ETV Bharat / state

ಪತ್ನಿಗೆ ಸ್ನೇಹಿತರೊಂದಿಗೆ ಮಲಗಲು ಪೀಡಿಸಿದ: ಖಾಸಗಿ ದೃಶ್ಯ ಸೆರೆಹಿಡಿದು ಹೆಂಡತಿಗೇ ಬ್ಲಾಕ್​ಮೇಲ್​ ಮಾಡಿದ ಪತಿ - ETV Bharath Kannada

ಪತಿಯೇ ಪತ್ನಿಯನ್ನು ಸ್ನೇಹಿತರೊಂದಿಗೆ ಮಲಗಲು ಹೇಳಿ ಖಾಸಗಿ ದೃಶ್ಯವನ್ನು ಸೆರೆ ಹಿಡಿದು ಬ್ಲಾಕ್​ಮೇಲ್ ಮಾಡುತ್ತಿದ್ದ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

Etv Bharat
ಖಾಸಗಿ ದೃಶ್ಯ ಸೆರೆಹಿಡಿದು ಹೆಂಡತಿಗೇ ಬ್ಲಾಕ್​ಮೇಲ್​ ಮಾಡಿದ ಪತಿ
author img

By

Published : Dec 10, 2022, 6:46 AM IST

Updated : Dec 10, 2022, 6:01 PM IST

ಬೆಂಗಳೂರು: ಪತ್ನಿಯ ಮೇಲೆ ಪರ ಪುರುಷರ ಕಣ್ಣು ಬೀಳದಂತೆ ಪತಿ ಸದಾ ಎಚ್ಚರಿಕೆ ವಹಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಪತಿ ಮಹಾಶಯ ತನ್ನ ಸ್ನೇಹಿತರ ಜತೆಗೆ ಹಾಸಿಗೆ ಹಂಚಿಕೊಳ್ಳುವಂತೆ ಬೆದರಿಸಿ, ಆ ಖಾಸಗಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಟೆಕ್ಕಿ ಪತ್ನಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಥಣಿಸಂದ್ರದ ನಿವಾಸಿ 34 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಆಕೆಯ ಪತಿ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರುದಾರ ಮಹಿಳೆಯು 2011ರಲ್ಲಿ ಈ ವ್ಯಕ್ತಿಯನ್ನು ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗನಿದ್ದಾನೆ. ಮದುವೆಯಾದಾಗಿನಿಂದ ಈತ ಮದ್ಯಪಾನ ಮಾಡಿ ಬಂದು ಹಲ್ಲೆ ನಡೆಸಿ ಹಿಂಸೆ ಕೊಡುತ್ತಿದ್ದನಂತೆ.

2015ರಲ್ಲಿ ತನ್ನ ಸ್ನೇಹಿತರೊಂದಿಗೆ ಮಲಗುವಂತೆ ಒತ್ತಾಯ ಮಾಡುತ್ತಿದ್ದು, ನಾನು ಒಪ್ಪದಿದ್ದಾಗ ಹಲ್ಲೆ ನಡೆಸಿ ಹಿಂಸೆ ಕೊಡುತ್ತಿದ್ದ. ಪತಿಯ ಹಿಂಸೆ ತಾಳಲಾರದೇ ಪತಿಯ ಇಬ್ಬರು ಸ್ನೇಹಿತರ ಜತೆಗೆ ಹಲವಾರು ಬಾರಿ ದೈಹಿಕ ಸಂಪರ್ಕ ಹೊಂದಿದ್ದೇನೆ. ಪತಿಯ ಸ್ನೇಹಿತರ ಜೊತೆಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೊವನ್ನು ಪತಿ ತನಗೆ ಗೊತ್ತಾಗದಂತೆ ಆತನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ. ಇತ್ತೀಚೆಗೆ ನನಗೆ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುವುದು ಇಷ್ಟವಾಗದೇ ಇದರಿಂದ ದೂರ ಉಳಿದಿದ್ದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ವಿಚ್ಛೇದನ ಕೇಳಿದಕ್ಕೆ ಬ್ಲಾಕ್‌ಮೇಲ್: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದರಿ 2019ರಿಂದ ನಮ್ಮೊಂದಿಗೆ ವಾಸಿಸುತ್ತಿದ್ದಳು. ಇಷ್ಟಕ್ಕೆ ಸುಮ್ಮನಾಗದ ಪತಿ ನಿನ್ನ ತಂಗಿಯನ್ನು ನನ್ನ ಜೊತೆ ಮಲಗಲು ಹೇಳು ಎಂದು ಒತ್ತಾಯಿಸುತ್ತಿದ್ದ. ಇದರಿಂದ ಮನನೊಂದು ಪತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದೆ.

ವಿಚ್ಛೇದನ ಕೇಳಿದಾಗಲೆಲ್ಲಾ ಖಾಸಗಿ ವಿಡಿಯೋ ಮತ್ತು ಫೋಟೋ ತೋರಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದ. ಡಿ.4ರಂದು ಮತ್ತೆ ವಿಚ್ಛೇದನ ಕೇಳಿದಾಗ 2 ಖಾಸಗಿ ಫೋಟೋಗಳನ್ನು ನನ್ನ ವಾಟ್ಸ್​ಆ್ಯಪ್​​ಗೆ ಕಳುಹಿಸಿದ್ದ. ಇವುಗಳನ್ನು ನಿನ್ನ ಸ್ನೇಹಿತರಿಗೆ, ನಿನ್ನ ತಂದೆ ತಾಯಿಗೆ ಕಳುಹಿಸಿ, ಇಂಟರ್ನೆಟ್ ಗ್ರೂಪ್‌ಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಪತಿ ಮದ್ಯಪಾನದ ಜತೆಗೆ ಗಾಂಜಾ ಸೇವನೆ ಮಾಡುತ್ತಿದ್ದು, ಮನೆಯಲ್ಲಿ 2 ಪಾಟ್‌ಗಳಲ್ಲಿ ಗಾಂಜಾ ಸಸ್ಯ ಬೆಳೆಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: ಮತ್ತೆ ಸಂಭೋಗ ಹೊಂದಲು ನಿರಾಕರಿಸಿದ ಪತ್ನಿ: ಕೋಪದಲ್ಲಿ ಕೊಲೆಗೈದ ಪಾಪಿ ಪತಿ

Last Updated : Dec 10, 2022, 6:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.