ETV Bharat / state

ಬಾಷ್ ಲಿಮಿಟೆಡ್: 2021-2022ರ 2ನೇ ತ್ರೈಮಾಸಿಕದಲ್ಲಿ 2,918 ಕೋಟಿ ಆದಾಯ - ಬಾಷ್ ಲಿಮಿಟೆಡ್​ಗೆ 2,918 ಕೋಟಿ ಆದಾಯ

2021-22 ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.20 ರಷ್ಟು ಹೆಚ್ಚಳವಾಗಿದ್ದು, ಪವರ್ ಟ್ರೇನ್ ಸಲೂಶನ್ಸ್ ವಿಭಾಗದಲ್ಲಿ ಶೇ.15 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 2021-22 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಂತರದಲ್ಲಿ ಶೇ.27 ರಷ್ಟು ಹೆಚ್ಚಳವಾಗಿದೆ. ಮೊಬಿಲಿಟಿ ಸಲೂಶನ್ ಹೊರಗಿನ ವಿಭಾಗದಲ್ಲಿ ಬಾಷ್ ಶೇ.16 ಹೆಚ್ಚಳ ಸಾಧಿಸಿದ್ದು, ಇದಕ್ಕೆ ಪ್ರಮುಖ ಕಾರಣ.

ಬಾಷ್ ಲಿಮಿಟೆಡ್
ಬಾಷ್ ಲಿಮಿಟೆಡ್
author img

By

Published : Nov 10, 2021, 10:15 PM IST

ಬೆಂಗಳೂರು: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2021-2022 ನೇ ಹಣಕಾಸು ಸಾಲಿನ 2 ನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳಲ್ಲಿ 2,918 ಕೋಟಿ ರೂ.ಗಳಷ್ಟು ಆದಾಯ ಗಳಿಸಿದೆ.

ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.7 ರಷ್ಟು ಹೆಚ್ಚಳ ಸಾಧಿಸಿದೆ. 2021 ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಗಣನೀಯ ಪ್ರಮಾಣದಲ್ಲಿ ಮಾರಾಟದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳ ಸಾಧಿಸಲು ಸಾಧ್ಯವಾಗಿದೆ.

ತೆರಿಗೆ ಪೂರ್ವ ಲಾಭವು 397 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.13.6 ರಷ್ಟಾಗಿದೆ, ತೆರಿಗೆ ನಂತರದ ಲಾಭವು 377 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.12.7 ರಷ್ಟಾಗಿದೆ. ಪ್ರಸ್ತುತ ಭಾರತದಲ್ಲಿ ಸೆಮಿಕಂಡಕ್ಟರ್‌ ಕೊರತೆಯನ್ನು ಎದುರಿಸುತ್ತಿರುವುದರಿಂದ ಆಟೋಮೋಟಿವ್ ಮಾರುಕಟ್ಟೆ ಉತ್ಪಾದನೆ ಕುಸಿದಿದೆಯಾದರೂ ಚೇತರಿಕೆಯ ಮುನ್ಸೂಚನೆ ಕಾಣುತ್ತಿದೆ.

ಆದಾಗ್ಯೂ, ಆಟೋಮೋಟಿವ್ ಉದ್ಯಮವು ಬೆಳವಣಿಗೆಯತ್ತ ಸಾಗುತ್ತಿರುವ ಬಗ್ಗೆ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಪ್ರಮುಖ ಆತಂಕವನ್ನು ಸೃಷ್ಟಿ ಮಾಡಿದೆ ಎಂದು ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದಲ್ಲಿ ಬಾಷ್ ಗ್ರೂಪ್ ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.

ಕೋವಿಡ್-19 ಮತ್ತು ಪ್ರಸ್ತುತ ತಲೆದೋರಿರುವ ಸೆಮಿಕಂಡಕ್ಟರ್ ಕೊರತೆ ಬಿಕ್ಕಟ್ಟು ಸೇರಿದಂತೆ 2019 ರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಆಟೋಮೋಟಿವ್‌ ಉದ್ಯಮಕ್ಕೆ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲಿಯೇ ಪಿಎಸ್‌ಐ ಸರಿಯಾದ ಸಮಯದಲ್ಲಿ ಜಾರಿಗೆ ಬಂದ ಯೋಜನೆಯಾಗಿದೆ.

ಅತ್ಯಾಧುನಿಕ ಆಟೋಮೋಟಿವ್‌ ತಂತ್ರಜ್ಞಾನದ ಬಿಡಿಭಾಗಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ ಆದ್ಯತೆಯು ಜಾಗತಿಕ ಗುಣಮಟ್ಟಕ್ಕೆ ಸರಿಯಾದ ರೀತಿಯಲ್ಲಿ ಭಾರತವನ್ನು ತರುವ ಗುರಿಯೊಂದಿಗೆ ಚಲನಶೀಲತೆಯ ಭವಿಷ್ಯದ ತಂತ್ರಜ್ಞಾನಗಳನ್ನು ವೇಗಗೊಳಿಸುವ ಉದ್ಯಮವನ್ನು ಸಕ್ರಿಯಗೊಳಿಸುತ್ತದೆ. ಪಿಎಲ್‌ಐ ಪ್ರಯೋಜನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಬಾಷ್ ಬದ್ಧವಾಗಿದ್ದು, ಇದು ಕೈಗಾರಿಕೀಕರಣದ ತಂತ್ರಜ್ಞಾನಗಳಲ್ಲಿನ ಕೊರತೆಗಳನ್ನು ನೀಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ ಸಾಧನೆಯ ಪಕ್ಷಿನೋಟ :

2021-22 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.20 ರಷ್ಟು ಹೆಚ್ಚಳವಾಗಿದ್ದು, ಪವರ್ ಟ್ರೇನ್ ಸಲೂಶನ್ಸ್ ವಿಭಾಗದಲ್ಲಿ ಶೇ.15 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 2021-22 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಂತರದಲ್ಲಿ ಶೇ.27 ರಷ್ಟು ಹೆಚ್ಚಳವಾಗಿದೆ, ಮೊಬಿಲಿಟಿ ಸಲೂಶನ್ ಹೊರಗಿನ ವಿಭಾಗದಲ್ಲಿ ಬಾಷ್ ಶೇ.16 ಹೆಚ್ಚಳ ಸಾಧಿಸಿದ್ದು, ಇದಕ್ಕೆ ಪ್ರಮುಖ ಕಾರಣ.

2021 ರ ಜುಲೈ ಸೆಪ್ಟೆಂಬರ್ ಅವಧಿಯಲ್ಲಿ ಪವರ್ ಟೂಲ್ಸ್ ವರ್ಗದಲ್ಲಿನ ವಹಿವಾಟು ಹೆಚ್ಚಳವಾಗಿರುವುದಾಗಿದೆ. ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದ ಕಂಪನಿಯು ಸುಧಾರಣೆಗೊಳ್ಳುತ್ತಿದ್ದು, ಮಾರಾಟದಲ್ಲಿ ಚೇತರಿಕೆಯನ್ನು ಕಾಣುತ್ತಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಮೊಬಿಲಿಟಿ ಮತ್ತು ಅದರಾಚೆಗಿನ ಅತ್ಯಾಧುನಿಕ ಉತ್ಪನ್ನಗಳು, ಪರಿಹಾರಗಳು ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಬಾಷ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. 2022 ರಲ್ಲಿ ಬಾಷ್ ಇಂಡಿಯಾ ತನ್ನ ಪೋರ್ಟ್ ಪೋಲಿಯೋದಾದ್ಯಂತ ನಮ್ಮ ಪ್ರಗತಿಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಹಲವಾರು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ.

ಇದು ದೇಶದಲ್ಲಿ ನಮ್ಮ ಬೆಳವಣಿಗೆ ಮತ್ತಷ್ಟು ಹೆಚ್ಚಲು ಕಾರಣವಾಗಲಿದೆ, ನಾವು ಇಷ್ಟು ದೂರ ಯಶಸ್ವಿಯಾಗಿ ಸಾಗಿ ಬಂದಿದ್ದೇವೆ ಎಂಬುದನ್ನು ಹೇಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ ಮತ್ತು ಮುಂಬರುವ ವರ್ಷಗಳಲ್ಲಿ ನಾವು ಈ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಸೌಮಿತ್ರ ಭಟ್ಟಾಚಾರ್ಯ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.