ETV Bharat / state

ಬಿಎಂಟಿಸಿ‌ಯಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ 5,400 ಪ್ರಯಾಣಿಕರಿಗೆ ಹಾಕಿದ ದಂಡವೆಷ್ಟು ಗೊತ್ತಾ? - ಮೋಟಾರು ವಾಹನ ಕಾಯ್ದೆ

ಬಿಎಂಟಿಸಿ ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ, ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಸಂಸ್ಥೆಯ ತನಿಖಾ ತಂಡಗಳು ತಪಾಸಣೆ ನಡೆಸಿವೆ. ಈ ಮೂಲಕ 5,400 ಟಿಕೆಟ್ ಇಲ್ಲದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು ರೂ. 10,24,670 ದಂಡ ವಸೂಲಿ ಮಾಡಲಾಗಿದೆ.

ಬಿಎಂಟಿಸಿ‌ಯಲ್ಲಿ ಪ್ರಯಾಣಿಕರಿಗೆ ದಂಡ
author img

By

Published : Sep 25, 2019, 8:06 PM IST

ಬೆಂಗಳೂರು: ನಗರದಾದ್ಯಂತ ಸಂಚರಿಸುವ ಬಿಎಂಟಿಸಿ ಬಸ್​​ನಲ್ಲಿ ಟಿಕೆಟ್​ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಸಂಸ್ಥೆಯ ತನಿಖಾ ತಂಡಗಳು ತಪಾಸಣೆ ನಡೆಸಿವೆ.

ಬಿಎಂಟಿಸಿ ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಒಟ್ಟು 18,894 ಟ್ರಿಪ್‌ಗಳನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ 5,400 ಟಿಕೆಟ್ ಇಲ್ಲದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು ರೂ. 10,24,670 ದಂಡ ವಸೂಲಿ ಮಾಡಲಾಗಿದೆ. ಹಾಗೆ ಸಂಸ್ಥೆಯ ನಿರ್ವಾಹಕರ ಮೇಲೆ 2,977 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇನ್ನು ಬಹಳಷ್ಟು ಸಲ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಕೊಂಡ 243 ಪುರುಷ ಪ್ರಯಾಣಿಕರಿಂದ ಒಟ್ಟು 24,300 ರೂ.ಗಳಷ್ಟು ದಂಡ ವಸೂಲಾಗಿದೆ. ಮೋಟಾರು ವಾಹನ ಕಾಯ್ದೆ1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿದೆ.

ಟಿಕೆಟ್ ಇಲ್ಲದೇ ಪ್ರಯಾಣಿಸಿದ 5,400 ಪ್ರಯಾಣಿಕರಿಗೆ ದಂಡ

ಹೀಗಾಗಿ, ಪ್ರಯಾಣಿಕರು ಬಸ್​​​ನಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ. ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ.

ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತರೆ, ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.

Intro:ಬಿಎಂಟಿಸಿ‌ ಟಿಕೆಟ್ ಇಲ್ಲದೇ ಪ್ರಯಾಣಿಸಿದ 5400 ಪ್ರಯಾಣಿಕರಿಗೆ ದಂಡ...

ಬೆಂಗಳೂರು: ಬಿಎಂಟಿಸಿ ಬಸ್ಸಿನಲ್ಲಿ ಸಂಚರಿಸುವ ಪ್ರಯಾಣಿಕರು‌ ಟೆಕೆಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ಬಸ್ಸುಗಳನ್ನು
ಸಂಸ್ಥೆಯ ತನಿಖಾ ತಂಡಗಳು ತಪಾಸಣೆ ನಡೆಸಿದೆ..‌

ಆಗಸ್ಟ್ ತಿಂಗಳಲ್ಲಿ ಒಟ್ಟು 18,894 ಟ್ರಿಪ್‌ಗಳನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ 5400 ಟಿಕೆಟ್ ಇಲ್ಲದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರಿಂದ ಒಟ್ಟು ರೂ. 10,24,670 ದಂಡ
ವಸೂಲಿ ಮಾಡಲಾಗಿದೆ.. ಹಾಗೇ ಸಂಸ್ಥೆಯ ನಿರ್ವಾಹಕರ ಮೇಲೆ 2,977 ಪ್ರಕರಣಗಳನ್ನು ದಾಖಲಿಸಲಾಗಿದೆ...

ಇನ್ನು ಬಹಳಷ್ಟು ಸಲ ಮಹಿಳಾ ಪ್ರಯಾಣಿಕರಿಂದ ಮೀಸಲಾಗಿರುವ ಆಸನಗಳಲ್ಲಿ ಕುಳಿತುಕೊಳ್ಳುವುದು‌ ನಿಷೇಧಿಸಿದ್ದರು,
243 ಪುರುಷ ಪ್ರಯಾಣಿಕರಿಂದ
ಒಟ್ಟು 24,300 ರೂ ಗಳಷ್ಟು ದಂಡ ವಿಧಿಸಲಾಗಿದೆ.. ಮೋಟಾರು ವಾಹನ ಕಾಯ್ದೆ
1988 ಕಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿದೆ..

ಹೀಗಾಗಿ, ಪ್ರಯಾಣಿಕರು ಬಸ್ಸಿನಲ್ಲಿ
ಪ್ರಯಾಣಿಸುವಾಗ ಅಧಿಕೃತ ಟಿಕೇಟ್ | ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ
ಪ್ರಯಾಣಿಸುವಂತೆ ಮನವಿ ಮಾಡಿದೆ.. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯ ಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ.

ಮಹಿಳಾ ಪ್ರಯಾಣಿಕರಿಂದ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಿದೆ..

KN_BNG_03_BMTC_BUS_TICKET_FINE_SCRIPT_7201801 Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.