ETV Bharat / state

ಬಿಜೆಪಿಗೆ ಸಿಹಿ.. ಎಂಇಎಸ್​ ಪಾಲಿಗೆ ಕುಂದಾ ಕಹಿ.. ಬೆಳಗಾವಿಯಲ್ಲಿ ಯಶಸ್ವಿಯಾದ ಕಮಲಪಾಳಯದ ತಂತ್ರ! - Belagavi municipal corporation election result

ಪಕ್ಷದ ಚಿಹ್ನೆಗಿಂತ ಸ್ವತಂತ್ರವಾಗಿ ಸ್ಪರ್ಧಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಒಲವು ತೋರಿದ್ದರು. ಆದರೆ, ಹೈಕಮಾಂಡ್ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸುವಂತೆ ನೀಡಿದ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಚಿಹ್ನೆ ಮೇಲೆ ಸ್ಪರ್ಧಿಸಲು ಸ್ಥಳೀಯ ನಾಯಕರು ನಿರ್ಧರಿಸಿದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್ ನಡುವಿನ ಮನಸ್ತಾಪ ಪಕ್ಷದ ಹಿನ್ನಡೆಗೆ ಕಾರಣವಾಯಿತು ಎನ್ನಲಾಗುತ್ತಿದೆ. ಪ್ರಚಾರದ ಸಮಯದಲ್ಲಿಯೂ ಕೂಡ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವಲ್ಲಿ ವಿಫಲರಾದರು..

ಬೆಳಗಾವಿ ಮಹಾನಗರ ಪಾಲಿಕೆ
ಬೆಳಗಾವಿ ಮಹಾನಗರ ಪಾಲಿಕೆ
author img

By

Published : Sep 6, 2021, 3:16 PM IST

Updated : Sep 6, 2021, 7:04 PM IST

ಬೆಳಗಾವಿ : ಎರಡೂವರೆ ದಶಕಗಳಿಂದ ನಾಡದ್ರೋಹಿ ಎಂಇಎಸ್ ಹಿಡಿತದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆ ಇದೀಗ ಬಿಜೆಪಿ ವಶವಾಗಿದೆ. ಅಮೋಘ ಜಯದೊಂದಿಗೆ ಪಾಲಿಕೆ ಚುಕ್ಕಾಣಿ ಹಿಡಿದ ಮೊದಲ ರಾಜಕೀಯ ಪಕ್ಷ ಎಂಬ ಕೀರ್ತಿಗೂ ಬಿಜೆಪಿ ಪಾತ್ರವಾಗಿದೆ.

ಬಿಜೆಪಿಗೆ ದಿಗ್ವಿಜಯದ ಮಾಲೆ : ಈ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದ್ರೆ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಸಂಪೂರ್ಣ ನಿರ್ನಾಮವಾಗಿದೆ. ರಾಷ್ಟ್ರೀಯ ಪಕ್ಷಗಳ ಸ್ಪರ್ಧೆಯಿಂದ ರಂಗು ಪಡೆದಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ದಿಗ್ವಿಜಯ ಸಾಧಿಸಿದೆ. ಆ ಮೂಲಕ ಸ್ವತಂತ್ರವಾಗಿ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಕಮಲ ನಾಯಕರು ಯಶಸ್ವಿಯಾಗಿದ್ದಾರೆ.

58 ವಾರ್ಡ್‍ಗಳ ಪೈಕಿ 55ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ 36 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸಾಮೂಹಿಕ ನಾಯಕತ್ವ ಹಾಗೂ ಚುನಾವಣೆಯ ತಂತ್ರಗಾರಿಕೆಯ ಮೂಲಕ ಎಂಇಎಸ್‍ಗೆ ಠಕ್ಕರ್ ಕೊಟ್ಟಿರುವ ಕಮಲ ನಾಯಕರು ಇತ್ತ ಕಾಂಗ್ರೆಸ್ ನ ನೆಲಕಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಓದಿ: ಹು-ಧಾ ಮಹಾನಗರ ಪಾಲಿಕೆ ಫಲಿತಾಂಶ: ಗೆಲುವಿನ ಸನಿಹದಲ್ಲಿ ಎಡವಿದ ಬಿಜೆಪಿ, ಕಾಂಗ್ರೆಸ್​​​​ನಿಂದ ಭರ್ಜರಿ ಟಕ್ಕರ್​!

58 ವಾರ್ಡ್‍ಗಳ ಪೈಕಿ 55 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 36 ಸ್ಥಾನ, 46 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 9 ವಾರ್ಡ್‍ಗಳಲ್ಲಿ ಗೆಲುವು ಸಾಧಿಸಿದೆ. 21 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಎಂಇಎಸ್ 2 ಸ್ಥಾನ, 6 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ 1 ಹಾಗೂ 10 ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಆಪ್ ಹಾಗೂ ಜೆಡಿಎಸ್ ಶೂನ್ಯ ಸಾಧನೆ ಮಾಡಿವೆ.

32 ಮ್ಯಾಜಿಕ್ ನಂಬರ್ ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿ ಅದಕ್ಕಿಂತ ಹೆಚ್ಚಿನ ಅಂದರೆ 36 ಸ್ಥಾನ ಗಳಿಸಿದೆ. ಮೇಯರ್ ಹಾಗೂ ಉಪಮೇಯರ್ ಆಯ್ಕೆ ವೇಳೆ ಮತಚಲಾಯಿಸುವ ಹಕ್ಕು ಹೊಂದಿರುವ ನಾಲ್ವರು ಶಾಸಕರ ಪೈಕಿ ಇಬ್ಬರು ಬಿಜೆಪಿಯವರಾಗಿದ್ದಾರೆ. ಇನ್ನು, ಬೆಳಗಾವಿ ಹಾಗೂ ಚಿಕ್ಕೋಡಿ ಸಂಸದರು ಬಿಜೆಪಿಯವರೇ ಆಗಿದ್ದಾರೆ. 36 ಸದಸ್ಯರ ಜೊತೆಗೆ ಈ ನಾಲ್ಕು ಮತಗಳು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗೆ ಬೀಳಲಿವೆ.

ಯಶಸ್ವಿಯಾಯ್ತು ಬಿಜೆಪಿ ನಾಯಕರ ತಂತ್ರ : ಇತಿಹಾಸದಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ನಾಡದ್ರೋಹಿ ಎಂಇಎಸ್‍ ಅನ್ನು ಮನೆಗೆ ಕಳಿಸಿ ದಿಗ್ವಿಜಯ ಸಾಧಿಸಲೆಂದೇ ಬಿಜೆಪಿ ಹಲವು ತಂತ್ರಗಳನ್ನು ಹೆಣೆದಿತ್ತು. ಅದರಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಲೋಕಸಭೆ ಉಪಚುನಾವಣೆಗೂ ಮುನ್ನವೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆ ಮೇಲೆ ಎದುರಿಸುವುದಾಗಿ ಬಿಜೆಪಿ ಘೋಷಿಸಿತ್ತು. ಬಳಿಕ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ನೀರಸ ಗೆಲುವಿನಿಂದ ಕಂಗೆಟ್ಟಿದ್ದ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಮರಾಠಾ ಸಮುದಾಯದ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಈ ತಂತ್ರಗಾರಿಕೆ ಬಿಜೆಪಿಗೆ ವರವಾಗಿ ಪರಣಮಿಸಲು ಕಾರಣವಾಯಿತು.

ಚುನಾವಣೆ ಸಿದ್ಧತೆಗೆ ಅವಧಿ ಕಡಿಮೆ ಇದ್ದರೂ ಸಾಮೂಹಿಕ ನಾಯಕತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಿತ್ತು. ಆಕಾಂಕ್ಷಿಗಳು ಹೆಚ್ಚಿದ್ದರೂ ಎಲ್ಲರನ್ನು ಸಮಾಧಾನಪಡಿಸುವಲ್ಲಿ ಹಾಗೂ ಬಂಡಾಯ ಸದಸ್ಯರನ್ನು ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪಕ್ಷದ ಆದೇಶ ಉಲ್ಲಂಘಿಸಿದ 10 ಜನರನ್ನು ಉಚ್ಛಾಟಿಸುವ ಮೂಲಕ ಬಿಜೆಪಿ ಬಂಡಾಯ ಸದಸ್ಯರಿಗೆ ಎಚ್ಚರಿಕೆಯನ್ನು ರವಾನಿಸಿತ್ತು.

ಓದಿ: ಇದೇ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ ಕುಂದಾನಗರಿ.. ಕಾಂಗ್ರೆಸ್, ಎಂಇಎಸ್ ಧೂಳೀಪಟ

ಅಲ್ಲದೇ ಪ್ರತಿವಾರ್ಡ್‍ಗೆ ಓರ್ವ ಶಾಸಕರು, ಬಿಬಿಎಂಪಿ ಸದಸ್ಯರಿಗೆ ಉಸ್ತುವಾರಿ ನೀಡಲಾಗಿತ್ತು. ಅಲ್ಲದೇ ಹಲವು ಜನ ಸಚಿವರು ಪ್ರತಿ ವಾರ್ಡ್‍ಗೆ ಸಂಚರಿಸಿ ಮತಯಾಚನೆ ಮಾಡಿದ್ದರು. ಈ ಎಲ್ಲ ತಂತ್ರಗಾರಿಕೆಗಳು ಬಿಜೆಪಿ ಪಾಲಿಕೆಯನ್ನು ವಶಕ್ಕೆ ಪಡೆಯುವಲ್ಲಿ ಮುಖ್ಯ ಕಾರಣವಾಯಿತು.

ಗಡಿ ಜಿಲ್ಲೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್ : ಪಕ್ಷದ ಚಿಹ್ನೆಗಿಂತ ಸ್ವತಂತ್ರವಾಗಿ ಸ್ಪರ್ಧಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಒಲವು ತೋರಿದ್ದರು. ಆದರೆ, ಹೈಕಮಾಂಡ್ ಪಕ್ಷದ ಚಿಹ್ನೆ ಮೇಲೆ ಚುನಾವಣೆ ಎದುರಿಸುವಂತೆ ನೀಡಿದ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಚಿಹ್ನೆ ಮೇಲೆ ಸ್ಪರ್ಧಿಸಲು ಸ್ಥಳೀಯ ನಾಯಕರು ನಿರ್ಧರಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಫಿರೋಜ್ ಸೇಠ್ ನಡುವಿನ ಮನಸ್ತಾಪ ಪಕ್ಷದ ಹಿನ್ನಡೆಗೆ ಕಾರಣವಾಯಿತು ಎನ್ನಲಾಗುತ್ತಿದೆ. ಪ್ರಚಾರದ ಸಮಯದಲ್ಲಿಯೂ ಕೂಡ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವಲ್ಲಿ ವಿಫಲರಾದರು.

ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕದೇ ಬೆಂಬಲಿಗರಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ನಾಯಕರು ಕೈಸುಟ್ಟುಕೊಳ್ಳಲು ಮುಖ್ಯ ಕಾರಣವಾಯಿತು. ಎಂಐಎಂ ಹಾಗೂ ಆಮ್ ಆದ್ಮಿ ಪಕ್ಷದ ಸ್ಪರ್ಧೆಯಿಂದ ಕೂಡ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ವಿಭಜನೆಗೊಂಡವು. ಈ ಸಂಗತಿಯೂ ಕಾಂಗ್ರೆಸ್ ಹಿನ್ನಡೆಗೆ ಕಾರಣ ಎನ್ನಲಾಗುತ್ತಿದೆ.

ಖಾತೆ ತೆರೆದ ಎಂಐಎಂ, ಶೂನ್ಯ ಸುತ್ತಿದ ಆಪ್-ಜೆಡಿಎಸ್ : ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ಜೊತೆಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್, ಎಂಐಎಂ ಹಾಗೂ ಆಮ್ ಆದ್ಮಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಜೆಡಿಎಸ್ 11 ವಾರ್ಡ್‍ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಒಂದೂ ಕ್ಷೇತ್ರದಲ್ಲಿ ಜೆಡಿಎಸ್​ ಗೆಲುವು ಸಾಧಿಸಿಲ್ಲ. ಯಾವ ಕ್ಷೇತ್ರದಲ್ಲೂ ಇತರ ಪಕ್ಷಗಳಿಗೆ ಪೈಪೋಟಿ ನೀಡಲು ಜೆಡಿಎಸ್ ಅಭ್ಯರ್ಥಿಗಳಿಗೆ ಸಾಧ್ಯವಾಗಲಿಲ್ಲ.

ಓದಿ: ಕಲಬುರಗಿ ಪಾಲಿಕೆ ಎಲೆಕ್ಷನ್​: ಕಾಂಗ್ರೆಸ್​ - ಬಿಜೆಪಿ ಸಮಬಲ, 3 ವಾರ್ಡ್​ಗಳಲ್ಲಿ ಜೆಡಿಎಸ್​​​ಗೆ ಜಯ

ಇನ್ನು, ದೆಹಲಿ ಸರ್ಕಾರದ ಮಾದರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ ಹೊಸ ಸಂಚಲನ ಮೂಡಿಸಿದ್ದ ಆಪ್ ಕೂಡ ಬೆಳಗಾವಿ ಪಾಲಿಕೆ ಚುನಾವಣೆಯ ಅಖಾಡಕ್ಕೆ ಧುಮಕಿತ್ತು. 28 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಆಪ್ ಕೆಲ ವಾರ್ಡ್‍ಗಳಲ್ಲಿ ಫೈಟ್ ಕೊಟ್ಟಿತಾದರೂ ಒಂದೂ ಸ್ಥಾನ ಗೆಲ್ಲಲಿಲ್ಲ.

ಮಹಾನಗರದ 6 ವಾರ್ಡ್‍ಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆದಿದೆ. ಉಳಿದ ಐದು ಸ್ಥಾನಗಳಲ್ಲಿ ಸೋತರೂ ಎದುರಾಳಿಗೆ ಉತ್ತಮ ಫೈಟ್ ನೀಡಿದೆ.

ಕೊನೆಗೂ ಅರಳಿದ ಕಮಲ : 36 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯು ಮ್ಯಾಜಿಕ್ ನಂಬರ್ ತಲುಪಿದೆ. ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯ ಸ್ಥಾಪಿಸಿದೆ.

Last Updated : Sep 6, 2021, 7:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.