ETV Bharat / state

ಹೆಚ್.ವಿಶ್ವನಾಥ್‌ ಮಾಡಿದ ಗಂಭೀರ ಆರೋಪದ ಸೂಕ್ತ ತನಿಖೆ ಆಗಲಿ: ಬಿ.ಎಲ್.ಶಂಕರ್

author img

By

Published : Dec 2, 2020, 5:50 PM IST

ಹೆಚ್.ವಿಶ್ವನಾಥ್​ ಅವರು ಸಿಎಂ ನೀಡಿದ ಚುನಾವಣಾ ವೆಚ್ಚದ ಹಣವನ್ನು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಆರ್.ಸಂತೋಷ್ ಮೂಲಕ ತಮಗೆ ತಲುಪಬೇಕಿದ್ದ ಹಣ ತಲುಪದ ಹಿನ್ನೆಲೆಯಲ್ಲಿ ಸೋಲಾಗಿದೆ ಎಂಬ ಹೇಳಿಕೆ ಸಂಬಂಧ ಬಿ.ಎಲ್. ಶಂಕರ್​ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ವಿಶ್ವನಾಥ್​ ನೀಡಿರುವ ಆರೋಪದ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ಧಾರೆ.

ಬಿ.ಎಲ್. ಶಂಕರ್
BL Shankar

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಮ್ಮ ಚುನಾವಣೆ ಸಂದರ್ಭ ನಡೆದಿರುವ ಹಣ ಹಂಚಿಕೆ ವಿಚಾರ ಪ್ರಸ್ತಾಪಿಸಿದ್ದು, ಇದರ ಸೂಕ್ತ ತನಿಖೆ ಆಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್.ಶಂಕರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ

ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ವಿಶ್ವನಾಥ್ ಅವರು ನಿನ್ನೆ ಸಿಎಂ ನೀಡಿದ ಚುನಾವಣಾ ವೆಚ್ಚದ ಹಣವನ್ನು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಆರ್.ಸಂತೋಷ್ ಮೂಲಕ ತಮಗೆ ತಲುಪಬೇಕಿದ್ದ ಹಣ ತಲುಪದ ಹಿನ್ನೆಲೆಯಲ್ಲಿ ಸೋಲಾಗಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ಅನುಮಾನ ಉಂಟುಮಾಡುವಂತಿದೆ. ಈ ಹೇಳಿಕೆ ಸಿಎಂ ಸುತ್ತಲೂ ಗಿರಕಿ ಹೊಡೆಯುವ ವಿಚಾರ. ಅಷ್ಟೇ ಅಲ್ಲದೆ ಜನಸಾಮಾನ್ಯರು ಅನುಮಾನದಿಂದ ನೋಡುವಂತಿದ್ದು, ಈ ಕುರಿತಾಗಿ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡಬೇಕಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಕಚೇರಿ ಸುತ್ತ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಸಿಎಂ ರಾಜಕೀಯ ಸಲಹೆಗಾರರನ್ನು ಹುದ್ದೆಯಿಂದ ಕೈಬಿಡಲಾಗಿದೆ. ಸಿಎಂ ಕಾರ್ಯದರ್ಶಿ, ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡುತ್ತಾರೆ. ರಾಜಕೀಯ ಕಾರ್ಯದರ್ಶಿ ಆಸ್ಪತ್ರೆಗೆ ಸೇರ್ತಾರೆ, ವಿಶ್ವನಾಥ್ ಬಹಿರಂಗವಾಗಿಯೇ ಸಿಎಂ ತನಗೆ ಕಳುಹಿಸಿದ್ದ ದೊಡ್ಡ ಮೊತ್ತದ ಹಣವನ್ನು ಯೋಗೇಶ್ವರ್ ಸೇರಿದಂತೆ ಅನೇಕರು ನೀಡಿಲ್ಲ ಎಂದು ಹೇಳಿದ್ದಾರೆ. ಹಾಗಾದ್ರೆ ಈ ಹಣ ಯಾವುದು ಅನ್ನೋದು ಬಹಿರಂಗವಾಗಬೇಕು. ಈ ಹಣದ ಮೂಲ ಸಂಬಂಧ ಪಟ್ಟ ವಿಚಾರದ ಬಗ್ಗೆ ಚರ್ಚೆ ಆಗಬೇಕು. ಇದು ಕೇವಲ ವಿಶ್ವನಾಥ್ ಹಾಗೂ ಯಡಿಯೂರಪ್ಪ ಅವರ ನಡುವಿನ ಅಥವಾ ಪಕ್ಷದ ವಿಚಾರವಾಗಿದ್ದರೂ ನಾವು ಸುಮ್ಮನಿರುತ್ತಿದ್ದೆವು. ಆದರೆ ಮುಖ್ಯಮಂತ್ರಿಗಳ ಸುತ್ತಲೂ ಇರುವ ಅಧಿಕಾರಿಗಳು ಇದರಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಇದನ್ನು ಸೂಕ್ತ ತನಿಖೆಗೆ ವಹಿಸಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದರು.

ವಿಶ್ವನಾಥ್, ಹಿಂದೆಯೂ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅವರು ತಮ್ಮ ಆದಾಯ ಮೂಲವನ್ನು ಹೇಳಬೇಕು. ಈ ಹಣ ಎಲ್ಲಿಂದ ಬಂತು ಅನ್ನೋದನ್ನು ಹೇಳಬೇಕು. ಈ ಬಗ್ಗೆ ವಿಶ್ವನಾಥ್ ಅಫಿಡವಿಟ್ ಸಲ್ಲಿಕೆ ಹಾಕಬೇಕು ಎಂದರು.

ಬಳಿಕ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಹಳ್ಳಿಹಕ್ಕಿ ವಿಶ್ವನಾಥ್ ನಮಗೂ ಸ್ನೇಹಿತರೇ. ಒಂದೊಂದು ಸಾರಿ ಕಟು ಸತ್ಯ ಹೇಳ್ತಾರೆ. ನಿನ್ನೆ ಹೇಳಿದ ಕಟು ಸತ್ಯಕ್ಕೆ ವಿಶ್ವನಾಥ್‌ರನ್ನು ಅಭಿನಂದಿಸುತ್ತೀನಿ. 15 ಕ್ಷೇತ್ರಗಳ ವಿಧಾನಸಭೆ ಉಪ ಚುನಾವಣೆ ಸಮಯದಲ್ಲಿ ಪ್ರತಿಕ್ಷೇತ್ರದಲ್ಲಿ 50 ಕೋಟಿ ರೂ ಖರ್ಚು ಮಾಡ್ತಾ ಇದ್ದಾರೆ ಅಂತಾ ನಾವು ಹೇಳಿದ್ವಿ. ಆರ್.ಆರ್.ನಗರ, ಶಿರಾ ಚುನಾವಣೆಯಲ್ಲೂ ಬಹುದೊಡ್ಡ ಮೊತ್ತವನ್ನು ವೆಚ್ಚ ಮಾಡಿದ್ದಾರೆ ಅಂದಾಗ ಆರೋಪವನ್ನು ಬಿಜೆಪಿ ತಳ್ಳಿ ಹಾಕಿತ್ತು ಎಂದು ಗುಡುಗಿದರು.

ನಿನ್ನೆ ವಿಶ್ವನಾಥ್ ಅವರೆ ಪಕ್ಷ ನೀಡಿದ ದೊಡ್ಡ ಮೊತ್ತ ತಲುಪಿಲ್ಲ ಅಂದಿದ್ದಾರೆ. ಎಷ್ಟು ಕೊಟ್ಟಿದ್ರು ಅನ್ನೋ ಮೊತ್ತ ಹೇಳಬೇಕು. ಈ ದೊಡ್ಡ ಮೊತ್ತ ಬಿಜೆಪಿ ಸರ್ಕಾರಕ್ಕೆ ಅಥವಾ ಅವರಿಗೆ ಯಾವ ಮೂಲದಿಂದ ಬಂತು. ಯಾರಾದ್ರೂ ಬಿಡಿಎಯಿಂದ ಆರ್​ಟಿಜಿಎಸ್‌ನಿಂದ ಬಂತಾ? ಹಾಗಾದ್ರೆ ಇದು ವೈಟ್ ಮನಿನಾ ಅಥವಾ ಬ್ಲಾಕ್ ಮನಿನಾ? ವೈಟ್ ಮನಿ ಆದ್ರೆ ಯಾವುದು? ಬ್ಲ್ಯಾಕ್ ಮನಿ ಆದ್ರೆ ಅದು ಅಪರಾಧ ಆಗುತ್ತೆ ಎಂದರು.

ಸೂಮೋಟೋ ಕೇಸ್ ದಾಖಲಿಸಿ ತನಿಖೆ ನಡೆಸಿ ಸಿಎಂ ಇದನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು. ಚುನಾವಣಾ ಆಯೋಗದ ಪಾತ್ರ ಕೂಡ ಈ ಪ್ರಕರಣ ಭೇದಿಸುವಲ್ಲಿ ಮಹತ್ವ ಇದೆ. ಹೀಗಾಗಿ ಈ ಪ್ರಕರಣವನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.