ETV Bharat / state

ಸತೀಶ್ ಜಾರಕಿಹೊಳಿ ಉಚ್ಛಾಟನೆ ಮಾಡದಿದ್ದರೆ ಕಾಂಗ್ರೆಸ್ ಹಿಂದೂ ವಿರೋಧಿ ಅನ್ನೋದು ಸಾಬೀತಾಗುತ್ತೆ:  ಛಲವಾದಿ ನಾರಾಯಣಸ್ವಾಮಿ - ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹನ

ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ. ಇಂತಹ ಹುಚ್ಚರಿಗೆ ಅಮಾವಾಸ್ಯೆ ಹುಣ್ಣಿಮೆಯ ಹಿಂದಿನ ಮುಂದಿನ ದಿನ ಆಗಾಗ ತಲೆ ಕೆಡುತ್ತದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರ ಹಿಂದೂ ಶಬ್ದ ಅವಾಚ್ಯ ಎಂಬ ಹೇಳಿಕೆ ವಿರುದ್ದ ಬಿಜೆಪಿ ಎಂಎಲ್​ಸಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ
author img

By

Published : Nov 9, 2022, 5:15 PM IST

ಬೆಂಗಳೂರು: ಶಾಸಕ ಸತೀಶ್ ಜಾರಕಿಹೊಳಿಯನ್ನು ಉಚ್ಛಾಟನೆ ಮಾಡದೇ ಇದ್ದರೆ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಸಾಬೀತಾಗುತ್ತದೆ ಎಂದು ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬುಧವಾರ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಹಿಂದೂ ವಿರೋಧಿ ಹೇಳಿಕೆ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷ ಮತ್ತು ಸತೀಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರ ಕೂಗಿ ಶಾಸಕ ಸ್ಥಾನದಿಂದ ಕಿತ್ತೊಗೆಯುವಂತೆ ಆಗ್ರಹಿಸಲಾಯಿತು.

ಬಿಜೆಪಿ ಎಂಎಲ್​ಸಿ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿದರು

ಕಾಂಗ್ರೆಸ್ ಅಂದರೆ ಪುಂಡರ ಗುಂಪು: ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಸ್ವಾಮಿ, ಇಂತಹ ಹೇಳಿಕೆಗಳು ಕಾಂಗ್ರೆಸ್​ನಲ್ಲಿ ಹೊಸದೇನಲ್ಲ. ಕಾಂಗ್ರೆಸ್ ಅಂದರೆ ಪುಂಡರ ಗುಂಪು. ಅದನ್ನು ಅವರೇ ಬೀದಿಗೆ ಇಟ್ಟು ಪ್ರದರ್ಶಿಸಿದ್ದಾರೆ. ಇಂತಹ ಹುಚ್ಚರಿಗೆ ಅಮಾವಾಸ್ಯೆ ಹುಣ್ಣಿಮೆಯ ಹಿಂದಿನ ಮುಂದಿನ ದಿನ ಆಗಾಗ ತಲೆ ಕೆಡುತ್ತದೆ. ಹಿಂದುತ್ವವನ್ನು ಅನುಮಾನ ಪಡುವವರು ಅವರ ತಂದೆ ತಾಯಿಯನ್ನೂ ಅನುಮಾನ ಪಡುತ್ತಾರೆ.

ಕೇಸರಿ ಬಣ್ಣ ಕಂಡರೆ ಅವರು ಮೂರ್ಛೆ ಹೋಗುತ್ತಾರೆ ಹಾಗೂ ಬಿಳಿ ಟೋಪಿ ಹಾಕಿಸಿಕೊಂಡು ತಲೆ ಬಾಗುತ್ತಾರೆ. ಹಿಂದೂ ಮತ್ತು ಬೌದ್ಧ ಧರ್ಮ ಸನಾತನ ಧರ್ಮಗಳು, ಹಾಗಾದರೆ ಮಲ್ಲಿಕಾರ್ಜುನ ಖರ್ಗೆಯವರೇ ನೀವು ಹಿಂದೂ ವಿರೋಧಿಯಾಗಿದ್ದರೆ, ಬೌದ್ಧ ಧರ್ಮ ಏನು? ನಿಮ್ಮ ಹುಟ್ಟು ನಮಗೆ ಅನುಮಾನ ಕಾಡುತ್ತದೆ ಹಾಗೂ ಹಿಂದೂ ಧರ್ಮ ಅವಮಾನಕರ ಆಗಿದ್ದರೆ ನೀವು ಹುಟ್ಟಿದ್ದೆಲ್ಲಿ? ಎಂದು ವ್ಯಂಗವಾಡಿದರು.

ಸಿದ್ದರಾಮಯ್ಯಗೆ ಸಂಸ್ಕಾರ ಇಲ್ಲ: ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಹಿಂದೂತ್ವ ವಿರೋಧಿ, ಆರ್​ಎಸ್​ಎಸ್ ಮತ್ತು ಬಿಜೆಪಿ ವಿರುದ್ಧ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಸಿದ್ದರಾಮಯ್ಯಗೆ ಸಂಸ್ಕಾರ ಇಲ್ಲ, ಅವರು ಚಾಮರಾಜಪೇಟೆಗೆ ಮತ ಕ್ಷೇತ್ರದಲ್ಲಿ ನಿಂತು ಚುನಾವಣೆ ಎದುರಿಸಬೇಕು ಎಂದಿದ್ದಾರೆ.

ಎಲ್ಲಿ ಮಾತನಾಡಿದರೆ ಮತ ಸಿಗುವುದಿಲ್ಲ ಎಂದು ಹೆದರಿ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿಲ್ಲ. ಸಿದ್ಧರಾಮಯ್ಯ ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಲ್ಲ. ಆದರೆ, ಮುಸ್ಲಿಮರನ್ನು ಓಲೈಸಲು ಬನಾರಸ್ ಚಿತ್ರ ನೋಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣದ ಸಿದ್ಧರಾಮಯ್ಯ ಹಾದಿಯನ್ನೇ ಸತೀಶ್ ಜಾರಕಿಹೊಳಿ ಹಿಡಿದಿದ್ದಾರೆ ಎಂದರು.

ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹನ: ಮೈಸೂರು ಬ್ಯಾಂಕ್ ವೃತ್ತದ ಬಳಿಯಲ್ಲಿ ಟ್ರಾಫಿಕ್ ನಡುವೆಯೇ ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹನ ಮಾಡಲು ಯತ್ನಿಸಲಾಯಿತು. ತಡೆದ ಪೊಲೀಸರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಓದಿ: ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.