ಬೆಂಗಳೂರು: ಉದ್ಯಾನನಗರಿಯಲ್ಲಿ ಶೀಘ್ರದಲ್ಲೇ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ಗಳು ರಸ್ತೆಗಿಳಿಯಲಿವೆ.
ಬಿಎಂಟಿಸಿ ಬಸ್ ರಸ್ತೆಗಿಳಿದರೆ ಸಾಕು ಹಿಂದೆ ಹೋದವರಿಗೆ ಹೊಗೆ ತಪ್ಪಿದ್ದಲ್ಲ. ಆದರೆ ಇನ್ನು ಮುಂದೆ ಇಂತಹ ಕಿರಿಕಿರಿ ಅನುಭವಿಸಬೇಕಿಲ್ಲ. ಯಾಕೆಂದರೆ, ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದ್ದು, ಸುಮಾರು 300 ಬಸ್ಗಳು ರಸ್ತೆಗಿಳಿಯಲಿವೆ.
ಅಂದಹಾಗೆ ಈ ಹಿಂದೆ 80 ಬಸ್ಗಳ ಖರೀದಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ಭ್ರಷ್ಟಾಚಾರ ಆರೋಪದ ಅಡಿ ಟೆಂಡರ್ ರದ್ದಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಅಂತಾ ಹಿಂದಿನ ಸಾರಿಗೆ ಸಚಿವರು ಆರೋಪಿಸಿದ್ದರು. ಹೀಗಾಗಿ ಟೆಂಡರ್ ರದ್ದಾಗಿತ್ತು. ಇದೀಗ 300 ಬಸ್ ಖರೀದಿಗೆ ಮುಂದಾಗಿದ್ದು, ಶೀಘ್ರದಲ್ಲೇ ಟೆಂಡರ್ ಮುಗಿಸಿ ಬಸ್ಗಳನ್ನು ರಸ್ತೆಗಿಳಿಸೋದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ.
ಲೋಕಲ್ ಬಸ್ಗಳಿಗೆ ಡೀಸೆಲ್ ಹಾಕೋದಕ್ಕೆ ಆಗೋದಿಲ್ಲ ಮತ್ತು ಪರಿಸರ ಹಾನಿ ಎಂಬ ಕಾರಣಕ್ಕೆ ಬಿಎಂಟಿಸಿ ಈಗ ಎಲೆಕ್ಟ್ರಿಕ್ ಬಸ್ಗಳತ್ತ ಮುಖ ಮಾಡಿದೆ. ಇದು ಎಷ್ಟರ ಮಟ್ಟಿಗೆ ವರ್ಕ್ಔಟ್ ಆಗುತ್ತೆ ಕಾದು ನೋಡಬೇಕು.