸೇವೆಗಳನ್ನು ನೀಡುತ್ತಿವೆ. ಆದರೆ ಈ ಸಂಸ್ಥೆಗಳಿಗೆ ಡೆಲಿವರಿ ಬಾಯ್​ ಗಾಗೂ ವಾಹನಗಳ ಕೊರತೆ ಕಾಡುತ್ತಿದೆ.

ಬೌನ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿವೇಕ್

ದೇಶದಲ್ಲಿ ಲಾಕ್​​ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಅವರ ಊರುಗಳಿಗೆ ತೆರಳಿದ್ದಾರೆ. ಈ ಸಮಯದಲ್ಲಿ ಅವರು ಹಿಂತಿರುಗಿ ಬರುವುದು ಅಸಾಧ್ಯ. ಹೀಗಾಗಿ ದ್ವಿಚಕ್ರ ವಾಹನ ಬಾಡಿಗೆ ನೀಡುವ ಸಂಸ್ಥೆಯಾದ ಬೌನ್ಸ್, ಮನೆಯಲ್ಲಿ ಇರುವ ದ್ವಿಚಕ್ರವಾಹನವನ್ನು ಕೆಲ ದಿನಗಳ ಕಾಲ ಅಗತ್ಯ ಸೇವೆಗೆ ಉಚಿತವಾಗಿ ಅಥವಾ ಗೌರವಧನಕ್ಕಾಗಿ ನೀಡಬಹುದು ಎಂಬ ಸಾಮಾಜಿಕ ಕಳಕಳಿಯನ್ನು ಪ್ರಾರಂಭಿಸಿದೆ.

ಈ ಸಾಮಾಜಿಕ ಕಳಕಳಿಗೆ ಕೈ ಜೋಡಿಸುವವರು Scooterhero.bounceshare.com ವೆಬ್​ ವಿಳಾಸಕ್ಕೆ ನಿಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕು. ದಿನಕ್ಕೆ 100 ರೂ ಗರಿಷ್ಠ ಹಣವನ್ನು ಬೌನ್ಸ್ ಸಂಸ್ಥೆ ನೀಡಲಿದೆಯಂತೆ.

ಸಾಕಷ್ಟು ಜನರ ಮನೆಯಲ್ಲಿ ವಾಹನಗಳಿರುತ್ತವೆ. ಈ ವಾಹನಗಳನ್ನು ಬೌನ್ಸ್ ಸಂಸ್ಥೆಗೆ ಸೇವಾ ಮನೋಭಾವದಿಂದ ಅಥವಾ ಗೌರವಧನಕ್ಕೆ ನೀಡಿದರೆ ಅನುಕೂಲವಾಗಲಿದೆ. ಉದ್ಯೋಗಾಕಾಂಕ್ಷಿಗಳು ಗ್ರೋಫರ್ಸ್ ಅಥವಾ ಅಮೇಜಾನ್ ರೀತಿಯ ಸಂಸ್ಥೆಗಳಲ್ಲಿ ನೌಕರರಾಗಿ ಹೋಗಬೇಕು ಎಂದರೆ ಅವರ ಬಳಿ ದ್ವಿಚಕ್ರವಾಹನ ಇರಲೇಬೇಕು. ಈ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಸಾಕಷ್ಟು ಜನರಿದ್ದಾರೆ. ನೀವು ವಾಹನಗಳನ್ನು ನೀಡಿದರೆ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಅನುಕೂಲವಾಗಲಿದೆ ಎಂದು ಬೌನ್ಸ್ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ವಿವೇಕ್ ಈಟಿವಿ ಭಾರತಗೆ ವಿವರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.