ಬೆಂಗಳೂರು: ಬಾಷ್ ಲಿಮಿಟೆಡ್ 2020-2021ನೇ ಹಣಕಾಸು ಸಾಲಿನ 3ನೇ ತ್ರೈಮಾಸಿಕದಲ್ಲಿ 3,030 ಕೋಟಿ ರೂಪಾಯಿಗಳ ಒಟ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ19.4ರಷ್ಟು ಹೆಚ್ಚಳ ಸಾಧಿಸಿದೆ.
ಓದಿ: ಹುಂಡಿ ಒಡೆದು ದೇವರ ವಿಗ್ರಹಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು
ಅಸಾಧಾರಣ ಉತ್ಪನ್ನದಿಂದ ತೆರಿಗೆ ಪೂರ್ವ ಲಾಭವು 365.7 ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 5.2 ರಷ್ಟು ಕಡಿಮೆಯಾಗಿದೆ. ಪುನರ್ ಕೌಶಲ್ಯ ಮತ್ತು ಇತರೆ ರೂಪಾಂತರ ಯೋಜನೆಗಳಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವ ಸಂಬಂಧ ಸಂಸ್ಥೆಯು 2020ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದ ವೇಳೆಗೆ 146.6 ಕೋಟಿ ರೂಪಾಯಿಗಳನ್ನು ಅಸಾಧಾರಣ ಉತ್ಪನ್ನ ರೂಪದಲ್ಲಿ ನೀಡಿದೆ.
ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ಲಾಭವು 219 ಕೋಟಿ ರೂಪಾಯಿ ಮತ್ತು ತೆರಿಗೆ ನಂತರದ ಲಾಭವು 185.7 ಕೋಟಿ ರೂಪಾಯಿಗಳಾಗಿದೆ. ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯವು ಅಸಾಧಾರಣ ಉತ್ಪನ್ನಗಳ ಪೂರ್ವದ ತೆರಿಗೆ ಪೂರ್ವ ಲಾಭವು ಶೇ.9.8 ರಷ್ಟಾಗಿದೆ. 2020ರ ಡಿಸೆಂಬರ್ 31ಕ್ಕೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ 6500 ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಿದೆ.
ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 14.5ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನದ ಪೂರ್ವದ ಪಿಬಿಟಿ 670.9 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ 47.4 ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ನಷ್ಟವು 72.9 ಕೋಟಿ ರೂಪಾಯಿಗಳಾಗಿದೆ. ಅದೇ ರೀತಿ ತೆರಿಗೆ ನಂತರದ ನಷ್ಟವು 0.49 ಕೋಟಿ ರೂಪಾಯಿಗಳಾಗಿದೆ.
ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ, ಕಳೆದ ತ್ರೈಮಾಸಿಕದ ಹಬ್ಬಗಳ ಸಂದರ್ಭದಲ್ಲಿ ನಿರೀಕ್ಷೆಗಿಂತ ಹೆಚ್ಚು ಮಾರಾಟವನ್ನು ಕಾಣಲಾಗಿದೆ. ವಿಶೇಷವಾಗಿ ಟ್ರಾಕ್ಟರ್ ಮತ್ತು ಪ್ಯಾಸೆಂಜರ್ ಆಟೋಮೋಟಿವ್ ವಿಭಾಗದಲ್ಲಿ ಆದಾಗ್ಯೂ, ಪೂರೈಕೆ ಸರಪಳಿಯಲ್ಲಿನ ಅಡೆತಡೆಗಳು ಪ್ರಗತಿಗೆ ಅಡ್ಡಿಯಾಗುವುದು ಮುಂದುವರಿದಿದೆ.
ಕಳೆದ ವರ್ಷಾಂತ್ಯದಿಂದ ಉದ್ಯಮವು ಸೆಮಿಕಂಡಕ್ಟರ್ ಗಳ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಕಂಪನಿಯ ಆಮದು ಮತ್ತು ಆಟೋಮೋಟಿವ್ ಉತ್ಪಾದನೆಯ ಮೇಲೆ ಬೀರಿದೆ. ಬಾಷ್ ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಗುವಿನ ವಾತಾವರಣ ಇದ್ದಾಗ್ಯೂ ತನ್ನ ಪೂರೈಕೆ ಜಾಲವನ್ನು ಉತ್ತಮವಾಗಿಟ್ಟುಕೊಳ್ಳುವತ್ತ ಗಮನ ಹರಿಸಿದೆ. ಯಾವುದೇ ಸಮಸ್ಯೆಗಳಿದ್ದಾಗ್ಯೂ ನೇರವಾಗಿ ಗ್ರಾಹಕರು ಮತ್ತು ಪೂರೈಕೆದಾರರೊಂದಿಗೆ ಚರ್ಚೆ ಮಾಡಿ ಅವುಗಳನ್ನು ಬಗೆಹರಿಸುತ್ತಿದೆ ಎಂದು ತಿಳಿಸಿದರು.