ETV Bharat / state

ಚುನಾವಣೆ ಎದುರಿಸಲು ಸನ್ನದ್ಧ, ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದೆ : ಸಿಎಂ ಬೊಮ್ಮಾಯಿ‌ - ETV Bharat kannada News

ಬಿಜೆಪಿ ಪಕ್ಷ ಚುನಾವಣೆ ಎದುರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Chief Minister Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Mar 29, 2023, 5:42 PM IST

Updated : Mar 29, 2023, 6:04 PM IST

ಬಿಜೆಪಿ ಬಲಿಷ್ಠ ಕೇಡರ್ ಇರುವ ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ.

ಬೆಂಗಳೂರು : ಮೇ 10 ನಡೆಯಲಿರುವ ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಲಿಷ್ಠ ಕೇಡರ್ ಇರುವ ಹಾಗೂ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದ್ದು, ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದೆ. ಬೂತ್ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ, ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಚುನಾವಣೆ ಎದುರಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದರು.

ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯ ಸರ್ಕಾರಗಳಿಂದ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಕೊಡಲಾಗಿದೆ. ಎಲ್ಲ ವರ್ಗದವರಿಗೂ ಕಾರ್ಯಕ್ರಮ ಕೊಟ್ಟಿದ್ದು, ಹಲವು ಅಭಿಯಾನ ಮಾಡಿದ್ದೇವೆ. ಸಂಘಟನಾತ್ಮಕ ಚಟುವಟಿಕೆ ನಡೆಯುತ್ತಿದ್ದು, ವಿಜಯ ಸಂಕಲ್ಪ, ಮೋರ್ಚಾ ಸಮಾವೇಶ ನಡೆಸಿದ್ದೇವೆ. ನಾವು ಚುನಾವಣೆ ಎದುರಿಸಲು ಸನ್ನದ್ಧ ಆಗಿದ್ದೇವೆ. 2023 ರ ಮೇ 13 ಕ್ಕೆ ಸ್ಪಷ್ಟ ಬಹುಮತ ಬಿಜೆಪಿಗೆ ಸಿಗಲಿದ್ದು, ಮತ್ತೆ ಬಿಜೆಪಿ ಆಡಳಿತ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎ‌ಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಜನತಾ ಜನಾರ್ದನ ನಮ್ಮ ಪರ : ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ಮೂಲಸೌಕರ್ಯಕ್ಕೆ ನೀಡಿರುವ ಅನುದಾನ, ರಾಜ್ಯ ಸರ್ಕಾರ ಕೈಗೊಂಡಿರುವ ಹಲವಾರು ಜನೋಪಯೋಗಿ ಕಾರ್ಯಕ್ರಮಗಳು, ರೈತಾಪಿ ವರ್ಗ, ಮಹಿಳೆಯರು, ಯುವಕರು, ಎಸ್ಸಿ/ಎಸ್ಟಿ , ಒಬಿಸಿ ವರ್ಗಕ್ಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ತೆಗೆದುಕೊಂಡ ತೀರ್ಮಾನಗಳು, ಬಡವರಿಗೆ ನೀಡಿರುವ ಪ್ರೋತ್ಸಾಹ, ಗ್ರಾಮೀಣ ಪ್ರದೇಶಗಳಲ್ಲಿ ನೀಡಿರುವ ಕುಡಿಯುವ ನೀರಿನ ಯೋಜನೆ, ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ, ಸ್ತ್ರೀ ಸಾಮರ್ಥ್ಯ, ಸ್ವಾಮಿ ವಿವೇಕಾನಂದ ಯೋಜನೆ, ರೈತ ವಿದ್ಯಾ ನಿಧಿ ಯೋಜನೆಗಳನ್ನು ನೀಡಲಾಗಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಒಳಮೀಸಲಾತಿ ಹೆಚ್ಚಳ, ನೆನೆಗುದಿಗೆ ಬಿದ್ದ ಸಮಸ್ಯೆಗಳಿಗೆ ಪರಿಹಾರ, ಒಬಿಸಿಯಲ್ಲಿ ಬದಲಾವಣೆ ಜನಮಾನಸದಲ್ಲಿ ಪಕ್ಷ ಹಾಗೂ ಸರ್ಕಾರದ ಪರವಾಗಿ ಜನತಾ ಜನಾರ್ದನ ಇದೆ. ಈ ಬಾರಿ ನಮ್ಮ ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ ತೀರ್ಪನ್ನು ಕೇಳುತ್ತಿದ್ದೇವೆ. ಜನರ ಆಶೀರ್ವಾದ ನಮ್ಮ ಪರವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ವಿರೋಧ ಪಕ್ಷದ ಆರೋಪ ಯಶಸ್ವಿಯಾಗಿಲ್ಲ- ಸಿಎಂ : ವಿರೋಧ ಪಕ್ಷದವರು ಹಲವಾರು ಆರೋಪಗಳನ್ನು ಮಾಡಿದ್ದು, ಅವರು ಮಾಡಿರುವ ಯಾವುದೇ ಆರೋಪ ಯಶಸ್ವಿ ಆಗಿಲ್ಲ. ಆರೋಪಗಳು ಜನರ ಮಧ್ಯೆ ನಿಂತಿಲ್ಲ. ಭ್ರಷ್ಟಾಚಾರದ ವಿಚಾರ ಸೇರಿದಂತೆ ಎಲ್ಲವೂ ಅವರಿಗೆ ತಿರುಗುಬಾಣವಾಗಿದೆ. ಅವರ ಮೇಲೆಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ನಮ್ಮ ಶಾಸಕರ ಮೇಲೆ ದಾಳಿ ಮಾಡಿರುವುದು, ನಾವು ಲೋಕಾಯುಕ್ತವನ್ನು ಬಲ ಪಡಿಸಿದ್ದರಿಂದ‌ ನ್ಯಾಯಸಮ್ಮತವಾಗಿ ಅಧಿಕಾರ ನೀಡಿದ್ದರಿಂದ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಮುಚ್ಚಿದ್ದು ಕಾಂಗ್ರೆಸ್‌ನವರು. ನಾವು ಹಿಂಜರಿಯುವ ಪ್ರಶ್ನೆ ಇಲ್ಲ. ಎಲ್ಲ ವರ್ಗದವರ ಬೆಂಬಲ ನಮ್ಮ ಪರ ಇದೆ. ಕಾಂಗ್ರೆಸ್ ನವರು ಹತಾಷರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕಿಡಿಕಾರಿದರು.

ಕಾಂಗ್ರೆಸ್ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಿದ್ದೇವೆ. ನಮ್ಮ ಪಕ್ಷದ ಯಾವುದೇ ಶಾಸಕರು ಕಾಂಗ್ರೆಸ್​ಗೆ ಹೋಗುವುದಿಲ್ಲ. ಎಲ್ಲರೂ ನಮ್ಮವರೇ ಯಾರೂ ವಲಸಿಗರಲ್ಲ ನಮ್ಮ ಶಾಸಕರಿಗೆ ಡಿ ಕೆ ಶಿವಕುಮಾರ್​ ಕರೆ ಮಾಡಿ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದ್ದು, ಶಾಸಕರ ವಿರುದ್ಧ ಕಾಂಗ್ರೆಸ್​ನಲ್ಲೂ ಅಸಮಾಧಾನ ಇದೆ ಎಂದು ಸಿಎಂ ಹೇಳಿದರು.

ಚುನಾವಣೆ ನೀತಿ ಸಂಹಿತೆ ಬಿಸಿ : ಸಿಎಂ ಬೊಮ್ಮಾಯಿ‌ ಸೇರಿ ಸಚಿವರಿಗೆ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿದೆ.‌ ಚುನಾವಣೆ ನೀತಿ ಸಂಹಿತೆ ಜಾರಿಯಾದ ಇಂದಿನಿಂದಲೇ ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರಿನಲ್ಲಿ ಸಂಚಾರ ಆರಂಭಿಸಿದರು. ಸಿಎಂ ಬೊಮ್ಮಾಯಿ ಸರ್ಕಾರಿ ವಾಹನವನ್ನು ತಮ್ಮ ಸರ್ಕಾರಿ ನಿವಾಸದಲ್ಲಿ ಬಿಟ್ಟು ಖಾಸಗಿ ಕಾರಿನಲ್ಲಿ ಆರ್ ಟಿ ನಗರದ ನಿವಾಸಕ್ಕೆ ತೆರಳಿದರು. ಉಳಿದಂತೆ ಸಚಿವರಾದ ವಿ. ಸೋಮಣ್ಣ, ಮುನಿರತ್ನ, ಆರ್.ಅಶೋಕ್, ಶಿವರಾಂ ಹೆಬ್ಬಾರ್ ಸೇರಿ ಹಲವು ಸಚಿವರು ತಮ್ಮ ಸರ್ಕಾರಿ ವಾಹನಗಳನ್ನು ಬಿಟ್ಟು ಖಾಸಗಿ ವಾಹನದಲ್ಲಿ ಸಂಚಾರ ನಡೆಸಿದರು.

ಇದನ್ನೂ ಓದಿ : ಕಾಂಗ್ರೆಸ್​ ಜನರನ್ನು ಭಿಕ್ಷುಕರಂತೆ ಕಾಣುತ್ತಿದೆ: ಸಿಎಂ ಬೊಮ್ಮಾಯಿ ಕಟುಟೀಕೆ

Last Updated : Mar 29, 2023, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.