ಬೆಂಗಳೂರು: ಬೆಂಗಳೂರು ಮಂದಿಯ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೋಟ್ಯಂತರ ರೂ. ನಷ್ಟದಲ್ಲಿ ಸಿಲುಕಿದೆ.
ನಷ್ಟದಿಂದ ಮುಳುಗುವ ಹಡಗಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳ ಪ್ರಾಮಾಣಿಕತೆ ಕೆಲಸ ಮಾಡಿದ್ದರೆ ಇವತ್ತು ಸಂಸ್ಥೆ ದಯಾನೀಯ ಪರಿಸ್ಥಿತಿಗೆ ಬರುತ್ತಿರಲಿಲ್ಲ ಅನ್ನೋದು ಸಾರ್ವಜನಿಕರ ಮಾತು. ಜೊತೆಗೆ, ಅಧಿಕಾರಿಗಳ ಅನಗತ್ಯ ನಿರ್ಧಾರದಿಂದ ಆರ್ಥಿಕವಾಗಿ ದಿವಾಳಿಯಾಗಿರುವ ಬಿಎಂಟಿಸಿಗೆ ತನ್ನ ನೌಕರರಿಗೆ ಸಂಬಳ ನೀಡೋಕು ದುಡ್ಡಿಲ್ಲದ ಸ್ಥಿತಿ ಬಂದೊದಗಿದೆ.
ಇದರಿಂದಾಗಿ ಸಂಸ್ಥೆ ಇದೀಗ ಸಾಲ ನೀಡಿ ಎಂದು ಬ್ಯಾಂಕ್ಗಳ ಕದ ತಟ್ಟಿದೆ. ಸಾಲಕ್ಕೆ ಕಟ್ಟಡಗಳನ್ನು ಅಡಮಾನ ಇಟ್ಟು 230 ಕೋಟಿ ಸಾಲ ಪಡೆಯಲು ಸೂಕ್ತ ಬ್ಯಾಂಕ್‌ಗಾಗಿ ಹುಡುಕಾಟ ನಡೆಸುತ್ತಿದೆ.
ಕಡಿಮೆ ಬಡ್ಡಿ ನೀಡುವ ರಾಷ್ಟ್ರೀಕೃತ ಬ್ಯಾಂಕ್ಗಳ ಮೊರೆ ಹೋಗಿರುವ ಬಿಎಂಟಿಸಿ, ಟೆಂಡರ್ನಲ್ಲಿ ಭಾಗವಹಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ ಮೊರೆ ಇಡುತ್ತಿದೆ.