ETV Bharat / state

ಅಮೃತ ಕಾಲದ ಕನಸು ನನಸಾಗಿಸಲು 25 ವರ್ಷ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ: ಬೊಮ್ಮಾಯಿ - power for 25 years at center and state

ಅಮೃತ ಕಾಲದ ಕನಸು ನನಸು ಮಾಡಲು ಮುಂದಿನ 25 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೇರಬೇಕು. ಈ ದೇಶವನ್ನು ಸದೃಢವಾಗಿ, ಸಂಪತ್ಭರಿತವಾಗಿ, ಸ್ವಾಭಿಮಾನವಾಗಿ, ಇಡೀ ವಿಶ್ವದಲ್ಲಿ ಮಾನ್ಯತೆ ಪಡೆಯುವ ರೀತಿ ಕಟ್ಟುವ ಉದ್ದೇಶ ಹೊಂದಿರುವ ಏಕೈಕ ಪಕ್ಷ ನಮ್ಮದು ಎಂದು ಸಿಎಂ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Dec 18, 2022, 5:51 PM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ದೇಶದಲ್ಲಿ ಬಹಳ ರಾಜಕೀಯ ಪಕ್ಷಗಳು ಅಧಿಕಾರದ ರಾಜಕಾರಣ ಮಾಡಿವೆ. ಆದರೆ ಬಿಜೆಪಿ ಮಾತ್ರ ಜನರ ರಾಜಕಾರಣ ಮಾಡುತ್ತಿದೆ. ವ್ಯವಸ್ಥಿತ, ಸಂಘಟಿತ ರೀತಿಯಲ್ಲಿ ಜನರ ರಾಜಕಾರಣ ಮಾಡುತ್ತಿರುವ ಏಕೈಕ ಪಕ್ಷ ನಮ್ಮದು. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಿಶ್ವಕ್ಕೆ ಮಾದರಿಯಾದ ಪಕ್ಷ ನಮ್ಮದಾಗಿದೆ. ಪ್ರಧಾನಿ ಮೋದಿ ಅವರ ಅಮೃತ ಕಾಲದ ಕನಸು ನನಸು ಮಾಡಲು ಮುಂದಿನ 25 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೇರಬೇಕು ಆ ರೀತಿ ತಮ್ಮ ಊರು, ಬೂತ್​ಗಳಲ್ಲಿ ಪಕ್ಷ ಸಂಘಟಿಸಿ ಎಂದು ಪ್ರಕೋಷ್ಠಗಳ ಪ್ರಮುಖರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ರಾಜಕಾರಣಕ್ಕಾಗಿಯೇ, ಕೇವಲ ಚುನಾವಣೆಗಾಗಿ ಇರುವ ಹತ್ತು ಹಲವಾರು ಪಕ್ಷಗಳು ನಮ್ಮ ದೇಶದಲ್ಲಿವೆ. ಅಧಿಕಾರಕ್ಕಾಗಿಯೇ ರಾಜಕೀಯ ಪಕ್ಷಗಳ ನೋಂದಣಿ ಮಾಡಿಕೊಂಡು ಇರುವ ಹಲವಾರು ಪಕ್ಷಗಳಿವೆ. ಆದರೆ ಈ ದೇಶವನ್ನು ಸದೃಢವಾಗಿ, ಸಂಪತ್ಭರಿತವಾಗಿ, ಸ್ವಾಭಿಮಾನವಾಗಿ, ಇಡೀ ವಿಶ್ವದಲ್ಲಿ ಮಾನ್ಯತೆ ಪಡೆಯುವ ರೀತಿ ಕಟ್ಟುವ ಉದ್ದೇಶ ಹೊಂದಿರುವ ಏಕೈಕ ಪಕ್ಷ ನಮ್ಮದು ಎಂದು ಸಿಎಂ ಹೇಳಿದರು.

ಪ್ರತಿ ವ್ಯಕ್ತಿಗೂ ನ್ಯಾಯ ಕೊಡಿಸುವ ಪ್ರಯೋಗ: ಈ ಮೂಲಕ ಆ ವೃತ್ತಿಯಲ್ಲಿರುವ ಹಿರಿಯರು, ಪರಿಣಿತರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ಕರೆತಂದು. ಆ ವೃತ್ತಿಯ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ಪ್ರಯೋಗವನ್ನು ಪ್ರಕೋಷ್ಠಗಳ ಮೂಲಕ ಬಿಜೆಪಿ ಮಾಡುತ್ತಿದೆ. ಬೇರೆ ಯಾವುದೇ ಪಕ್ಷದಲ್ಲಿ ನಮ್ಮ ರೀತಿಯ ಪ್ರಕೋಷ್ಠಗಳಿಲ್ಲ. ಬೇರೆ ಪಕ್ಷದಲ್ಲಿ ಪ್ರಕೋಷ್ಠ ಯಾಕೆ ಮಾಡಬೇಕು ಎನ್ನುವ ಭಾವನೆ ಇದೆ ಎಂದರು.

ವ್ಯಕ್ತಿಯ ವಿಕಾಸನದವರೆಗೂ ಬಿಜೆಪಿ ಕೆಲಸ: ವೃತ್ತಿ ಮತ್ತು ಕಾಯಕ ಸಮಾಜಗಳು ತಮ್ಮದೇ ಆದ ಕೊಡುಗೆಯನ್ನು ಸ್ಥಳೀಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀಡುವ ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ. ಆ ವೃತ್ತಿಗಳು, ಸೇವೆಗಳು ಇಲ್ಲದೇ ಇದ್ದರೆ ಮನುಷ್ಯನ ಜೀವನ ಎಷ್ಟು ಕಷ್ಟವಾಗುತ್ತಿತ್ತು. ಹತ್ತು ಹಲವು ಜನ ಬೇರೆ ಬೇರೆ ವೃತ್ತಿಯಲ್ಲಿದ್ದಾಗ ಕೆಲ ವೃತ್ತಿ ಬಗ್ಗೆ ಕೀಳರಿಮೆ ತೋರುವ ಪದ್ದತಿ ಇದೆ. ಅದನ್ನು ತೊಡೆದು ಅಂತಹವರಲ್ಲಿ ವಿಶ್ವಾಸ ತುಂಬಿ ಅವರ ವ್ಯಕ್ತಿತ್ವದ ವಿಕಾಸನ ಮಾಡಿ ವ್ಯಕ್ತಿಯ ವಿಕಾಸನದವರೆಗೂ ಬಿಜೆಪಿ ಕೆಲಸ ಮಾಡುತ್ತಿದೆ.

ಪೊಲಿಟಿಕಲ್ ಸೈನ್ಸ್ ಜೊತೆ ಸೋಷಿಯಲ್ ಸೈನ್ಸ್ ಅನ್ನು ಜೋಡಿಸಿರುವ ಪಕ್ಷ ಕೇವಲ ಬಿಜೆಪಿ ಮಾತ್ರ. ಕಟ್ಟುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ವ್ಯಕ್ತಿಯಿಂದ ದೇಶದವರೆಗೂ ಹಂತ ಹಂತವಾಗಿ ನಾವು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ದೇಶವನ್ನು ಸದೃಢಗೊಳಿಸುತ್ತಿದ್ದೇವೆ. ಜ್ಞಾನ ಮತ್ತು ಶ್ರಮದ ಶತಮಾನ ಇದಾಗಿದೆ. ಯಾರ ಬಳಿ ಜ್ಞಾನವಿದೆಯೋ ಅವರು ಬಹಳ ಶಕ್ತಿಶಾಲಿಯಾಗಲಿದ್ದಾರೆ. 2014 ರಲ್ಲಿ ನಮ್ಮ ಸರ್ಕಾರ ಬಂದ ನಂತರ ಇಡೀ ದೇಶದಲ್ಲಿ ದೊಡ್ಡ ಬದಲಾವಣೆ ಕಂಡಿದೆ.

ಮೇಕ್ ಇನ್ ಇಂಡಿಯಾದಿಂದ ದೇಶದ ಆರ್ಥಿಕ ಶಕ್ತಿ ವೃದ್ಧಿ: ಸ್ಕಿಲ್ ಇಂಡಿಯಾ ಕಾರ್ಯಕ್ರಮ ಮಾಡಿದರು. ದೇಶದ ಜನಸಂಖ್ಯೆಯ ವ್ಯಾಖ್ಯಾನವನ್ನು ಮೋದಿ ಬದಲಿಸಿದ್ದಾರೆ. ಜನಸಂಖ್ಯೆ ಎಂದರೆ ದೇಶಕ್ಕೆ ಮಾರಕ, ಅಭಿವೃದ್ಧಿಗೆ ಮಾರಕ ಎನ್ನುವ ಮಾತುಗಳಿತ್ತು. ಆದರೆ ಮೋದಿ ಸಕಾರಾತ್ಮಕ ಚಿಂತನೆ ಮಾಡಿದ್ದು ಒಟ್ಟು ಜನಶಕ್ತಿಯ ಲಾಭವನ್ನು ದೇಶಕ್ಕೆ ಕೊಡಬೇಕು. ಅತಿ ಹೆಚ್ಚು ಯುವಕ-ಯುವತಿಯರಿಂದ ಕೂಡಿದ ರಾಷ್ಟ್ರ ನಮ್ಮದಾಗಿದೆ. ಅವರಿಗೆ ಕೌಶಲ್ಯ ತರಬೇತಿ ನೀಡಿ, ಪ್ರಬುದ್ಧ ಕಾರ್ಯ ವ್ಯವಸ್ಥೆ ಮಾಡಿದರೆ ಜನಸಂಖ್ಯೆಯೇ ನಮಗೆ ಮಾರುಕಟ್ಟೆ, ಮೇಕ್ ಇನ್ ಇಂಡಿಯಾ ಮೂಲಕ ದೇಶದ ಆರ್ಥಿಕ ಶಕ್ತಿ ವೃದ್ಧಿಸಲಿದೆ. ಅದಕ್ಕಾಗಿ ಯೋಜನೆಗಳನ್ನು ಪ್ರಕಟಿಸಿದರು ಎಂದು ಹೇಳಿದರು.

ರಕ್ಷಣಾ ಉತ್ಪನ್ನಗಳಲ್ಲಿ ಶೇ.60 ರಷ್ಟು ನಾವೇ ಉತ್ಪಾದನೆ ಮಾಡುವಷ್ಟು ದೇಶ ಬೆಳೆದಿದೆ. ಕೆಲ ಕಾಲದಲ್ಲಿ ಮೇಡ್ ಇನ್ ಇಂಡಿಯಾ ಶೇ. ನೂರರಷ್ಟು ರಕ್ಷಣಾ ಇಲಾಖೆಯಲ್ಲಿ ಆಗಲಿದೆ. ದೇಶದಲ್ಲಿ ಪ್ರಗತಿ ಆಗುತ್ತಿದ್ದರೆ ದುಡಿಯುವ ವರ್ಗದ ಬೆವರು, ಶ್ರಮವೇ ಕಾರಣ. ಇನ್ನೂ 25 ವರ್ಷ ಅಮೃತ ಕಾಲ, ಮೋದಿ ಕಂಡಿರುವ ಈ ಕನಸು ನಿಜವಾಗಿಯೇ ನನಸಾಗಬೇಕಾದರೆ ಭಾರತವನ್ನು ಕಟ್ಟಲು ಮುಂದಿನ 25 ವರ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹಳ ಮುಖ್ಯ ಎಂದರು.

ಇದನ್ನೂ ಓದಿ: ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡಲು ನಮಗೆ ಗೊತ್ತಿದೆ: ಸಿಎಂ

ಜನತೆಗಾಗಿ ರಾಜಕಾರಣ ಮಾಡುವ ಪಕ್ಷವಾಗಿರುವ ಬಿಜೆಪಿಯನ್ನು 2023ರ ವಿಧಾನಸಭೆ ಮತ್ತು 2024ರಲ್ಲಿ ನಡೆಯಲಿರುವ ಲೋಕಸಭೆ ಎರಡರಲ್ಲಿಯೂ ನಾವು ಅಧಿಕಾರಕ್ಕೆ ಬರುವಂತಾಗಬೇಕು. ಆ ರೀತಿ ಗೆಲ್ಲು ನಾವು ಸನ್ನದ್ದರಾಗಬೇಕು. ನಮ್ಮ ನಮ್ಮ ಊರು, ಬೂತ್ ಗಳಲ್ಲಿ ಬಿಜೆಪಿ ಕಟ್ಟುವ ಕೆಲಸ ಮಾಡಬೇಕು. ಎಲ್ಲ ವೃತ್ತಿಯ ಬಂಧುಗಳಲ್ಲಿ ಕರೆ ನೀಡಿ, ಆತ್ಮವಿಶ್ವಾಸ ಮೂಡಿಸಬೇಕು, ಬಿಜೆಪಿ ದುಡಿಯುವ ವರ್ಗದ ಪರವಿದೆ. ರಾಜ್ಯ, ದೇಶ ಕಟ್ಟುತ್ತೇವೆ ಎಂದು ಸಂಕಲ್ಪ ಮಾಡಬೇಕು. ಚುನಾವಣೆ ಎದುರಿಸುವ ಮತ್ತು ದೇಶಕಟ್ಟುವ ಸವಾಲನ್ನು ಒಗ್ಗಟ್ಟಾಗಿ ಎದುರಿಸೋಣ ಎಂದು ಸಿಎಂ ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.