ಬೆಂಗಳೂರು : ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಡಾ.ರೇಜು ಅವರನ್ನು ನೇಮಕಗೊಳಿಸಲಾಗಿದೆ.
![BMTC new MD Dr Reju](https://etvbharatimages.akamaized.net/etvbharat/prod-images/kn-bng-05-ias-transfer-script-7208083_06072021184424_0607f_1625577264_270.jpg)
ಇವರಿಗೆ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ವ್ಯವಸ್ಥಾಪಕ ನಿರ್ದೇಶಕರಾಗಿಯೂ ಹೆಚ್ಚುವರಿ ಹೊಣೆ ನೀಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾಗಿರುವ ಸಿ ಶಿಖಾ ಅವರಿಗೆ ಬಿಎಂಟಿಸಿ ಎಂಡಿ ಹುದ್ದೆ ಹೆಚ್ಚುವರಿ ನೀಡಲಾಗಿತ್ತು. ಇನ್ನು, ಡಾ.ಅಮಿತ್ ಪ್ರಸಾದ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.