ಬೆಂಗಳೂರು: ಹಿಜಾಬ್ ವಿವಾದವನ್ನು ವಿಷಯಾಂತರ ಮಾಡಲು ಕಾಂಗ್ರೆಸ್ ನಾಯಕರು ಈಶ್ವರಪ್ಪ ಹೇಳಿಕೆ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಯಾವುದೇ ತಪ್ಪು ಮಾಡಿಲ್ಲ, ಅವರ ಹೇಳಿಕೆ ವಿಷಯ ಇಟ್ಟುಕೊಂಡು ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದೊಗೆ ಮಾತನಾಡಿದ ಅವರು, ಸೈನಿಕರ ಸರ್ಜಿಕಲ್ ಸ್ಟ್ರೈಕ್ ಅನ್ನೇ ಅನುಮಾನಿಸಿ ಅದಕ್ಕೆ ಸಾಕ್ಷಿ ಕೇಳಿದ್ದರು. ಅವರಿಗೆ ಈಶ್ವರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ.
ನಮ್ಮ ರಾಷ್ಟ್ರ ಧ್ವಜದ ಬಗ್ಗೆ ರಾಷ್ಟ್ರಭಕ್ತಿ ಬಗ್ಗೆ ಇವರ ಪ್ರಮಾಣ ಪತ್ರ ಬೇಕಿಲ್ಲ, ನಮ್ಮ ಬಾಯಲ್ಲಿ ಮೊದಲು ಬರುವುದೇ ಭಾರತ್ ಮಾತಾ ಕೀ ಜೈ, ಅದಿಲ್ಲದೇ ನಾವು ಭಾಷಣ ಆರಂಭಿಸುವುದೇ ಇಲ್ಲ. ಭಾರತ್ ಮಾತಾಕಿ ಜೈ ಎಂದವರು ಎಬಿವಿಪಿ, ಆರ್ಎಸ್ಎಸ್ನವರು ಎಂದು ಕಾಂಗ್ರೆಸ್ ಸಭೆಯಿಂದ ಹೊರಗೆ ಕಳಿಸುತ್ತಿದ್ದವರು ಈಗ ರಾಷ್ಟ್ರಪ್ರೇಮದ ಬಗ್ಗೆ ನಮಗೆ ಪಾಠ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ಹೈರಾಣಾಗಿದೆ: ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ನವರು ಹೈರಾಣಾಗಿದ್ದು, ಅದರ ವಿಷಯಾಂತರ ಮಾಡಲು ಈಶ್ವರಪ್ಪ ವಿಷಯ ಮಾತನಾಡುತ್ತಿದ್ದಾರೆ. ಈ ವಿಷಯ ಹಿಡಿದುಕೊಂಡು ಯಾರೂ ಏನು ಮಾಡಲು ಸಾಧ್ಯವಿಲ್ಲ. ಅವರು ಯಾವ ತಪ್ಪು ಮಾಡಿಲ್ಲ,ಈಶ್ವರಪ್ಪ ರಾಷ್ಟ್ರಧ್ವಜ ಇಳಿಸಿ ಭಗವಾಧ್ವಜ ಹಾರಿಸುತ್ತೇವೆ ಎಂದಿಲ್ಲ, ರಾಷ್ಟ್ರಧ್ವಜ ಎಲ್ಲರಿಗಿಂತ ಎತ್ತರವಿದೆ.
ಅಭಿಮಾನ ಇರುವರು ಭಗವಾಧ್ವಜ ಹಾರಿಸುತ್ತಾರೆ. ಮೇಲೆ ರಾಷ್ಟ್ರಧ್ವಜ ಕೆಳಗೆ ಭಗವಾಧ್ವಜ ಇದ್ದರೆ ತಪ್ಪೇನು?, ಭಗವದ್ಗೀತಾ ನಮ್ಮ ಆಧ್ಯಾತ್ಮಿಕ ಶೌರ್ಯದ ಸೆಲೆ. ಪ್ರತಿದಿನ ಶಾಖೆಯಲ್ಲಿ ನಾವು ಭಗವಧ್ವಜ ಹಾರಿಸುತ್ತೇವೆ. ಆಗಸ್ಟ್ 15, ಜನವರಿ 26 ರಂದು ಎಲ್ಲಾ ಸರ್ಕಾರಿ ಕಟ್ಟಡ, ನಮ್ಮ ಸಂಘಟನೆಗಳ ಮೇಲೆ ನಾವು ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದರು.
ಭಗವಾಧ್ವಜ ಹೋರಾಟದ ಸಂಕೇತ: ಭಗವಾಧ್ವಜ ಇಲ್ಲದೇ ಇದ್ದರೆ ಮೊಗಲರ ವಿರುದ್ಧ ಹೋರಾಟ ಮಾಡಲು ಸಾಧ್ಯವಿರುತ್ತಿರಲಿಲ್ಲ. ನಮ್ಮ ದೇಶಕ್ಕೆ ದಾಳಿ ಮಾಡಿದವರ ವಿರುದ್ಧ ಹೋರಾಟ ಮಾಡಲು ಲಕ್ಷಾಂತರ ಜನರಿಗೆ ಸ್ಫೂರ್ತಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಮಾತ್ರ ಇತಿಹಾಸವಲ್ಲ.
ಅದಕ್ಕೂ ಹಿಂದೆ ಸತತವಾಗಿ ಹೋರಾಟ ನಡೆಸಲಾಗಿದೆ ಅಂದು ಜನರನ್ನೆಲ್ಲಾ ಒಗ್ಗೂಡಿದ್ದು ಭಗವಾಧ್ವಜವೇ. ಸ್ವಾತಂತ್ರ್ಯ ಬಂದ ನಂತರ ತಿರಂಗ, ಅದಕ್ಕೂ ಮೊದಲು ಭಗವಾಧ್ವಜ. ಇತಿಹಾಸ ಗೊತ್ತಿಲ್ಲದವನು ಇತಿಹಾಸ ಸೃಷ್ಟಿಸಲಾರ, ಭಗವಾಧ್ವಜ ಆರಂಭದ ದಿನದಲ್ಲಿ ಅರ್ಜಿ ಕೊಡುವ ಪಕ್ಷವಾಗಿದ್ದ ಕಾಂಗ್ರೆಸ್ ಅನ್ನು ಹೋರಾಟ ಮಾಡುವ ಪಕ್ಷವಾಗಿ ಬದಲಾಯಿಸಿದೆ.
ಬಾಲಗಂಗಾಧರ ತಿಲಕ್ ಗಣೇಶ ಉತ್ಸವದ ಮೂಲಕ ಭಗವಾಧ್ವಜ ಹಾರಿಸಿ ಜನರನ್ನು ಸಂಘಟಿಸಿದ್ದರು. ಸ್ವಾತಂತ್ರ್ಯ ನಂತರ ನಾವು ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ.
ಅದಕ್ಕಿರುವ ಮರ್ಯಾದೆ ಅತ್ಯುನ್ನತ. ಹಾಗೆಂದು ಭಗವಾಧ್ವಜ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ಗೆ ಇಷ್ಟ ಆಗಲ್ಲ ಎಂದು ಹೊರಹಾಕಲು ಸಾಧ್ಯವೇ?, ಭಗವಾಧ್ವಜ ಇಲ್ಲದ ದಿನ ದೇಶದ ಅಂತಃಸತ್ವವೇ ಹೊರಟು ಹೋಗಲಿದೆ, ಪ್ರಜಾಪ್ರಭುತ್ವವೇ ಇರುವುದಿಲ್ಲ ಎಂದರು.
ರಾಷ್ಟ್ರ ಮೊದಲು- ಪಕ್ಷ ನಂತರ: ನಮಗೆ ರಾಷ್ಟ್ರ ಮೊದಲು, ಪಕ್ಷ ನಂತರ ಆದರೆ ಕಾಂಗ್ರೆಸ್ನವರಿಗೆ ಸೋನಿಯಾ ಮೊದಲು ಪಕ್ಷ ನಂತರ, ರಾಷ್ಟ್ರ ಕಡೆಯದು. ನಾವು ಅಬ್ದುಲ್ ಕಲಾಂ ಅವರಂಥವರನ್ನು ಆರಾಧಿಸುತ್ತೇವೆ.
ಕಾಂಗ್ರೆಸ್ವರಿಗೆ ಒಸಾಮಾ ಬಿನ್ ಲಾಡೆನ್, ಸದ್ದಾಂ ಹುಸೇನ್ ತರದವರು ಗೊತ್ತಿರೋದು, ಅಬ್ದುಲ್ ಕಲಾಂ ಅಬ್ದುಲ್ ನಮಗೆ ಗೊತ್ತು. ಅವರಿಗೆ ಇವರು ಗೊತ್ತಾ? ಅವರಪ್ಪನಾಣೆಗೂ ಅವರಿಗೆ ಗೊತ್ತಿಲ್ಲ.
ಅಬ್ದುಲ್ ಅಮಿತ್ ಯಾರೆಂದು ಅವರಿಗಡ ಗೊತ್ತಿಲ್ಲ, ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ನಮ್ಮ ದೇಶದ ಸೈನ್ಯದ ನೇತೃತ್ವ ವಹಿಸಿದ್ದರು ಅನಿತ್. ಅವರಿಗೆ ಇದು ಗೊತ್ತಾ? ಸದ್ದಾಂ, ಟಿಪ್ಪು ಇಂಥವರು ಮಾತ್ರ ಇವರಿಗೆ ಗೊತ್ತು ಎಂದು ಟೀಕಿಸಿದರು.
ಇದನ್ನೂ ಓದಿ: ಅಹೋರಾತ್ರಿ ಧರಣಿ ನಿರತರೊಂದಿಗೆ ಸಂಧಾನ ವಿಫಲ, ನಾಳೆ ಮತ್ತೆ ಸಭೆ: ಬಿಎಸ್ವೈ