ಬೆಂಗಳೂರು: ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ಬಿಜೆಪಿ ಸದಸ್ಯ ರವಿಕುಮಾರ್ ಮೊಬೈಲ್ ವೀಕ್ಷಣೆಯಲ್ಲಿ ತೊಡಗಿದ್ದ ಘಟನೆ ನಡೆಯಿತು.
ಸಂತಾಪ ಸೂಚನೆ ಗೊತ್ತುವಳಿ ಮೇಲೆ ಭಾಷಣ ನಡೆಯುತ್ತಿದ್ದಾಗ ಬಿಜೆಪಿ ಸದಸ್ಯ ರವಿಕುಮಾರ್ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ವಾಟ್ಸ್ ಆಪ್ ಸಂದೇಶಗಳ ವೀಕ್ಷಣೆಯಲ್ಲಿ ನಿರತರಾಗಿದ್ದರು. ಯಾರೂ ಕೂಡ ಅವರಿಗೆ ಸೂಚನೆ ಕೊಡುವ ಕೆಲಸ ಮಾಡಲಿಲ್ಲ.
ವಿಧಾನಸಭೆಯಲ್ಲಿ ಶಾಸಕರು ಸದನದ ಒಳಗೆ ಮೊಬೈಲ್ ಕೊಂಡೊಯ್ಯಲು ನಿರ್ಬಂಧವಿದೆ. ಹಾಗಾಗಿ ಅಲ್ಲಿ ಯಾರೂ ಮೊಬೈಲ್ ಬಳಕೆ ಮಾಡಯವುದಿಲ್ಲ. ಆದರೆ ವಿಧಾನ ಪರಿಷತ್ ನಲ್ಲಿ ಸದಸ್ಯರಿಗೆ ಮೊಬೈಲ್ ಕೊಂಡೊಯ್ಯಲು ನಿರ್ಬಂಧವಿಲ್ಲ. ಹಾಗಾಗಿ ಸದಸ್ಯರು ಸದನದ ಒಳಗೆ ಮೊಬೈಲ್ ಕೊಂಡೊಯ್ಯುತ್ತಾರೆ. ಹಾಗಾಗಿ ಬಿಜೆಪಿ ಸದಸ್ಯ ರವಿಕುಮಾರ್ ಮೊಬೈಲ್ ನಲ್ಲಿ ವಾಟ್ಸ್ ಆಪ್ ಸಂದೇಶಗಳನ್ನು ವೀಕ್ಷಿಸುತ್ತಿದ್ದರೂ ಯಾರೂ ಅತ್ತ ಗಮನ ಹರಿಸಲಿಲ್ಲ.