ETV Bharat / state

ಕೋವಿಡ್ -19 ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನ ಮಾಡಿ: ರೆಡ್​​​ಕ್ರಾಸ್ ಮನವಿ

ರಾಷ್ಟ್ರೀಯ ರಕ್ತಚಾಲನ ಪರಿಷತ್ತಿನ(ಎನ್.ಬಿ.ಟಿ.ಸಿ) ನಿರ್ದೇಶನದಂತೆ ಮೊದಲ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಆಗುವುದಿಲ್ಲ. ಅದೇ ರೀತಿ ಎರಡನೇ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ.

blood_donate_before_vaccination
ಕೋವಿಡ್ -19 ಲಸಿಕೆ ತೆಗೆದುಕೊಳ್ಳುವ ಮೊದಲು ರಕ್ತದಾನಕ್ಕೆ ಮುಂದಾಗಿ
author img

By

Published : Apr 24, 2021, 12:46 PM IST

ಬೆಂಗಳೂರು: ಭಾರತ ಸರ್ಕಾರವು ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆ ನೀಡಲು ತೀರ್ಮಾನಿಸಿರುವ ಕಾರಣ, ಕೋವಿಡ್-19 ಲಸಿಕೆ ತೆಗೆದುಕೊಳ್ಳುವ ಮುನ್ನ ಸ್ವಯಂಪ್ರೇರಿತ ರಕ್ತದಾನಿಗಳು ರಕ್ತದಾನ ಮಾಡುವಂತೆ ರೆಡ್​ ಕ್ರಾಸ್ ಮನವಿ ಮಾಡಿದೆ. ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಎಸ್. ನಾಗಣ್ಣ ಸಾರ್ವಜನಿಕರಲ್ಲಿ ಈ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ರಕ್ತಚಾಲನ ಪರಿಷತ್ತಿನ(ಎನ್.ಬಿ.ಟಿ.ಸಿ) ನಿರ್ದೇಶನದಂತೆ ಮೊದಲ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಆಗುವುದಿಲ್ಲ. ಅದೇ ರೀತಿ ಎರಡನೇ ಲಸಿಕೆಯನ್ನು ತೆಗೆದುಕೊಂಡ ನಂತರ 28 ದಿನಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಮಧ್ಯದ ಕಾಲಾವಧಿಯು 56 ದಿನಗಳಾಗಿರುತ್ತದೆ. ಕ್ಯಾನ್ಸರ್ ನಿಂದ ಬಳಲುತ್ತಿರುವವರು, ಡಯಾಲಿಸಿಸ್, ಅಪಘಾತ, ಹೃದಯ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ವಿಧಾನಗಳು ಮತ್ತು ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತದ ಅನಿವಾರ್ಯತೆ ಇರುತ್ತದೆ.

ರಕ್ತದಾನ ಮಾಡುವ ಮುನ್ನ ಈ ಅಂಶಗಳನ್ನ ಗಮನಿಸಿ
ಈ ಅಂಶಗಳನ್ನು ಗಮನಿಸಿ ರಕ್ತದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು. ಇದರಿಂದಾಗಿ ಕರ್ನಾಟಕ ರಾಜ್ಯದಲ್ಲಿ ಎದುರಾಗಬಹುದಾದ ರಕ್ತದ ಕೊರತೆಯನ್ನು ನೀಗಿಸಬಹುದು. ಕಳೆದ ಒಂದು ವರ್ಷದಿಂದ ಕೋವಿಡ್ ಪರಿಣಾಮವಾಗಿ ಮತ್ತು ಪ್ರಸ್ತುತ ವಾರಂತ್ಯದ ಕರ್ಫ್ಯೂ ಹಾಗೂ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ರಕ್ತದಾನ ಶಿಬಿರಗಳು ಹಾಗೂ ರಕ್ತದಾನಿಗಳು ಸಕಾಲದಲ್ಲಿ ರಕ್ತದಾನ ಮಾಡಲು ಆಗದೇ ಇರುವುದರಿಂದ ತಾವುಗಳೆಲ್ಲರೂ ಈ ಸಾಮಾಜಿಕ ಕಳಕಳಿಯುಳ್ಳ ಸೇವೆಯಲ್ಲಿ ಪಾಲುದಾರರಾಗಬೇಕೆಂದು ರೆಡ್ ಕ್ರಾಸ್ ಮನವಿ ಮಾಡುತ್ತದೆ.

ಸಂಪೂರ್ಣ ಗುಣಮುಖರಾದರು 28 ದಿನಗಳಾದ ನಂತರ ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ರೇಸ್ ಕೋರ್ಸ್ ರಸ್ತೆಯಲ್ಲಿನ ರಕ್ತ ಕೇಂದ್ರಕ್ಕೆ ಬಂದು ಕೋವಿಡ್ -19 ಪ್ಲಾಸ್ಮಾ ದಾನ ಮಾಡಿ ಪ್ರಸ್ತುತ ಕೋವಿಡ್-19 ಸೋಂಕಿನಿಂದ ನರಳುತ್ತಿರುವ ರೋಗಿಗಳಿಗೆ ನೆರವಾಗುವಂತೆ ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸುತ್ತಿದ್ದೇವೆ ಎಂದು ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಎಸ್. ನಾಗಣ್ಣ ಮನವಿ ಮಾಡಿದ್ದಾರೆ..

ಆಸಕ್ತರು 080-22268435 ಅಥವ ಮೊ: 9035068435 ಸಂಖ್ಯೆಗೆ ಸಂಪರ್ಕಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.