ETV Bharat / state

ಶಾಲೆಗೆ ಬಾಂಬ್ ಬೆದರಿಕೆ ಇ ಮೇಲ್, ಜಿಲೆಟಿನ್ ಕಡ್ಡಿ ಹುಸಿ ಸಂದೇಶ: ಸುಳ್ಳು ಸುದ್ದಿ ಎಂದ ಡಿಸಿಪಿ - ETV Bharath Kannada news

ಶಾಲೆಯಲ್ಲಿ ಬಾಂಬ್​ ಇಟ್ಟಿರುವುದಾಗಿ ಬೆದರಿಕೆ ಇ ಮೇಲ್ ಸಂದೇಶ - ಶಾಲಾ ಮಕ್ಕಳಿಗೆ ತುರ್ತು ರಜೆ ಘೋಷಿಸಿದ ಶಾಲೆ - ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ಸ್ಥಳ ಪರಿಶೀಲನೆ.

bomb threat email message to school in Bangaluru
ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
author img

By

Published : Jan 6, 2023, 3:09 PM IST

Updated : Jan 6, 2023, 4:21 PM IST

ಬೆಂಗಳೂರು: ರಾಜಾಜಿನಗರದಲ್ಲಿರುವ ಎನ್​ಪಿಎಸ್ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಸಂದೇಶ ಬಂದ ಹಿನ್ನೆಲೆ ಶಾಲಾ ಅಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದು ಪೊಲೀಸರು ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಬೆದರಿಕೆ ಗೊತ್ತಾಗುತ್ತಿದ್ದಂತೆ ನೆಮ್ಮದಿಯ ನಿಟ್ಟೂಸಿರು ಬಿಟ್ಟಿದ್ದಾರೆ. ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ರಾಜಾಜಿನಗರದಲ್ಲಿರುವ ಎನ್​ಪಿಎಸ್ ಶಾಲೆಗೆ ಇಂದು ಈ ಮೇಲ್‌ ಸಂದೇಶ ಬಂದಿದೆ.

ಬೆದರಿಕೆ ಸಂದೇಶ ಓದುತ್ತಿದ್ದಂತೆ ಮುಂಜಾಗ್ರತ ಕ್ರಮವಾಗಿ ಶಾಲಾ ಆಡಳಿತ ಮಂಡಳಿಯು ಕೂಡಲೇ ಶಾಲಾ ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ ತುರ್ತು ರಜೆ ನೀಡಿದೆ. ಈ ಬಗ್ಗೆ ಬಸವೇಶ್ವರ ನಗರ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ‌. ಮಾಹಿತಿ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಜೊತೆಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಸ್ಥಳಕ್ಕೆ ಬಂದು ಶಾಲೆ ಪೂರ್ತಿ ತಪಾಸಣೆ ನಡೆಸಿದ್ದು, ಎಲ್ಲಿಯೂ ಅನುಮಾನಸ್ಪಾದ ವಸ್ತುಗಳು ಸಿಕ್ಕಿಲ್ಲ. ಕಿಡಿಗೇಡಿಗಳ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಹೇಳುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲು: ಯಾವ ಕಾರಣಕ್ಕಾಗಿ ಕಿಡಿಗೇಡಿಗಳ ಹುಸಿ ಬಾಂಬ್ ಸಂದೇಶ ಕಳುಹಿಸಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಿಲ್ಲ. ಶಾಲಾ ಆಡಳಿತ ಮಂಡಳಿಯವರ ಪ್ರಾಥಮಿಕ ವಿಚಾರಣೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳೇ ಸಂದೇಶ ಕಳುಹಿಸಿರಬಹುದಾ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಡಿಸಿಪಿ ಸ್ಪಷ್ಟನೆ: ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ‌ ಮಾತನಾಡಿ, ನಿನ್ನೆ ರಾತ್ರಿ 8:30 ಸುಮಾರಿಗೆ ಮೇಲ್ ಬಂದಿದೆ. ಜಿಲೇಟಿನ್ ಕಡ್ಡಿ ಇಟ್ಟು ಬ್ಲಾಸ್ಟ್ ಮಾಡುವುದಾಗಿ ಇ ಮೇಲ್ ಸಂದೇಶ ಕಳಿಸಲಾಗಿದೆ. ಶಾಲಾ ಆಡಳಿತ ಮಂಡಳಿಯು ಇಂದು ಬೆಳಗ್ಗೆ ಮೇಲ್ ಚೆಕ್ ಮಾಡಿಕೊಂಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ನಾವು ಬೆಳಿಗ್ಗೆ ಬಂದು ಎಲ್ಲಾ ಕಡೆ ಪರಿಶೀಲನೆ ಮಾಡಿದ್ದೇವೆ. ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ: ನವೆಂಬರ್ 19 ರ ಸಂಜೆ ಮಂಗಳೂರಿನ ನಾಗೂರಿಯಿಂದ ಪಂಪ್‌ವೆಲ್ ಕಡೆಗೆ ತೆರಳುತ್ತಿದ್ದ ರಿಕ್ಷದಲ್ಲಿ ಬಾಂಬ್​ ಸ್ಫೋಟಗೊಂಡಿತ್ತು. ರಿಕ್ಷದಲ್ಲಿ ಪ್ರಯಾಣಿಸುತ್ತಿದ್ದ ಶಾರಿಕ್​ ಎಂಬುವವನ ಕೈಯಲ್ಲಿದ್ದ ಕುಕ್ಕರ್​ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ರಿಕ್ಷ ಚಾಲಕ ಕೆ ಪುರುಷೋತ್ತಮ (60) ಅವರಿಗೆ ಮತ್ತು ಪ್ರಯಾಣಿಕ ಶಾರಿಕ್​ಗೆ ಗಂಭೀರ ಗಾಯಗಳಾಗಿದ್ದವು. ಆಟೋ ಚಾಲಕ ಕೆ ಪುರುಷೋತ್ತಮ (60) ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನಾ ಸ್ಥಳಕ್ಕೆ ತಜ್ಞರು ಮತ್ತು ಬಾಂಬ್​ ನಿಷ್ಕ್ರೀಯ ದಳ ಆಗಮಿಸಿ ಪರಿಶೀಲಿಸಿದಾಗ ಪ್ರಯಾಣಿಕನ ಬಳಿ ಇದ್ದ ಕುಕ್ಕರ್​ ಸ್ಫೋಟವಾದದ್ದು ಬಹಿರಂಗವಾಗಿದೆ. ನಂತರ ಮುಂದುರೆದ ತನಿಖೆಯಲ್ಲಿ ಉದ್ದೇಶಪೂರ್ವಕ ಕೃತ್ಯವೆಂದು ತಿಳಿದು ಬಂದಿದೆ. ಗಾಯಗೊಂಡ ಪ್ರಯಾಣಿಕ ಶಾರೀಕ್ ಎಂಬಾತನೇ ಸ್ಫೋಟದ ರೂವಾರಿ ಎಂದು ಅವರು ಮಾಹಿತಿ ತಿಳಿದು ಬಂದಿತ್ತು. ಈ ಬಗ್ಗೆ ಎನ್​​ಐಎ ತನಿಖೆ ನಡೆಯುತ್ತಿದೆ.

6 ಕಡೆ ಏಕಕಾಕ್ಕೆ ಎನ್​ಐಎ ದಾಳಿ: ಕುಕ್ಕರ್​ ಬಾಂಬ್​ ಸ್ಫೋಟಕ್ಕೆ ಸಂಬಧಿಸಿದಂತೆ ನಿನ್ನೆ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ಸೇರಿ ರಾಜ್ಯದ ಆರು ಕಡೆ ಎನ್​ಐಎ ದಾಳಿ ನಡೆಸಿದೆ. ದಾಳಿಯಲ್ಲಿ ಐಸಿಸ್​ ನಂಟು ಇದ್ದ ಇಬ್ಬರು ಎಂಜಿನಿಯರಿಂಗ್​ ವಿದ್ಯಾರ್ಥಿಗಳನ್ನು ಬಂದಿಸಿದ್ದಾರೆ.

ಇದನ್ನೂ ಓದಿ: ಸಂಡೂರು ಮೂಲದ ಟೆಕ್ಕಿಯ ದಾಖಲೆ ನೀಡಿ ಸಿಮ್ ಕಾರ್ಡ್: ಮೈಸೂರಲ್ಲಿ ಎನ್​ಐಎ ಶೋಧ

Last Updated : Jan 6, 2023, 4:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.