ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬಸ್ ಸಂಚಾರ ಸ್ಥಗಿತಗೊಳಿಸಿ ದೀರ್ಘಾವಧಿ ಮುಷ್ಕರ ನಡೆಸಿದ್ದರು. ನೌಕರರನ್ನ ಮುಷ್ಕರಕ್ಕೆ ಪ್ರಚೋದಿಸಿದ ಹಿನ್ನೆಲೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರನ್ನು ಸೇವೆಯಿಂದ ವಜಾಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಚಂದ್ರಶೇಖರ್ ಬಿಎಂಟಿಸಿ ಡಿಪೋ 33 ರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಏಪ್ರಿಲ್‌ನಲ್ಲಿ ನಡೆದ ನೌಕರರ ಮುಷ್ಕರದಲ್ಲಿ ಪ್ರಚೋದಿಸಿ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದ ಕಾರಣಕ್ಕೆ ಸೇವೆಯಿಂದ ಗೇಟ್ ಪಾಸ್ ನೀಡಲಾಗಿದೆ.
ಸಾರಿಗೆ ಸಿಬ್ಬಂದಿ ಬೇಡಿಕೆ ಏನ್ ಇತ್ತು?
- ನಿಗಮದ ನೌಕರರಿಗೆ ಆರೋಗ್ಯ ಭಾಗ್ಯ
- ಅಂತರ್ ನಿಗಮ ವರ್ಗಾವಣೆಗೆ ನೀತಿ ರಚನೆ
- ತರಬೇತಿ ನೌಕರರ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಕೆ
- ಕೋವಿಡ್ ನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ
- ವೇತನ ಪರಿಷ್ಕರಣೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ಶಿಫಾರಸು ಪರಿಗಣನೆ
ಇದರಲ್ಲಿ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿತ್ತು. ಆದರೆ ಆರನೇ ವೇತನ ಜಾರಿ ಮಾಡುವ ಭರವಸೆ ನೀಡಿತ್ತು. ಇದಕ್ಕಾಗಿ ಕಾಲಾವಕಾಶ ಕೇಳಿತ್ತು, ಆದರೆ ಅವಧಿ ಮುಗಿದ ಬಳಿಕವೂ ಬೇಡಿಕೆ ಈಡೇರಿಸಿಲ್ಲ ಅಂತ ಸತ್ಯಾಗ್ರಹಕ್ಕೆ ಮುಂದಾಗಿ, ನಾಲ್ಕು ನಿಗಮದ ಬಸ್ಸುಗಳ ಸಂಚಾರ ಬರೋಬ್ಬರಿ 13 ದಿನಕ್ಕೂ ಹೆಚ್ಚು ಕಾಲ ಸ್ತಬ್ಧವಾಗಿತ್ತು. ಕೊನೆಗೆ ಕೋರ್ಟ್ ಮಧ್ಯಪ್ರವೇಶಿಸಿದಾಗ ಪುನಃ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ:ಇನ್ಮುಂದೆ ಇಲ್ಲಿ 10 ವರ್ಷ ಹಳೆಯ ಡೀಸೆಲ್, 15 ವರ್ಷ ಹಳೆಯ ಪೆಟ್ರೋಲ್ ವಾಹನ ರಸ್ತೆಗೆ ಇಳಿಯುವಂತಿಲ್ಲ