ETV Bharat / state

ಬಿಎಂಟಿಸಿ ಕಂಡಕ್ಟರ್​​​​ ಯುಪಿಎಸ್​ಸಿ ಮುಖ್ಯ ಪರೀಕ್ಷೆ ಪಾಸ್​ ಆಗಿದ್ದು ಸುಳ್ಳಂತೆ! ‌

ಯುಪಿಎಸ್​ಸಿ ಮುಖ್ಯ ಪರೀಕ್ಷೆಯಲ್ಲಿ ಬಿಎಂಟಿಸಿ ಕಂಡಕ್ಟರ್​ವೊಬ್ಬ ಪಾಸ್ ಆಗಿರುವ ಸಂಬಂಧ ಸುಳ್ಳು ಮಾಹಿತಿ ನೀಡಿದ್ದು, ಮಾಹಿತಿ ಎಲ್ಲೆಡೆ ಬಹಿರಂಗವಾದ ಹಿನ್ನೆಲೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

BMTC Conductor UPSC Pass News
ತಪ್ಪೊಪ್ಪಿಕೊಂಡ ಕಂಡಕ್ಟರ್ ‌
author img

By

Published : Feb 1, 2020, 8:54 PM IST

ಬೆಂಗಳೂರು: ಯುಪಿಎಸ್​ಸಿ ಮುಖ್ಯ ಪರೀಕ್ಷೆಯಲ್ಲಿ ಬಿಎಂಟಿಸಿ ಕಂಡಕ್ಟರ್​ವೊಬ್ಬ ಪಾಸ್ ಆಗಿರುವ ಸಂಬಂಧ ಸಾಕಷ್ಟು ಸುದ್ದಿಗಳು ಪ್ರಕಟವಾಗಿದ್ದವು. ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.‌ ಪರೀಕ್ಷೆ ಪಾಸ್ ಆಗಿದ್ದು, ಅಂತಿಮ ಸಂದರ್ಶನಕ್ಕೆ ಸಿದ್ಧತೆ ನಡೆಸಿದ್ದಾನೆ ಎಂದು ಹೇಳಲಾಗಿತ್ತು.‌ ಆದರೆ ಈಗ ಅದೆಲ್ಲ ಸುಳ್ಳು ಎಂದು ತಿಳಿದು ಬಂದಿದೆ.

ಇನ್ನು ಈ ಸಂಬಂಧ ಮಾಹಿತಿ ನೀಡಿರುವ ಬಿಎಂಟಿಸಿಯ ಅಧಿಕಾರಿಯೊಬ್ಬರು, ಐಎಎಸ್, ಕೆಎಎಸ್ ಮತ್ತು ಇತರ ಪರೀಕ್ಷೆಗಳು ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನಾವು ಯಾವಾಗಲೂ ನಮ್ಮ ನೌಕರರನ್ನು ಪ್ರೋತ್ಸಾಹಿಸುತ್ತೇವೆ. ಕಂಡಕ್ಟರ್ ಮಧು ಯುಪಿಎಸ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಎಂದು ಸುದ್ದಿಗಳು ಪ್ರಕಟವಾಗಿದ್ದವು. ಆದರೆ, ಯುಪಿಎಸ್​ಸಿ ಪರೀಕ್ಷೆ ಪಾಸಾದವರ ಪಟ್ಟಿಯಲ್ಲಿ ಆತನ ಹೆಸರು ಕಂಡುಬಂದಿಲ್ಲ.

ಇನ್ನು ಈ ಕುರಿತಂತೆ ವಿಚಾರಿಸಿದಾಗ ತಿಳಿಯದೇ ಇಂತಹ ಸುಳ್ಳು ಹೇಳಿರುವುದಾಗಿ ನಿಗಮದ ಅಧಿಕಾರಿಗಳೊ‌ಂದಿಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ‌ಶಿಕ್ಷಣ, ಕಲೆ, ಸಾಹಿತ್ಯ ಸಂಸ್ಕೃತಿ ಮತ್ತು ಸಾರ್ವಜನಿಕ ಸೇವೆಯಲ್ಲಿ ನಮ್ಮ ಎಲ್ಲಾ ಉದ್ಯೋಗಿಗಳಿಗೂ ನಾವು ಬೆಂಬಲಿಸುತ್ತೇವೆ ಅಂತಲೂ ಬಿಎಂಟಿಸಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.