ಬೆಂಗಳೂರು : ಕೇಂದ್ರದ ನೂತನ ಸಚಿವ ಸಂಪುಟದ ಶೇ. 42 ರಷ್ಟು ಸಚಿವರು ಕ್ರಿಮಿನಲ್ ಕೇಸ್ ಇರುವರು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ನೆ ಲ ನರೇಂದ್ರ ಬಾಬು, ಯಾವ ರಾಜಕಾರಣಿ ವಿರುದ್ಧ ಕ್ರಿಮಿನಲ್ ಕೇಸ್ ಇಲ್ಲ, ಸಾಬೀತಾಗುವವರೆಗೂ ಅವರು ಆರೋಪಿಗಳು ಮಾತ್ರ ಎಂದರು.
ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ನೂತನ ಕೇಂದ್ರ ಸಂಪುಟದಲ್ಲಿ ದಮನಿತರಿಗೆ ಅವಕಾಶ ನೀಡುವ ಮೂಲಕ ಮೋದಿ ನೇತೃತ್ವದ ಸರ್ಕಾರ ಎಲ್ಲಾ ವರ್ಗದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಓದಿ : ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?.. ಡಿಕೆಶಿ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್
ಬಿಜೆಪಿ ಒಬಿಸಿ ಮೋರ್ಚಾ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಮಂಡಲಗಳಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದೆ. ಹಪವಾರು ಬೆಟ್ಟದ ತಪ್ಪಲಿನಲ್ಲಿ ಸೀಡ್ ಬಾಲ್ ಉಪಯೋಗಿಸಿ ಲಕ್ಷಕ್ಕೂ ಅಧಿಕ ಸಸಿ ನೆಡುವ ಮುಂದಾಗಿದ್ದೇವೆ ಎಂದು ತಿಳಿಸಿದರು.