ETV Bharat / state

ಸಿದ್ದರಾಮಯ್ಯನವರೇ, ಕಿಸ್ ಕಾ ಸಾಥ್ ಕಿಸ್ ಕಾ ವಿಕಾಸ್?.. ಮಾಜಿ ಸಿಎಂ ವಿರುದ್ಧ ಬಿಜೆಪಿ ಟ್ವೀಟ್‌ ಕಿಡಿ

author img

By

Published : Oct 19, 2021, 4:41 PM IST

ಸಿದ್ದರಾಮಯ್ಯ ಖಡ್ಗ ಹಿಡಿದ ಫೋಟೋ ಪ್ರಕಟಿಸಿ, ಇದೇ ಖಡ್ಗದ ಮೂಲಕ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುವುದಕ್ಕೆ ಸಿದ್ದರಾಮಯ್ಯ ಪ್ರೋತ್ಸಾಹ ನೀಡಿದ್ದರು. ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು. ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ವ್ಯಂಗ್ಯವಾಡಿದೆ..

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು : ಸಿದ್ದರಾಮಯ್ಯ ಅವರೇ, ಯಾರನ್ನು ಓಲೈಸಲು ನೀವು ಅಲ್ಪ ಸಂಖ್ಯಾತರಿಗೆ ನೀಡುವ ಅನುದಾನ ಹೆಚ್ಚಿಸಿದ್ದೆ ಎನ್ನುವ ಮಾತನ್ನು ಹೇಳಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ. ಚುನಾವಣೆ, ಉಪಚುನಾವಣೆ ಎದುರಾದಾಗಲೆಲ್ಲ ನಿಮ್ಮ ವರಸೆ ಇದೇ ರೀತಿ ಬದಲಾಗುತ್ತದೆ. ಬಹುಸಂಖ್ಯಾತರ ಮೇಲೆ ದ್ವೇಷ ಕಕ್ಕುವುದು, ಅಲ್ಪಸಂಖ್ಯಾತರನ್ನು ಓಲೈಸುವುದು ನಿಮ್ಮ ಖಯಾಲಿಯಾಗಿದೆ ಎಂದು ಬಿಜೆಪಿ ಟೀಕಿಸಿ ಟ್ವೀಟ್ ಮಾಡಿದೆ.

  • ಮಾನ್ಯ @siddaramaiah ಅವರೇ,

    ಯಾರನ್ನು ಓಲೈಸಲು ನೀವು ಈ ಮಾತನ್ನು ಹೇಳಿದ್ದೀರಿ ಎಂದು ರಾಜ್ಯದ ಜನತೆಗೆ ತಿಳಿದಿದೆ.

    ಚುನಾವಣೆ, ಉಪಚುನಾವಣೆ ಎದುರಾದಾಗಲೆಲ್ಲ ನಿಮ್ಮ ವರಸೆ ಇದೇ ರೀತಿ ಬದಲಾಗುತ್ತದೆ.

    ಬಹುಸಂಖ್ಯಾತರ ಮೇಲೆ ದ್ವೇಷ ಕಕ್ಕುವುದು, ಅಲ್ಪಸಂಖ್ಯಾತರನ್ನು ಓಲೈಸುವುದು ನಿಮ್ಮ ಖಯಾಲಿಯಾಗಿಬಿಟ್ಟಿದೆ.

    1/4#ಬುರುಡೆರಾಮಯ್ಯ pic.twitter.com/kpHhoiU1Oe

    — BJP Karnataka (@BJP4Karnataka) October 19, 2021 " class="align-text-top noRightClick twitterSection" data=" ">

ಬುರುಡೆರಾಮಯ್ಯ ಹೆಸರಿನ ಹ್ಯಾಷ್ ಟ್ಯಾಗ್‌ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ, ಈ ರೀತಿ ಸುತ್ತಿ ಬಳಸಿ ಮಾತನಾಡುವ ಬದಲು, ಬಹು ಸಂಖ್ಯಾತರನ್ನ ತುಳಿದು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುದಾನ ನೀಡಿದ್ದೇನೆ. ಹೀಗಾಗಿ, ಮುಂದಿನ ಬಾರಿ ಚಾಮರಾಜಪೇಟೆಗೆ ವಲಸೆ ಹೋಗುತ್ತೇನೆ ಎಂದು ನೇರವಾಗಿಯೇ ಹೇಳಬಹುದಲ್ಲವೇ? ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯ ಖಡ್ಗ ಹಿಡಿದ ಫೋಟೋ ಪ್ರಕಟಿಸಿ, ಇದೇ ಖಡ್ಗದ ಮೂಲಕ ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಸುವುದಕ್ಕೆ ಸಿದ್ದರಾಮಯ್ಯ ಪ್ರೋತ್ಸಾಹ ನೀಡಿದ್ದರು. ಒಂದು ವರ್ಗದ ಓಲೈಕೆಗಾಗಿ ಮಾಡಿದ ಪ್ರಹಸನದಿಂದಾಗಿಯೇ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಗೆ ಓಡುವಂತಾಗಿತ್ತು. ಆದರೂ, ಸಿದ್ದರಾಮಯ್ಯ ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ವ್ಯಂಗ್ಯವಾಡಿದೆ.

ಬಾದಾಮಿಯಿಂದ ಮತ್ತೆ ವಲಸೆ ಹೋಗಲು ಸಿದ್ದರಾಮಯ್ಯ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಈಗ ಮತ್ತೆ ಓಲೈಕೆ ರಾಜಕಾರಣದ ಹಾದಿ ಹಿಡಿದಿದ್ದಾರೆ. ಈ ಮೂಲಕ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಲು ಸಿದ್ಧತೆ ನಡೆಸಿದ್ದು ನಿಜವಲ್ಲವೇ? ಸಿದ್ದರಾಮಯ್ಯನವರೇ, ಕಿಸ್ ಕಾ ಸಾತ್ ಕಿಸ್ ಕಾ ವಿಕಾಸ್? ಎಂದು ಪ್ರಶ್ನಿಸಿದೆ.

ಖರ್ಗೆಗೆ ಟಾಂಗ್ : ಮಲ್ಲಿಕಾರ್ಜುನ ಖರ್ಗೆ ಅವರೇ, ಹೌದು, ಕೆಲವೊಮ್ಮೆ "ನಾಮ್ ಬದಲ್" ಅನಿವಾರ್ಯವಾಗುತ್ತದೆ‌. ಬಹು ಕಾಲದಿಂದ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ ಎಂಬಂತಿದ್ದ ನಿಮ್ಮ‌ ಹೆಸರನ್ನು ಬದಲಿಸದೇ‌ ಇದ್ದಿದ್ದರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಇನ್ನಷ್ಟು ಹದಗೆಡುತ್ತಿತ್ತಲ್ಲವೇ? ಕೆಲವು ಹೆಸರುಗಳನ್ನು ಶಾಶ್ವತವಾಗಿ ಬದಲಾಯಿಸಬೇಕೆಂಬುದು ಜನರ ಅಪೇಕ್ಷೆಯೂ ಹೌದು ಎಂದು ಬಿಜೆಪಿ ಟ್ವೀಟ್ ಮೂಲಕ ಖರ್ಗೆ ಅವರಿಗೂ ಟಾಂಗ್ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.