ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ರಾಜ್ಯ ಘಟಕದ ವಕ್ತಾರ ವಿಭಾಗ, ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಮಾಧ್ಯಮ ವಿಭಾಗವನ್ನು ಪುನರ್ ರಚಿಸಿದ್ದಾರೆ. ಇರುವ ಮಾಧ್ಯಮ ಘಟಕವನ್ನೇ ಮುಂದುವರಿಸಿದ್ದು, ವಕ್ತಾರ ಬಳಗದಲ್ಲಿ ಕೆಲವರ ಮುಂದುವರೆಸಿ ಹೊಸಬರಿಗೂ ಅವಕಾಶ ನೀಡಲಾಗಿದೆ.
ಬಿಜೆಪಿಗೆ ಮುಖ್ಯ ವಕ್ತಾರರು ಹಾಗೂ ವಕ್ತಾರರ ನಿಯೋಜನೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಮಾಜಿ ಎಂಎಲ್ಸಿ ಅಶ್ವತ್ಥನಾರಾಯಣ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಿಸಿದ್ದು, ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ, ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ತೇಜಸ್ವಿನಿಗೌಡ, ಕೆ ಎಸ್ ನವೀನ್ ಹಾಗೂ ಎಂ ಜಿ ಮಹೇಶ್, ಹೆಚ್ ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಅಶೋಕ್ ಗೌಡ, ಹೆಚ್ ವೆಂಕಟೇಶ ದೊಡ್ಡೇರಿ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.
ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ ಅವರನ್ನು ನೇಮಿಸಲಾಗಿದೆ. ಮಾಹಿತಿ ತಂತ್ರಜ್ಞಾನದ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರಾಗಿ ಶ್ಯಾಮಲಾ ರಘು ನಂದನ್ ಅವರನ್ನು ನೇಮಕ ಮಾಡಲಾಗಿದೆ. ಮಾಧ್ಯಮ ವಿಭಾಗದ ಸಂಚಾಲಕರಾಗಿ ಕರುಣಾಕರ ಖಾಸಲೆ ಅವರನ್ನು ಮುಂದುವರೆಸಿದ್ದು, ಸಹ ಸಂಚಾಲಕರಾಗಿ ಪ್ರಶಾಂತ್ ಕೆಡಂಜಿಯವರನ್ನು ನಿಯುಕ್ತಿಗೊಳಿಸಲಾಗಿದೆ.
ಹೊಸ ಪದಾಧಿಕಾರಿಗಳ ನೇಮಕ ನಂತರ ವಿವಿಧ ವಿಭಾಗಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಇಂದು ಮತ್ತಷ್ಟು ಪ್ರಮುಖರಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ.
ಇದನ್ನೂಓದಿ:ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ