ETV Bharat / state

ರಾಜ್ಯಸಭಾ ಚುನಾವಣೆ: ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್ ಪಡೆದ ಬಿಜೆಪಿ

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿತ್ತು. ಶಾಸಕರ ಮತ ಹಾಕಿಸಲು ಮೂವರು ಸಚಿವರಿಗೆ ಜವಾಬ್ದಾರಿ ನೀಡಿದ್ದು, ಸಚಿವರಾದ ಆರ್. ಅಶೋಕ್, ವಿ. ಸುನೀಲ್ ಕುಮಾರ್ ಮತ್ತು ಬಿ.ಸಿ. ನಾಗೇಶ್ ಅವರಿಗೆ ಮೂರು ತಂಡಗಳಲ್ಲಿ ಮತ ಹಾಕಿಸಲು ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್​ ಪಡೆಯಲಾಗಿದೆ.

ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್ ಪಡೆ ಬಿಜೆಪಿ
ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್ ಪಡೆ ಬಿಜೆಪಿ
author img

By

Published : Jun 8, 2022, 10:42 PM IST

Updated : Jun 9, 2022, 10:27 AM IST

ಬೆಂಗಳೂರು: ಇಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನೀಡಿದ್ದ ವಿಪ್​ನ್ನು ಬಿಜೆಪಿ ದಿಢೀರ್​ ವಾಪಸ್​ ಪಡೆದಿದೆ. ಹಾಗೆ ನಾಳೆಯ ಸಭೆಯಲ್ಲಿ ಹೊಸದಾಗಿ ಮತ್ತೆ ವಿಪ್ ನೀಡಲಿದೆ. ಇಂದು ನೀಡಿರುವ ವಿಪ್ ನಲ್ಲಿ ಕಡ್ಡಾಯ ಹಾಜರಾತಿ ಎಂದು ಉಲ್ಲೇಖ ಇಲ್ಲದ ಕಾರಣ ವಿಪ್ ವಾಪಸ್ ಪಡೆಯಲಾಗಿದೆ.

ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿತ್ತು. ಶಾಸಕರ ಮತ ಹಾಕಿಸಲು ಮೂವರು ಸಚಿವರಿಗೆ ಜವಾಬ್ದಾರಿ ನೀಡಿದ್ದು, ಸಚಿವರಾದ ಆರ್. ಅಶೋಕ್, ವಿ. ಸುನೀಲ್ ಕುಮಾರ್ ಮತ್ತು ಬಿ.ಸಿ. ನಾಗೇಶ್ ಅವರಿಗೆ ಮೂರು ತಂಡಗಳಲ್ಲಿ ಮತ ಹಾಕಿಸಲು ಈ ಮೂವರು ಸಚಿವರಿಗೆ ಜವಾಬ್ದಾರಿ ವಹಿಸಲಾಗಿತ್ತು.

ನಗರಸ ಖಾಸಗಿ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಚುನಾವಣಾ ಉಸ್ತುವಾರಿ ಕಿಶನ್ ರೆಡ್ಡಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಜರುಗಿದೆ. ಸಭೆಯಲ್ಲಿ ಸಚಿವರು, ಶಾಸಕರು ಭಾಗಿ ಬಿಜೆಪಿ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಾದ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಹಾಜರಾಗಿದ್ದು, ವಿಧಾನ ಪರಿಷತ್ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಹಲವು ಸಚಿವರು ಮತ್ತು ಶಾಸಕರು ಸಭೆಯಲ್ಲಿ ಹಾಜರಿರಲಿಲ್ಲ.

ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್ ಪಡೆ ಬಿಜೆಪಿ
ಕೊನೇ ಗಳಿಗೆಯಲ್ಲಿ ವಿಪ್​ ವಾಪಸ್ ಪಡೆ ಬಿಜೆಪಿ

ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಶಾಸಕರಾದ ರಮೇಶ್ ಜಾರಕಿಹೊಳಿ, ಸೇರಿದಂತೆ ಹಲವರು ಸಭೆಗೆ ಆಗಮಿಸಿರಲಿಲ್ಲ. ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರದಲ್ಲಿರುವ ಕಾರಣ ಹಲವು ಶಾಸಕರು ಗೈರಾಗಿದ್ದು, ಇಂದಿನ ಸಭೆಯಲ್ಲಿ 50 ರಿಂದ 60 ಶಾಸಕರು ಮಾತ್ರ ಭಾಗಿಯಾಗಿದ್ದರು.

ಭಾಗಿಯಾದ ಶಾಸಕರು: ಶಾಸಕರಾದ ಸೋಮಲಿಂಗಪ್ಪ, ರಾಮಪ್ಪ ಲಮಾಣಿ, ಈಶ್ವರಪ್ಪ, ಎಂ ಕೃಷ್ಣಪ್ಪ, ಹೊಳೆಲ್ಕೆರೆ ಚಂದ್ರಪ್ಪ, ಕಳಕಪ್ಪ ಬಂಡಿ, ಸಚಿವರಾದ ಅಶ್ವತ್ಥ್​ ನಾರಾಯಣ್, ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ ಜಗ್ಗೇಶ್, ಸುರೇಶ್ ಕುಮಾರ್, ಕೆ ಜೆ ಭೋಪಯ್ಯ, ಗೂಳಿಹಟ್ಟಿ ಶೇಖರ್, ಎಂಪಿ ಕುಮಾರಸ್ವಾಮಿ, ಸಚಿವ ಮಾಧುಸ್ವಾಮಿ, ಮುನಿರತ್ನ, ಅರುಣ್ ಕುಮಾರ್, ಸೋಮಶೇಖರ್ ರೆಡ್ಡಿ, ತಿಪ್ಪಾರೆಡ್ಡಿ, ಸಚಿವ ಸುಧಾಕರ್, ವೇದವ್ಯಾಸ್ ಕಾಮತ್, ಸಚಿವ ಆರ್ ಅಶೋಕ್, ಶರಣು ಸಲಗಾರ್, ಎಂ ಪಿ ರೇಣುಕಾಚಾರ್ಯ, ಸಿ ಟಿ ರವಿ, ಬೆಳ್ಳಿ ಪ್ರಕಾಶ್, ಎಸ್ ಅಂಗಾರ, ರಾಜ್ ಕುಮಾರ್ ಪಾಟೀಲ್ ತೇಲ್ಕೂರ್, ಮಾಡಾಳ್ ವಿರೂಪಾಕ್ಷಪ್ಪ, ಶಿವರಾಮ್ ಹೆಬ್ಬಾರ್, ದಿನಕರ್ ಶೆಟ್ಟಿ, ಸುನೀಲ್ ನಾಯಕ್, ಸುಭಾಷ್ ಗುತ್ತೇದಾರ್, ರಾಜೇಶ್ ಗೌಡ, ಉಮೇಶ್ ಕತ್ತಿ, ರಮೇಶ್ ಭೂಸನೂರ್, ಪ್ರೀತಮ್ ಗೌಡ, ಮಹಂತೇಶ್ ದೊಡ್ಡೇಗೌಡ, ಎನ್ ಮಹೇಶ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಎಸ್ ಟಿ ಸೋಮಶೇಖರ್, ಬಸವರಾಜ್ ದಡೆಸುಗೂರ್, ದತ್ತಾತ್ರೇಯ ಪಾಟೀಲ್ ರೇವೂರ್, ದೊಡ್ಡನಗೌಡ ಪಾಟೀಲ್, ನೆಹರು ಓಲೇಕಾರ್, ರಾಜೇಶ್ ನಾಯಕ್, ಎಸ್ ಆರ್ ವಿಶ್ವನಾಥ್, ರವಿ ಸುಬ್ರಹ್ಮಣ್ಯ ಭಾಗಿಯಾಗಿದ್ದರು.

ಇಂದು ವಿಪ್ ಜಾರಿ: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಪಕ್ಷದ ಶಾಸಕರಿಗೆ ನೀಡಲಾಗಿದ್ದ ವಿಪ್ ತಾಂತ್ರಿಕ ಕಾರಣದಿಂದಾಗಿ ನಿನ್ನೆ ಬಿಜೆಪಿ ವಾಪಸ್ ಪಡೆದಿದ್ದು, ಇಂದು ಮತ್ತೊಮ್ಮೆ ಹೊಸದಾಗಿ ವಿಪ್ ಜಾರಿಗೊಳಿಸಲಾಗುತ್ತದೆ ಎಂದು ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಯಾರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎನ್ನುವ ಸೂಚನೆ ನೀಡಲಾಗಿದೆ ಆದರೂ ಪ್ರಾಶಸ್ತ್ಯದ ಮತಗಳ ವಿಚಾರದಲ್ಲಿ ಕೆಲ ಗೊಂದಲ ಸೃಷ್ಟಿಯಾಗಿದ್ದು, ಆ ಕುರಿತ ಅನುಮಾನಗಳನ್ನು ಪರಿಹರಿಸುವ ಜವಾಬ್ದಾರಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ‌ಸಿ ಮಾಧುಸ್ವಾಮಿ ಅವರಿಗೆ ವಹಿಸಲಾಗಿದೆ. ನಾಳಿನ ಸಭೆಯಲ್ಲಿ ಗೊಂದಲ ಕುರಿತು ಸ್ಪಷ್ಟೀಕರಣ ನೀಡಲಿದ್ದಾರೆ ಎಂದರು.

ಕ್ಷೇತ್ರದ ಸಮಸ್ಯೆ ಪ್ರಸ್ತಾಪಕ್ಕೆ ಅವಕಾಶ ನೀಡಲಿಲ್ಲ: ಇನ್ನು ಬಿಜೆಪಿಯ ಶಾಸಕಾಂಗ ಪಕ್ಷದ ಇಂದಿನ ಸಭೆಯಲ್ಲಿ ಶಾಸಕರ ಕ್ಷೇತ್ರದ ಸಮಸ್ಯೆ ಬಗ್ಗೆ ದನಿ ಎತ್ತಲು ಎದ್ದು ನಿಂತ ಕಳಕಪ್ಪ ಬಂಡಿಗೆ ಅವಕಾಶ ನಿರಾಕರಿಸಲಾಯಿತು. ಬಂಡಿ ಮಾತು ಆರಂಭಿಸುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ಕಟೀಲ್, ಇಂದಿನ ಸಭೆ ಕೇವಲ ರಾಜ್ಯಸಭಾ ಚುನಾವಣೆಗೆ ಸೀಮಿತ ಎಂದು ಸ್ಪಷ್ಟಪಡಿಸಿ ಕಳಕಪ್ಪ ಬಂಡಿಯನ್ನು ಸುಮ್ಮನೆ ಕೂರಿಸಿದರು. ರಾಜ್ಯಸಭಾ ಚುನಾವಣೆ ಸಮಯದಲ್ಲಿ ಕ್ಷೇತ್ರದ ಬೇರೆ ವಿಚಾರ ಚರ್ಚೆ ಆದರೆ ನೆಗೆಟಿವ್ ವಿಚಾರಗಳು, ವಿಪಕ್ಷಗಳಿಗೆ ಆಹಾರ ಆಗಬಾರದು ಎಂದು ಮುನ್ನೆಚ್ಚರಿಕೆಯಿಂದ ಸಿಎಂ ಮತ್ತು ಕಟೀಲ್ ಈ ನಿರ್ಧಾರ ಕೈಗೊಂಡಿದ್ದಾರೆ‌.

Last Updated : Jun 9, 2022, 10:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.