ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಭವನ ಚಲೋ ನಡೆಸಲು ಮುಂದಾಗಿರುವ ಕಾಂಗ್ರೆಸ್ ನಡೆಯನ್ನು ಬಿಜೆಪಿ ಟೀಕಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳನ್ನು ಉದಾಹರಿಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ರಾಜಭವನ ಚಲೋ ಮಾಡುತ್ತಿರುವ ಕಾಂಗ್ರೆಸ್ನ ಕಾಲೆಳೆದಿದೆ.
- 2013-14 - 104
- 2014-15 - 128
- 2015-16 - 1483
- 2016-17 - 1185
- 2018-19 - 900
ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್ ರಾಜಭವನ ಚಲೋ ರ‍್ಯಾಲಿ ನಿಯಂತ್ರಿಸಲು ಪೊಲೀಸರ ಸರ್ಪಗಾವಲು
ಐದು ವರ್ಷದಲ್ಲಿ 3,800 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಅವರ ಕಣ್ಣೀರು ಒರೆಸುವ ಬದಲು ಟಿಪ್ಪು ಜಯಂತಿ ಆಚರಣೆಯಲ್ಲಿ ನಿರತರಾಗಿದ್ದಿರಿ. ಈಗ ರಾಜಭವನ ಚಲೋ ಎಂಬ ನಾಟಕ, ಚೆನ್ನಾಗಿದೆ! ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಹೋರಾಟಕ್ಕೆ ಬಿಜೆಪಿ ಟಾಂಗ್ ನೀಡಿದೆ.