ETV Bharat / state

ಪುಸ್ತಕ ಬಿಡುಗಡೆ ಕಾರ್ಯಕ್ರಮ: ಸಿಎಂ ಗಡಿಬಿಡಿ ಕಂಡು ಸಭಿಕರು, ಆಯೋಜಕರು ತಬ್ಬಿಬ್ಬು! - ಜೆಎನ್ ಟಾಟಾ ಆಡಿಟೋರಿಯಂ

ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘ ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪರ ಅವಸರ, ಗಡಿಬಿಡಿ ಕಂಡು ಸಭಿಕರು, ಆಯೋಜಕರೇ ತಬ್ಬಿಬ್ಬಾದರು.

ಜೆಎನ್ ಟಾಟಾ ಆಡಿಟೋರಿಯಂನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ
author img

By

Published : Nov 3, 2019, 2:07 PM IST

ಬೆಂಗಳೂರು: ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘ ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪರ ಅವಸರ, ಗಡಿಬಿಡಿ ಕಂಡು ಸಭಿಕರು, ಆಯೋಜಕರೇ ತಬ್ಬಿಬ್ಬಾದರು.

ಜೆಎನ್ ಟಾಟಾ ಆಡಿಟೋರಿಯಂನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ

ನಗರದ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ಸಿಎಂ, ಅಗ್ನಿ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ಆದರೆ ಈ ಪುಸ್ತಕ ಬಿಡುಗಡೆ ಸಮಾರಂಭ ಸಿಎಂ ಅವಸರ, ಗಡಿಬಿಡಿಗೆ ಸಾಕ್ಷಿಯಾಯಿತು. ಚಿಕ್ಕಬಳ್ಳಾಪುರಕ್ಕೆ ತೆರಳಲು ಸಮಯವಾದ ಹಿನ್ನೆಲೆಯಲ್ಲಿ ಸಿಎಂ ಅವಸರದಲ್ಲಿಯೇ ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘ ಆಯೋಜಿಸಿದ್ದ ಕಾರ್ಯಕ್ರಮ ನೆರವೇರಿಸಿ ತೆರಳಿದರು.

ಕಾರ್ಯಕ್ರಮ ನಿರೂಪಕರು ಉದ್ಘಾಟನೆ ಹಂತ ಬರುವುದಕ್ಕೆ ಮುನ್ನ ತಾವೇ ಎದ್ದು, ತಾವೇ ಕ್ಯಾಂಡಲ್ ತೆಗೆದುಕೊಂಡು ದೀಪ ಬೆಳಗಿಸಿದರು. ನಂತರ ನಿರೂಪಕರಿಗೆ ತಮ್ಮ ಕೈಗಡಿಯಾರದಲ್ಲಿ ಸಮಯ ತೋರಿಸಿ ಈಗಲೇ ತುಂಬಾ ತಡವಾಗಿದೆ. ಬೇಗ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು. ಉದ್ಘಾಟನೆಯ ಬಳಿಕ ಸಿಎಂರನ್ನು ಭಾಷಣಕ್ಕೆ ಆಹ್ವಾನಿಸುವಾಗ ನಿರೂಪಕರನ್ನು ತಡೆದು ರೀ ಮೊದಲು ಭರತನಾಟ್ಯ ಮಾಡಿಸಿ ಎಂದು ಸೂಚಿಸಿದರು‌. ಅವಸರದ ಮಧ್ಯೆ ಸಿಎಂ ಬಿಎಸ್​ವೈ ಅವರ ಭರತನಾಟ್ಯ ಪ್ರೇಮ ಕಂಡು ಸಭಿಕರೆಲ್ಲ ನಗೆಗಡಲಲ್ಲಿ ತೇಲಿದರು.

ಸನ್ಮಾನಕ್ಕೆಂದು ವೇದಿಕೆಯಲ್ಲಿ ಕುರ್ಚಿ ಹಾಕಿದರೂ ಬೇಡ ಎಂದ‌ ಸಿಎಂ ನಿಂತಲ್ಲೇ ಸನ್ಮಾನ ಸ್ವೀಕರಿಸಿದರು. ಇತ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ಅಂಬುಮಣಿ ರಾಮದಾಸ್ ಅವರೂ ಸಿಎಂ ಅವರ ಅವಸರ ನೋಡಿ ಒಮ್ಮೆ ಗಲಿಬಿಲಿಗೊಂಡರು.

ಬಳಿಕ ಭಾಷಣವನ್ನೂ ಅವಸರವಸರವಾಗಿ ಮುಗಿಸಿದ ಸಿಎಂ, ಸುಮಾರು 20,000 ಜನ ಚಿಕ್ಕಬಳ್ಳಾಪುರದಲ್ಲಿ ಸೇರುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ವನ್ನಿಯಕುಲ ಕ್ಷತ್ರಿಯ ಸಂಘದ ಸೇವೆ ಅಭಿನಂದನೀಯ. ಮುಂದಿನ ದಿನಗಳಲ್ಲೂ ಈ ಸೇವೆ ಮುಂದುವರೆಯಬೇಕು. ಸಂಘಕ್ಕೆ ಅಗತ್ಯ ಭೂಮಿ ನೀಡುವ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದು ಭರವಸೆ ನೀಡಿದ ಸಿಎಂ, ಅವಸರಕ್ಕೆ ಕ್ಷಮೆ ಕೋರಿ ಭಾಷಣ ಮುಕ್ತಾಯಗೊಳಿಸಿದರು.

Intro:Body:KN_BNG_01_BOOKRELEASE_CMURGENCY_SCRIPT_7201951

ಪುಸ್ತಕ ಬಿಡುಗಡೆ ಕಾರ್ಯಕ್ರಮ: ಸಿಎಂ ಅವಸರ, ಗಡಿಬಿಡಿ ಕಂಡು ಸಭಿಕರು, ಆಯೋಜಕರು ಸುಸ್ತು!

ಬೆಂಗಳೂರು: ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘ ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪರ ಅವಸರ, ಗಡಿಬಿಡಿ ಕಂಡು ಸಭಿಕರು, ಆಯೋಜಕರೇ ತಬ್ಬಿಬ್ಬಾದರು.

ನಗರದ ಜೆಎನ್ ಟಾಟಾ ಆಡಿಟೋರಿಯಂನಲ್ಲಿ ಸಿಎಂ ಅಗ್ನಿ ಗ್ರಂಥ ಬಿಡುಗಡೆಗೊಳಿಸಿದರು. ಆದರೆ ಈ ಗ್ರಂಥ ಬಿಡುಗಡೆ ಸಮಾರಂಭ ಸಿಎಂ ಅವಸರ, ಗಡಿಬಿಡಿಗೆ ಸಾಕ್ಷಿಯಾಯಿತು. ಚಿಕ್ಕಬಳ್ಳಾಪುರಕ್ಕೆ ತೆರಳಲು ಸಮಯವಾದ ಹಿನ್ನಲೆಯಲ್ಲಿ ಸಿಎಂ ಅವಸರದಲ್ಲಿಯೇ ಕರ್ನಾಟಕ ವನ್ನಿಯಕುಲ ಕ್ಷತ್ರಿಯ ಸೇವಾ ಸಂಘ ಆಯೋಜಿಸಿದ ಕಾರ್ಯಕ್ರಮ ನೆರವೇರಿಸಿ, ತೆರಳಿದರು.

ಕಾರ್ಯಕ್ರಮ ನಿರೂಪಕರು ಉದ್ಘಾಟನೆ ಹಂತ ಬರುವುದಕ್ಕೆ ಮುನ್ನ ತಾವೇ ಎದ್ದು, ತಾವೇ ಕ್ಯಾಂಡಲ್ ತೆಗೆದುಕೊಂಡು ದೀಪ ಬೆಳಗಿಸಿದರು. ನಂತರ ನಿರೂಪಕರಿಗೆ ತಮ್ಮ ಕೈಗಡಿಯಾರದಲ್ಲಿ ಸಮಯ ತೋರಿಸಿ ಈಗಲೇ ತುಂಬಾ ತಡವಾಗಿದೆ, ಬೇಗ ಕಾರ್ಯಕ್ರಮ ನಡೆಸುವಂತೆ ಸೂಚಿಸಿದರು.

ಉದ್ಘಾಟನೆಯ ಬಳಿಕ ಸಿಎಂರನ್ನು ಭಾಷಣಕ್ಕೆ ಆಹ್ವಾನಿಸುವಾಗ ನಿರೂಪಕರನ್ನು ತಡೆದು ರೀ ಮೊದಲು ಭರತನಾಟ್ಯ ಮಾಡಿಸಿ ಎಂದು ಸೂಚಿಸಿದರು‌. ಅವಸರದ ಮಧ್ಯೆ ಸಿಎಂರ ಭರತನಾಟ್ಯ ಪ್ರೇಮ ಕಂಡು ಸಭಿಕರೆಲ್ಲ ನಗೆಗಡಲಲ್ಲಿ ತೇಲಿದರು.

ಸನ್ಮಾನಕ್ಕೆಂದು ವೇದಿಕೆಯಲ್ಲಿ ಕುರ್ಚಿ ಹಾಕಿದರೂ ಬೇಡ ಎಂದ‌ ಸಿಎಂ ನಿಂತಲ್ಲೇ ಸನ್ಮಾನ ಸ್ವೀಕರಿಸಿದರು. ಇತ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಸಭೆ ಎಂಪಿ ಅಂಬುಮಣಿ ರಾಮದೋಸ್ ಅವರೂ ಸಿಎಂ ಅವರ ಅವಸರ ನೋಡಿ ಒಮ್ಮೆ ಗಲಿಬಿಲಿಗೊಂಡರು.

ಬಳಿಕ ಭಾಷಣವನ್ನೂ ಸಿಎಂ ಅವಸರವಸರವಾಗಿ ಮುಗಿಸಿದರು. ಸುಮಾರು ಇಪ್ಪತ್ತು ಸಾವಿರ ಜನ ಚಿಕ್ಕಬಳ್ಳಾಪುರದಲ್ಲಿ ಸೇರುತ್ತಿದ್ದಾರೆ. ಆ ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ಕೊಡಗು ಸಂತ್ರಸ್ತರ ವೇಳೆ ವನ್ನಿಯಕುಲ ಕ್ಷತ್ರಿಯ ಸಂಘದ ಸೇವೆ ಅಭಿನಂದನೀಯ. ಮುಂದಿನ ದಿನಗಳಲ್ಲೂ ಈ ಸೇವೆ ಮುಂದುವರೆಯಬೇಕು. ಸಂಘಕ್ಕೆ ಅಗತ್ಯ ಭೂಮಿ ನೀಡುವ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದು ಭರವಸೆ ನೀಡಿದ ಸಿಎಂ ಅವಸರಕ್ಕೆ ಕ್ಷಮೆ ಕೋರಿ ಭಾಷಣ ಮುಕ್ತಾಯಗೊಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.