ETV Bharat / state

ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ರಕ್ತ ಕಾಂಡಕೋಶ ದಾನಕ್ಕೆ ಮುಂದಾಗಿ: ವೈದ್ಯರ ಕರೆ

ಬೆಂಗಳೂರಿನ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ರಕ್ತ ಕಾಂಡಕೋಶ ದಾನಿಗಳ ನೋಂದಣಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ರಕ್ತ ಕಾಂಡಕೋಶ ದಾನಿಗಳ ನೋಂದಣಿ ಅಭಿಯಾನ
author img

By

Published : Jun 30, 2019, 7:49 AM IST

ಬೆಂಗಳೂರು: ನಗರದ ಹೆಬ್ಬಾಳ ಸಮೀಪದ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ರಕ್ತ ಕಾಂಡಕೋಶ ದಾನಿಗಳ ನೋಂದಣಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.

ಭಾರತದಲ್ಲಿ ರಕ್ತ ಕ್ಯಾನ್ಸರ್ ರೋಗಿಗಳಿಗೆ ರಕ್ತ ಕಾಂಡಕೋಶಗಳ ಕಸಿ ಅಗತ್ಯತೆ ಹೆಚ್ಚಾಗಿದ್ದು, ಹೆಚ್ಚಿನ ಯುವಕರು ರಕ್ತಕಾಂಡ ಕೋಶ ದಾನಕ್ಕೆ ಮುಂದೆ ಬರಬೇಕು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಕ್ತಕಾಂಡ ಕೋಶ ದಾನಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಂದಿಕೆಯಾಗಬಲ್ಲ ದಾನಿಗಳನ್ನು ಪಡೆಯುವ ಅವಕಾಶ ಶೇ.10ರಿಂದ 15% ಮಾತ್ರ ಇದೆ. ಈ ನಿಟ್ಟಿನಲ್ಲಿ ಯುವಕರು ರಕ್ತಕಾಂಡ ಕೋಶ ದಾನ ಪ್ರಕ್ರಿಯೆಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿ ಕೊಳ್ಳಬೇಕೆಂದು ಅರಿವು ಮೂಡಿಸಲಾಯಿತು.

ರಕ್ತ ಕಾಂಡಕೋಶ ದಾನಿಗಳ ನೋಂದಣಿ ಅಭಿಯಾನ

ಆ್ಯಸ್ಟರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಆದಿತ್ಯ ಮಾತನಾಡಿ, ಹೊಸ ತಂತ್ರಜ್ಞಾನ ಬಳಸಿ ರಕ್ತ ಕ್ಯಾನ್ಸರ್ ಗೆ ರಕ್ತ ಕಾಂಡ ಕೋಶ ಬಳಸಿ ಚಿಕಿತ್ಸೆ ನೀಡಿ ಕ್ಯಾನ್ಸರ್ ಕಾಂಡಕೋಶ ನಾಶ ಮಾಡುವ ಮೂಲಕ ರೋಗ ಗುಣಪಡಿಸಬಹುದು. ರಕ್ತದಾನದಂತೆ ಇದೂ ಸಹ ಒಂದು ಪುಣ್ಯ ಕಾರ್ಯವಾಗಿದ್ದು, ಕಾಂಡಕೋಶ ದಾನದಿಂದ ಕಾಂಡಕೋಶದ ಕೊರತೆ ಇರುವ ಮತ್ತು ಕೆಟ್ಟ ರಕ್ತಕಾಂಡ ಕೋಶಗಳನ್ನು ಹೊಂದಿರುವ ಸಹಸ್ರಾರು ರೋಗಿಗಳ ಜೀವ ಉಳಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಖ್ಯಾತ ಅಥ್ಲೆಟ್ ಕ್ರೀಡಾಪಟು ರೀತ್ ಅಬ್ರಾಹಂ, ಖ್ಯಾತ ವೈದ್ಯ ಡಾ.ಸ್ಟಾಲಿನ್, ಡಾ.ಆದಿತ್ಯ ಮುರಳಿ ಸೇರಿದಂತೆ ರಕ್ತಕಾಂಡ ಕೋಶ ದಾನಿಗಳು ಹಾಗೂ ಇನ್ನಿತರ ಗಣ್ಯರಿದ್ದರು.

Intro:ಸಂಜಯ್ ನಾಗ್ ಬೆಂಗಳೂರು
_________

ರಕ್ತ ಕ್ಯಾನ್ಸರ್ ರೋಗಿಗಳಿಗೆ ವರದಾನ:
ರಕ್ತ ಕಾಂಡಕೋಶ ದಾನಿಗಳ ನೋಂದಣಿ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ನಗರದ ಹೆಬ್ಬಾಳ ಸಮೀಪದ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ರಕ್ತ ಕಾಂಡಕೋಶ ದಾನಿಗಳ ನೋಂದಣಿ ಆಂದೋಲನದ ಮೂಲಕ ರಕ್ತ ಕಾಂಡ ಕೋಶ ದಾನಕ್ಕೆ ಸ್ವಯಂ ಪ್ರೇರಣೆಯಿಂದ ಹೆಸರು ನೊಂದಾಯಿಸಿಕೊಳ್ಳಲು ಕರೆ ನೀಡಲಾಯಿತು.
ಭಾರತದಲ್ಲಿ ರಕ್ತ ಕ್ಯಾನ್ಸರ್ ರೋಗಿಗಳಿಗೆ ರಕ್ತ ಕಾಂಡಕೋಶಗಳ ಕಸಿ ಅಗತ್ಯತೆ ಹೆಚ್ಚಾಗಿದ್ದು, ಹೆಚ್ಚಿನ ಯುವಕರು ರಕ್ತಕಾಂಡ ಕೋಶ ದಾನಕ್ಕೆ ಮುಂದೆ ಬರಬೇಕು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಕ್ತಕಾಂಡ ಕೋಶ ದಾನಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಂದಿಕೆಯಾಗಬಲ್ಲ ದಾನಿಗಳನ್ನು ಪಡೆಯುವ ಅವಕಾಶ ಶೇ.10ರಿಂದ 15% ಮಾತ್ರ ಇದೆ. ಈ ನಿಟ್ಟಿನಲ್ಲಿ ಯುವಕರು ರಕ್ತಕಾಂಡ ಕೋಶ ದಾನ ಪ್ರಕ್ರಿಯೆಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿ ಕೊಳ್ಳಬೇಕೆಂದು ಅರಿವು ಮೂಡಿಸಲಾಯಿತು.

ಆ್ಯಸ್ಟರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಆದಿತ್ಯ ಮಾತನಾಡಿ, ಹೊಸ ತಂತ್ರಜ್ಞಾನ ಬಳಸಿ ರಕ್ತ ಕ್ಯಾನ್ಸರ್ ಗೆ ರಕ್ತ ಕಾಂಡ ಕೋಶ ಬಳಸಿ ಚಿಕಿತ್ಸೆ ನೀಡಿ ಕ್ಯಾನ್ಸರ್ ಕಾಂಡಕೋಶ ನಾಶ ಮಾಡುವ ಮೂಲಕ ರೋಗ ಗುಣಪಡಿಸಬಹುದು.ಸಮಾಜದಲ್ಲಿನ ಯುವಕರು ಸಹ ರಕ್ತ ಕಾಂಡಕೋಶ ದಾನಕ್ಕೆ ಮುಂದಾಗಬೇಕು. ರಕ್ತದಾನದಂತೆ ಇದೂ ಸಹ ಒಂದು ಪುಣ್ಯ ಕಾರ್ಯವಾಗಿದ್ದು, ಕಾಂಡಕೋಶ ದಾನದಿಂದ ಕಾಂಡಕೋಶದ ಕೊರತೆ ಇರುವ ಮತ್ತು ಕೆಟ್ಟ ರಕ್ತಕಾಂಡ ಕೋಶಗಳನ್ನು ಹೊಂದಿರುವ ಸಹಸ್ರಾರು ರೋಗಿಗಳ ಜೀವ ಉಳಿಸಬಹುದು ಎಂದರು.

ಆಂಕಾಲಜಿ ತಜ್ಞ ಡಾ.ವಿಕ್ರಮ್ ಮಯ್ಯ ಮಾತನಾಡಿ, ರೋಗಿಗೆ ಅಗತ್ಯವಿರುವ ರಕ್ತಕಾಂಡ ಕೋಶಗಳು ಮತ್ತು ದಾನಿಯಲ್ಲಿರುವ ರಕ್ತಕಾಂಡ ಕೋಶಗಳ ಸಾಮ್ಯತೆ ಪರೀಕ್ಷಿಸಲು ಅತ್ಯಂತ ಸರಳ ವಿಧಾನವಿದ್ದು, ದಾನಿಯ ಹೆಚ್‍ಎಲ್‍ಎ ಗುಣಲಕ್ಷಣಗಳನ್ನು ನಿಶ್ಚಯಿಸಲು ವ್ಯಕ್ತಿಯ ಕೆನ್ನೆಯ ಒಳಭಾಗದ ಸರಳ ಸ್ವ್ಯಾಬ್‍ನ ಮಾದರಿಯೊಂದೇ ಸಾಕು. ನೋಂದಣ ಪ್ರಕ್ರಿಯೆ ಇಷ್ಟೊಂದು ಸರಳವಿರುವಾಗ ಜನತೆ ರಕ್ತಕಾಂಡ ಕೋಶ ದಾನಕ್ಕೆ ಹಿಂಜರಿಕೆ ಮಾಡುವ ಅವಶ್ಯಕತೆ ಇಲ್ಲ ಎಂದು ರಕ್ತ ಕಾಂಡ ಕೋಶ ದಾನದ ಸರಳ ವಿಧಾನ ಕುರಿತು ಮಾಹಿತಿ ನೀಡಿದರು.

Body:ಕಾರ್ಯಕ್ರಮದಲ್ಲಿ ರಕ್ತಕಾಂಡ ಕೋಶ ದಾನದಿಂದ ಜೀವ ಉಳಿಸಿಕೊಂಡ ಕೆಲವು ಯುವಕರು ಮತ್ತು ಮಕ್ಕಳು ರಕ್ತ ಕಾಂಡ ಕೋಶದಿಂದ ತಮಗಾದ ಅನುಕೂಲತೆ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.

Conclusion:ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಖ್ಯಾತ ಅಥ್ಲೇಟ್ ಕ್ರೀಡಾಪಟು ರೀತ್ ಅಬ್ರಾಹಂ, ಖ್ಯಾತ ವೈದ್ಯ ಡಾ.ಸ್ಟಾಲಿನ್, ಡಾ.ಆದಿತ್ಯ ಮುರಳಿ ಸೇರಿದಂತೆ ರಕ್ತಕಾಂಡ ಕೋಶ ದಾನಿಗಳು ಹಾಗೂ ಇನ್ನಿತರ ಗಣ್ಯರಿದ್ದರು.

_______________
ಬೈಟ್೧:ಡಾ.ಆದಿತ್ಯ ಆಸ್ಟರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ
ಬೈಟ್೨:ಡಾ.ವಿಕ್ರಮ್ ಮಯ್ಯ , ಕ್ಯಾನ್ಸರ್ ತಜ್ಞ
____

Mojoದಲ್ಲಿ ವಿಶುವಲ್ಸ್ ಕಳುಹಿಸಲಾಗಿದೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.