ETV Bharat / state

ಬೆಳಗಾವಿ ಗಡಿ ವಿವಾದ: ಅಮಿತ್ ಶಾ ಭೇಟಿಯಾಗಲಿರುವ ರಾಜ್ಯ ಬಿಜೆಪಿ ಸಂಸದರು: ಮಹಾ ಬೇಡಿಕೆಗೆ ಆಕ್ಷೇಪ, ಪ್ರತಿ ದೂರು

author img

By

Published : Dec 11, 2022, 8:12 PM IST

ಮಹಾರಾಷ್ಟ್ರ ಸಂಸದರ ನಿಯೋಗ ಕರ್ನಾಟಕದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ ಸೋಮವಾರ ಕರ್ನಾಟಕದ ಪರ ವಸ್ತುಸ್ಥಿತಿ ವಿವರಗಳೊಂದಿಗೆ ರಾಜ್ಯದ ಸಂಸದರ ನಿಯೋಗ ಅಮಿತ್ ಶಾ ಅವರಿಗೆ ಸಮಗ್ರ ಮಾಹಿತಿ ಒದಗಿಸಲಿದೆ.

CM Basavaraj Bommai and Union Home minisiter Amita Shah
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಗೃಹಸಚಿವ ಅಮಿತ ಶಾ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಕೇಂದ್ರದ ಅಂಗಳಕ್ಕೂ ಕಾಲಿಟ್ಟಿದೆ. ಮಹಾರಾಷ್ಟ್ರ ಸಂಸದರ ನಿಯೋಗ ಕರ್ನಾಟಕದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ ಸೋಮವಾರ ಕರ್ನಾಟಕದ ಪರ ವಸ್ತುಸ್ಥಿತಿ ವಿವರಗಳೊಂದಿಗೆ ರಾಜ್ಯದ ಸಂಸದರ ನಿಯೋಗ ಅಮಿತ್ ಶಾ ಅವರಿಗೆ ಸಮಗ್ರ ಮಾಹಿತಿ ಒದಗಿಸಲಿದೆ.

ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲು ಅಮಿತ್ ಶಾ ನಿರ್ಧಾರ ಕೈಗೊಂಡಿರುವ ನಡುವೆಯೂ ಬಿಜೆಪಿ ಸಂಸದರು ಬಿಜೆಪಿ ಚಾಣಕ್ಯನ ಭೇಟಿಗೆ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ನಾಳೆ ಸಂಸತ್ ಭವನದಲ್ಲಿ ರಾಜ್ಯ ಬಿಜೆಪಿ ಸಂಸದರ ನಿಯೋಗ ಭೇಟಿ ಮಾಡಲಿದೆ.

ಮಹಾ ವಿವಾದಕ್ಕೆ ಸ್ಪಷ್ಟೀಕರಣ: ರಾಜ್ಯದ ಗಡಿ ವಿವಾದ ಕುರಿತು ಮಹಾರಾಷ್ಟ್ರ ಸಂಸದರ ನಿಯೋಗ ಮಾಡಿರುವ ಆರೋಪಗಳಿಗೆ ಸ್ಪಷ್ಟೀಕರಣದೊಂದಿಗೆ ಸವಿಸ್ತಾರವಾದ ವಸ್ತುಸ್ಥಿತಿಯ ಮಾಹಿತಿ, ಕೋರ್ಟ್ ತೀರ್ಪಿನ ದಾಖಲಾತಿ, ಮಹಾಜನ್ ವರದಿಯ ಅಂಶಗಳ ಕುರಿತು ಉಲ್ಲೇಖಿಸಿ ತಿರುಗೇಟು ನೀಡಲಿದೆ. ಈಗಾಗಲೇ ಅಮಿತ್ ಶಾ ಭೇಟಿಗೆ ಸಮಯಾವಕಾಶ ಕೋರಿದ್ದು, ಸಂಸದರ ನಿಯೋಗಕ್ಕೆ ಸೋಮವಾರ ಬೆಳಗ್ಗೆ ಅಥವಾ ಮಧ್ಯಾಹ್ನ ಅವಕಾಶ ಸಿಗಲಿದೆ ಎನ್ನಲಾಗ್ತಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮೂಲಕ ಅಮಿತ್ ಶಾ ಭೇಟಿಗೆ ಸಮಯಾವಕಾಶ ಪಡೆದುಕೊಳ್ಳಲಾಗಿದೆ. ಜೋಶಿ ಸೇರಿದಂತೆ ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವವರು ಸಹ ಈ ನಿಯೋಗದಲ್ಲಿ ಭಾಗವಹಿಸಲಿದ್ದಾರೆ.

ಮಹಾರಾಷ್ಟ್ರ ತಗಾದೆಗೆ ಆಕ್ಷೇಪ : ಎನ್​ಸಿಪಿ, ಕಾಂಗ್ರೆಸ್, ಠಾಕ್ರೆ ಬಣದ ಶಿವಸೇನೆ, ಮಹಾವಿಕಾಸ ಅಘಾಡಿ ಮೈತ್ರಿ ಕೂಟದ ಸಂಸದರು ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹಿಂಸಾಚಾರ ಸಾಧ್ಯತೆ ಇದೆ. ಹಾಗಾಗಿ ಮಧ್ಯಪ್ರವೇಶ ಮಾಡಬೇಕು ಎಂದು ಅಮಿತ್ ಶಾ ಅವರಿಗೆ ಸಲ್ಲಿಸಿದ್ದ ಮನವಿ ಕುರಿತು ಮಾತುಕತೆ ನಡೆಯಲಿದೆ. ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಯ ಮರಾಠಿ ಭಾಷಿಕ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಕರಾರು ಎತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಲಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯ ಎನ್ನುವ ಕರ್ನಾಟಕದ ವಾದವನ್ನು ಮತ್ತೊಮ್ಮೆ ಒತ್ತಿ ಹೇಳಲಿದ್ದಾರೆ.

ಮಹಾ ಅನಗತ್ಯ ಗಡಿ ಕ್ಯಾತೆ: ಇತ್ತೀಚಿನ ಕೆಲ ದಿನಗಳಿಂದ ಮಹಾರಾಷ್ಟ್ರ ಸರ್ಕಾರವೇ ಅನಗತ್ಯ ಗಡಿ ವಿವಾದದ ಕಿಚ್ಚು ಹೊತ್ತಿಸಿದೆ. ಗಡಿ ಭಾಗದಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್ ಗಳ ಮೇಲೆ ಕಲ್ಲು ತೂರಾಟದಂತಹ ಚಟುವಟಿಕೆ ನಡೆಯುತ್ತಿವೆ. ಇದರಿಂದ ಉಭಯ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆಯಾಗಲಿದೆ. ಕಾನೂನು ಮೊರೆ ಹೋದ ನಂತರ ವಿವಾದವನ್ನು ಅಲ್ಲಿಯೇ ಪರಿಹರಿಸಿಕೊಳ್ಳಲು ಎಲ್ಲ ಅವಕಾಶವಿದ್ದರೂ ಬಹಿರಂಗ ಹೇಳಿಕೆ ಮೂಲಕ ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎನ್ನುವುದನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ದಾಖಲೆ ಸಹಿತ ವಿವರಿಸಲು ನಿಯೋಗ ಸಿದ್ಧತೆ ಮಾಡಿಕೊಂಡಿದೆ.

ಗಡಿಯಲ್ಲಿ ಅಶಾಂತಿಯ ವಾತಾವರಣವಿದ್ದರೂ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಯತ್ನ, ವಿವಾದಾತ್ಮಕ ಹೇಳಿಕೆ, ಪ್ರಚೋದನೆ ನೀಡುವ ಹೇಳಿಕೆಗಳನ್ನು ನಿರಂತರವಾಗಿ ಹರಿಬಿಡುತ್ತಿರುವುದನ್ನು ಕೇಂದ್ರ ಗೃಹ ಸಚಿವರ ಗಮನಕ್ಕೆ ತರಲಿದೆ. ಅಲ್ಲದೆ ಮಹಾರಾಷ್ಟ್ರ ವಿರುದ್ಧ ಪ್ರತಿದೂರು ನೀಡಲಿದೆ.

ಸಿಎಂ ಕಚೇರಿಯಿಂದ ಮಾಹಿತಿ ರವಾನೆ: ಈಗಾಗಲೇ ಮುಖ್ಯಮಂತ್ರಿಗಳ ಕಚೇರಿಯಿಂದ ಸಂಸದರಿಗೆ ಗಡಿ ವಿವಾದದ ವಿಷಯದ ಕುರಿತು ಮಾತನಾಡಬೇಕಾದ ಅಂಶಗಳ ಕುರಿತ ಮಾಹಿತಿ ರವಾನಿಸಲಾಗಿದೆ. ವಸ್ತುನಿಷ್ಠ ವಿಷಯಗಳನ್ನು ಮಾತ್ರ ಉಲ್ಲೇಖಿಸಿ, ಅಗತ್ಯ ದಾಖಲೆ ಮೂಲಕ ಆರೋಪಗಳನ್ನು ಕೇಂದ್ರ ಸಚಿವರ ಮುಂದಿಟ್ಟು ಮಹಾರಾಷ್ಟ್ರ ಸಂಸದರ ಮನವಿ ಅಪ್ರಸ್ತುತವಾಗಿದೆ ಎಂದು ದೃಢಪಡಿಸುವ ಕೆಲಸವನ್ನು ಮಾಡುವಂತೆ ಸೂಚಿಸಲಾಗಿದೆ.

ನಿಯೋಗ ಬಳಿಕ ಸಿಎಂ ದೆಹಲಿ ಪ್ರವಾಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕೇಂದ್ರ ಗೃಹ ಸಚಿವರ ಭೇಟಿಗೆ ಮುಂದಾಗಿದ್ದಾರೆ. ರಾಜ್ಯದ ಸಂಸದರ ನಿಯೋಗ ಅಮಿತ್ ಶಾ ಜತೆ ಮಾತುಕತೆ ನಡೆಸಿದ ನಂತರ ಸಿಎಂ ದೆಹಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ನಡುವೆ ಡಿಸೆಂಬರ್ 14 ರಂದು ಗಡಿ ವಿವಾದ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳ ಸಭೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಧರಿಸಿದ್ದಾರೆ. ಈ ಕುರಿತು ಅಧಿಕೃತ ಆಹ್ವಾನ ಬರುತ್ತಿದ್ದಂತೆ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಲಿದ್ದು, ಗಡಿ ಸಮಸ್ಯೆ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಗುಜರಾತ್ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ: ಸಿಎಂ ಬೊಮ್ಮಾಯಿ, ಬಿಎಸ್​ವೈ​ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.