ETV Bharat / state

ಶಿರಾ ಗೆಲುವಿನಲ್ಲಿ ಸಿಎಂ ಪುತ್ರ ವಿಜಯೇಂದ್ರಗೆ ಸ್ವಲ್ಪ ಹೆಚ್ಚಿನ ಕ್ರೆಡಿಟ್ ಸಿಕ್ಕರೆ ತಪ್ಪೇನಿಲ್ಲ: ಸಿ.ಟಿ ರವಿ - ct ravi reaction about sira by election success

ಶಿರಾ ಉಪ ಚುನಾವಣೆ ಗೆಲುವಿನ ಕ್ರೆಡಿಟ್ ವಿಜಯೇಂದ್ರ ಅವರಿಗೆ ಹೋದರೆ ತಪ್ಪೇನಿಲ್ಲ. ನಮ್ಮಲ್ಲಿ ಮುಖ್ಯಮಂತ್ರಿ ಪುತ್ರ ಎಂದು ಅವಕಾಶ ನೀಡುತ್ತಿಲ್ಲ ಸ್ವಾಭಾವಿಕವಾಗಿ ಯಾರು ಬೇಕಾದರೂ ಬೆಳೆಯಬಹುದು. ಅದೇ ರೀತಿ ವಿಜಯೇಂದ್ರ ಕೂಡ ಬೆಳೆಯುತ್ತಿದ್ದಾರೆ. ಹಾಗಾಗಿ ಇಲ್ಲಿ ವಂಶ ರಾಜಕೀಯದ ಪ್ರಶ್ನೆ ಬರುವುದಿಲ್ಲ, ಪಕ್ಷದ ಓನರ್ ಶಿಪ್ ಇರೋದು ನಮ್ಮ ಕಾರ್ಯಕರ್ತರ ಬಳಿ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.

bjp national general secretary CT ravi statement about vijeyendra
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
author img

By

Published : Nov 11, 2020, 3:59 PM IST

ಬೆಂಗಳೂರು: ಶಿರಾ ಉಪ ಚುನಾವಣೆ ಗೆಲುವಿನಲ್ಲಿ ಹೆಚ್ಚಿನ ಕ್ರೆಡಿಟ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರಗೆ ಹೋದರೆ ತಪ್ಪೇನಿಲ್ಲ, ಉತ್ಸಾಹಿ ಯುವಕ, ಹೆಚ್ಚಿನ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ
ಮಲ್ಲೇಶ್ವರಂ ನಲ್ಲಿರುವ ಬಾಬುರಾವ್ ದೇಶಪಾಂಡೆ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವಾಲಯ ಎನ್ನುತ್ತಿದ್ದಂತೆ ಗೋಪುರ ಕಾಣುತ್ತದೆ, ನಮಸ್ಕರಿಸುತ್ತಾರೆ. ಚುನಾವಣೆಯಲ್ಲಿ ಸಾವಿರಾರು ಕಾರ್ಯಕರ್ತರು ಫೌಂಡೇಶನ್ ಕಟ್ಟಿರುತ್ತಾರೆ. ಆದರೆ, ಅವರು ಕಾಣಲ್ಲ, ನಾಯಕತ್ವ ವಹಿಸಿದವರು ನೇತೃತ್ವ ವಹಿಸಿದವರು ಕಾಣಿಸುತ್ತಾರೆ. ಶಿರಾ ಚುನಾವಣೆ ಗೆಲುವಿನ ಕ್ರೆಡಿಟ್ ವಿಜಯೇಂದ್ರ ಅವರಿಗೆ ಹೋದರೆ ತಪ್ಪೇನಿಲ್ಲ.
ಅವರು ಎಲ್ಲೂ ತನ್ನಿಂದಲೇ ಆಯ್ತು ಎಂದು ಹೇಳಿಕೊಂಡಿಲ್ಲ. ಹಾಗೆ ಹೇಳಿಕೊಂಡಿದ್ದರೆ ತಪ್ಪಾಗುತ್ತಿತ್ತು. ವಿಜಯೇಂದ್ರ ಮುಖ್ಯಮಂತ್ರಿಗಳ ಮಗ, ರಾಜ್ಯ ಉಪಾಧ್ಯಕ್ಷ. ನಮ್ಮ ಪಕ್ಷದ ಸಂಘಟನೆ ಬಲದಿಂದ ಗೆದ್ದಿದೆ. ಅಳಿಲು ಸೇವೆ ಮಾಡಿದವರು, ಹನುಮಂತನ ತರ ದೊಡ್ಡ ಬೆಟ್ಟ ತಂದವರಿಬ್ಬರಿಗೂ ರಾಮನ ಕೃಪಾಕಟಾಕ್ಷ ಇತ್ತು ಹಾಗೆಯೇ ನಮ್ಮಲ್ಲೂ ಎಲ್ಲರ ಮೇಲೂ ಪಕ್ಷದ ಕೃಪಾಕಟಾಕ್ಷ ಇದೆ ಎಂದರು.
ನಮ್ಮಲ್ಲಿ ಮುಖ್ಯಮಂತ್ರಿ ಪುತ್ರ ಎಂದು ಅವಕಾಶ ನೀಡುತ್ತಿಲ್ಲ ಸ್ವಾಭಾವಿಕವಾಗಿ ಯಾರು ಬೇಕಾದರೂ ಬೆಳೆಯಬಹುದು. ಅದೇ ರೀತಿ ವಿಜಯೇಂದ್ರ ಕೂಡ ಬೆಳೆಯುತ್ತಿದ್ದಾರೆ ಹಾಗಾಗಿ ಇಲ್ಲಿ ವಂಶ ರಾಜಕೀಯದ ಪ್ರಶ್ನೆ ಬರುವುದಿಲ್ಲ, ಪಕ್ಷದ ಓನರ್ ಶಿಪ್ ಇರೋದು ನಮ್ಮ ಕಾರ್ಯಕರ್ತರ ಬಳಿ ಎಂದು ಸ್ಪಷ್ಟನೆ ನೀಡಿದರು. ಎಲ್ಲಿದೆ ಬಿಜೆಪಿ ಅಲೆ ಎಂದು ಕೇಳುತ್ತಿದ್ದವರಿಗೆ ಈಗ ಬಿಹಾರ ಸಾರ್ವತ್ರಿಕ ಚುನಾವಣೆ ಮತ್ತು ಇತರ ರಾಜ್ಯಗಳ ಉಪಚುನಾವಣೆ ಉತ್ತರ ನೀಡಿದೆ. ಈಗಲಾದರೂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಖಾಲಿ ಇಲ್ಲದ ಕುರ್ಚಿ ಬಗ್ಗೆ ನಡೆದ ಚರ್ಚೆಗೆ, ಜಾತಿವಾದದ ಷಡ್ಯಂತ್ರಕ್ಕೆ ಈ ಉಪ ಚುನಾವಣೆ ಉತ್ತರ ನೀಡಿದೆ.
ಚುನಾವಣೆ ಫಲಿತಾಂಶದ ನಂತರ ಹಣ ಬಲ ತೋಳ್ಬಲ, ಜಾತಿ ಬಲದಿಂದ ಗೆದ್ದಿದ್ದಾರೆ ಎಂದು ಕಾರಣ ಹೇಳುತ್ತಿದ್ದಾರೆ. ಆದರೆ ಹಣ ಬಲ, ತೋಳ್ಬಲ ಜಾತಿಬಲ ಇಲ್ಲವೋ ಡಿಕೆಶಿ ಬಳಿ ಇತ್ತು ಹಾಗಿದ್ದರೆ ಅವರೂ ಆರ್.ಆರ್.ನಗರ ಗೆಲ್ಲಬಹುದಿತ್ತಲ್ಲ ಎಂದು ಟಾಂಗ್ ನೀಡಿದರು. ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದದ ಕಾಯಿಲೆಗಳಿಂದ ಕಾಂಗ್ರೆಸ್ ಜರ್ಜರಿತವಾಗಿದೆ. ಅದಕ್ಕೆ ಕಾಂಗ್ರೆಸ್ ಈಗಲೇ ಚಿಕಿತ್ಸೆ ಕೊಡಿಸದೇ ಇದ್ದರೆ ಕಾಂಗ್ರೆಸ್ ಅವಸಾನವಾಗುತ್ತದೆ ಎಂದರು.
ಎಡ ಪಕ್ಷಗಳು ಎಡಬಿಡಂಗಿತನ ಬಿಡಲಿ: ನಮ್ಮ ಮುಂದಿನ ಗುರಿ ಪಶ್ಚಿಮ ಬಂಗಾಳ, ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಪುದುಚೇರಿ. ರಾಷ್ಟ್ರೀಯವಾದದ ಆಧಾರದ ಮೇಲೆ ನಾವು ಪಕ್ಷವನ್ನು ಬೆಳೆಸುತ್ತೇವೆ. ಎಡಪಕ್ಷಗಳ ಎಡಬಿಡಂಗಿತನ ಎಷ್ಟು ದಿನ ನಡೆಯುತ್ತದೆ, ಕೇರಳದಲ್ಲಿ ಕಾಂಗ್ರೆಸ್​​ ವಿರೋಧ ಮಾಡುತ್ತಾರೆ. ಆದರೆ, ಬಿಹಾರದಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅವರಿಗೆ ಬದ್ಧತೆಯಿದ್ದರೆ ಕೇರಳದಲ್ಲಿಯೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲಲಿ ಎಂದು ಎಡ ಪಕ್ಷಗಳಿಗೆ ಸವಾಲೆಸೆದರು. ತೇರದಾಳದಲ್ಲಿ ಶಾಸಕ ಸಿದ್ದು ಸವದಿ ವರ್ತನೆ ವಿಷಯದಲ್ಲಿ ಹಾರಿಕೆ ಉತ್ತರ ನೀಡಿದ ಬಿಜೆಪಿ ದಕ್ಷಿಣ ಭಾರತ ಉಸ್ತುವಾರಿ ಸಿ.ಟಿ.ರವಿ, ಆ ಘಟನೆ ಬಗ್ಗೆ ಮಾಹಿತಿ ಇಲ್ಲ. ಯಾವ ಉದ್ದೇಶದಿಂದ ಅವರು ಹಾಗೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಕೆಲವೊಮ್ಮ ನಮ್ಮ ಅಕ್ಕತಂಗಿಯರೊಂದಿಗೂ ನಾವು ಹೆಚ್ಚು ಸಲುಗೆಯಿಂದ ವರ್ತಿಸುತ್ತೇವೆ. ಘಟನೆಯ ಬಗ್ಗೆ ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.
ಯತ್ನಾಳ್ ವಿರುದ್ಧ ಸಾಮ ದಾನ ಬೇಧ ದಂಡ: ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯದಲ್ಲಿ ಹೈಕಮಾಂಡ್ ಸುಮ್ಮನೆ ಕುಳಿತಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗದೇ ಇರುವ ಎಷ್ಟೋ ಸಂಗತಿಗಳು ಇರುತ್ತವೆ. ಸಾಮ, ದಾನ, ಬೇಧ, ದಂಡ ಕ್ರಮಗಳನ್ನು ಅನುಸರಿಸಲಾಗುತ್ತದೆ. ಎಷ್ಟೇ ದೊಡ್ಡವರಾದರೂ ಸರಿ ಎಂತಹುದ್ದೇ ಬೆಲೆ ತೆತ್ತಾದರೂ ಸರಿ ಪಕ್ಷ ಸರಿಯಾದ ಕ್ರಮ ಕೈಗೊಳ್ಳಲಿದೆ ಎಂದರು.
ಸಂಪುಟ ವಿಸ್ತರಣೆ:ಸಚಿವ ಸಂಪುಟ ವಿಸ್ತರಣೆ,ಪುನಾರಚನೆ ಮುಖ್ಯಮಂತ್ರಿಗಳ ಅಧಿಕಾರ. ಕಾಲ ಕಾಲಕ್ಕೆ ಹೈಕಮಾಂಡ್ ಎಲ್ಲದಕ್ಕೂ ಅನುಮತಿ ನೀಡುತ್ತಲೇ ಬಂದಿದೆ. ಈಗಲೂ ಸಿಎಂ ಯಡಿಯೂರಪ್ಪ ಹೈಕಮಾಂಡ್, ನಾಯಕರ ಜೊತೆ ಸಮಾಲೋಚನೆ ನಡೆಸಿ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.