ETV Bharat / state

ಪಕ್ಷದ ರಥಯಾತ್ರೆ, ಸಮಾವೇಶಗಳ ಸಫಲಕ್ಕೆ ಎಸ್ಸಿ ಮೋರ್ಚಾ ಸಾಥ್​​: ಛಲವಾದಿ ನಾರಾಯಣಸ್ವಾಮಿ - 5 ಸಾವಿರಕ್ಕೂ ಮೀರಿ ನಮ್ಮ ಕಾರ್ಯಕರ್ತರು

ಚುನಾವಣೆ ಹಿನ್ನೆಲೆ ಸಕ್ರಿಯವಾಗಿ ಭಾಗಿಯಾಗುವ ಸಂಬಂಧ ಇಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಪಕ್ಷದ ರಥಯಾತ್ರೆ, ಸಮಾವೇಶಗಳ ಸಫಲಕ್ಕೆ ಎಸ್ಸಿ ಮೋರ್ಚಾ ಸಾಥ್​​: ಛಲವಾದಿ ನಾರಾಯಣಸ್ವಾಮಿ
bjp-sc-morcha-meeting-for-election-purpose
author img

By

Published : Feb 11, 2023, 4:56 PM IST

ಬೆಂಗಳೂರು: ಎಸ್‍ಸಿ ಮೋರ್ಚಾದ 8ನೇ ರಾಜ್ಯ ಕಾರ್ಯಕಾರಿಣಿ ಸಭೆ ನಡೆದಿದ್ದು, ರಥಯಾತ್ರೆ, ಸಮಾವೇಶಗಳಲ್ಲಿ ಎಸ್‍ಸಿ ಮೋರ್ಚಾವು ಸಕ್ರಿಯವಾಗಿ ಭಾಗವಹಿಸಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಗಳ ಸಮಾವೇಶದಲ್ಲಿ 25 ಸಾವಿರಕ್ಕೂ ಮೀರಿ ನಮ್ಮ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಎಸ್‍ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆಯಿತು.ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ತಮಟೆ ಕಲಾವಿದ ಚಿಕ್ಕಬಳ್ಳಾಪುರ ಜಿಲ್ಲೆಯ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಲಾಯಿತು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಪಕ್ಷವು ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಪಡೆಯಲು ತೀರ್ಮಾನಿಸಿದೆ. ಅದಕ್ಕೆ ಅನುಗುಣವಾಗಿ ಎಸ್‍ಸಿ ಮೋರ್ಚಾ ತನ್ನ ಚಟುವಟಿಕೆಗಳನ್ನು ಮಾಡಲಿದೆ ಎಂದು ವಿವರಿಸಿದರು.

ಎಸ್‍ಸಿ ಮೋರ್ಚಾ ರಾಷ್ಟ್ರೀಯ ಪ್ರಭಾರಿ ಸೋಗಲ್ ಕುಮಾರ್ ಅವರು ಆಗಮಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪಡೆದ ತಮಟೆ ಮುನಿವೆಂಕಟಪ್ಪ ಅವರು ಮತ್ತು ಪಕ್ಷದ ಮುಖಂಡರು ಉದ್ಘಾಟನೆ ನೆರವೇರಿಸಿದ್ದಾರೆ. ಬಡತನದಲ್ಲಿರುವ ಕಲಾವಿದ ಮುನಿವೆಂಕಟಪ್ಪರಿಗೆ ಸನ್ಮಾನ ಮಾಡಿ 25 ಸಾವಿರ ರೂಪಾಯಿ ಗೌರವಧನವನ್ನಾಗಿ ನೀಡಿದ್ದೇವೆ. ಪ್ರಧಾನಿ ಆದರಣೀಯ ನರೇಂದ್ರ ಮೋದಿ ಅವರ ಸರಕಾರವು ಮುನಿವೆಂಕಟಪ್ಪ ಅವರನ್ನು ಗುರುತಿಸುವ ಮೂಲಕ ಇಡೀ ದಲಿತ ಸಮುದಾಯವನ್ನೇ ಗೌರವಿಸಿದಂತಾಗಿದೆ. ಮೋದಿಜಿ, ಪಕ್ಷಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ಉದ್ದೇಶದಿಂದ ಸಭೆ ನಡೆದಿದೆ. ಹೆಚ್ಚು ಮತದಾರರಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡುವ ದಲಿತ ಸಮುದಾಯಗಳು ಮನಸು ಮಾಡಿದರೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಿದೆ. ಇದುವರೆಗೆ ಬೇರೆ ಬೇರೆ ಪಕ್ಷಗಳಿಗೆ ಅವರು ಮತದಾನ ಮಾಡುತ್ತಿದ್ದರು. ಈಗ ಅವರೆಲ್ಲರೂ ಬುದ್ಧಿವಂತರಾಗಿದ್ದಾರೆ. ಕಾಂಗ್ರೆಸ್ ಸುಡುವ ಮನೆ, ಅಲ್ಲಿ ನಿಮಗೆ ಭವಿಷ್ಯ ಇಲ್ಲ ಎಂದು ಡಾ. ಅಂಬೇಡ್ಕರರು ಹೇಳಿದ್ದನ್ನು ಗಮನಿಸಿ, ಬಾಬಾ ಸಾಹೇಬರನ್ನು ಗೌರವಿಸಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗಳಲ್ಲಿ ಮೋರ್ಚಾಗಳ ಸಮಾವೇಶ ಆಯೋಜನೆ ಮಾಡಲು ರಚಿಸಿರುವ ಸಮಿತಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿದ್ದು, ಪಕ್ಷದ ಆದೇಶ ಹೊರ ಬೀಳುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ಸಮಿತಿಯ ಸಭೆ ನಡೆಸಿ ಸಮಾವೇಶಗಳ ಆಯೋಜನೆಯ ರೂಪುರೇಷೆಗಳ ಕುರಿತು ಚರ್ಚಿಸಿದ್ದರು. ವಿವಿಧ ಮೋರ್ಚಾಗಳ ಅಭಿಪ್ರಾಯ,ಸಲಹೆ ಆಲಿಸಿದ್ದರು.

ಸಮಾವೇಶಗಳ ಸಿದ್ದತೆಗೆ ಸೂಚಿಸಿದ್ದರು ಅದರಂತೆ ಇಂದು ಎಸ್ಸಿ ಮೋರ್ಚಾದ ಕಾರ್ಯಕಾರಿಣಿ ನಡೆಸಿದ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸಮಾವೇಶ ಸಿದ್ದತೆ ಕುರಿತು ಜಿಲ್ಲಾವಾರು ವಿವರಗಳೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ. ಈ ವೇಳೆ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಬಿಜೆಪಿ ಎಸ್. ಸಿ.ಮೋರ್ಚಾ ಉಪಾಧ್ಯಕ್ಷ ದೊಡ್ಡೇರಿ ವೆಂಕಟೇಶ್ ಮತ್ತು ಪಕ್ಷದ ಹಾಗೂ ಮೋರ್ಚಾದ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ನಾನು ಹಿಂದೂ ಅಲ್ವಾ? ನಮ್ಮ ತಂದೆ ತಾಯಿ ಹಿಂದೂ ಅಲ್ವಾ?.. ಸಿದ್ದರಾಮಯ್ಯ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.