ETV Bharat / state

ಬಿಜೆಪಿ ಮಹಾ ಜನಸಂಪರ್ಕ ಅಭಿಯಾನ: ದೇವೇಗೌಡರಿಗೆ ಕೇಂದ್ರ ಸರ್ಕಾರ, ಕ್ಷೇತ್ರದ ಸಾಧನೆಯ ವರದಿ ನೀಡಿದ ಸಂಸದ ತೇಜಸ್ವಿ ಸೂರ್ಯ

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರ ನಿವಾಸಕ್ಕೆ ಇಂದು ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದರು.

ದೇವೇಗೌಡರಿಗೆ ನಮೋ ಸರ್ಕಾರ ವರದಿ ನೀಡಿದ ಸಂಸದ ತೇಜಸ್ವಿ ಸೂರ್ಯ

author img

By

Published : Jun 14, 2023, 10:10 PM IST

ಬೆಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 9 ವರ್ಷಗಳ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯಗಳು ಮತ್ತು 2019ರಿಂದ ಬೆಂಗಳೂರು ದಕ್ಷಿಣದಲ್ಲಿ ಮಾಡಿದ ಸಾಧನೆಗಳ ವರದಿಯನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೀಡಿದರು. ಇದೇ ವೇಳೆ ನಮೋ ವಿದ್ಯಾನಿಧಿ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ತಲಾ 10 ಸಾವಿರ ರೂಪಾಯಿ ಶಿಷ್ಯವೇತನವನ್ನು ಹೆಚ್.ಡಿ.ದೇವೇಗೌಡರ ಮೂಲಕ ವಿತರಣೆ ಮಾಡಿಸಿ ಗಮನ ಸೆಳೆದರು.

ಸೂರ್ಯ ಅವರ ಈ ಭೇಟಿಯು ಮಹಾ ಜನ ಸಂಪರ್ಕ ಅಭಿಯಾನದ ಭಾಗವಾಗಿದ್ದು, ಇದರಲ್ಲಿ ಬಿಜೆಪಿಯ ಪ್ರತಿಯೊಬ್ಬ ಸಂಸದರು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚಿಸಬೇಕಿದೆ. ಅದರಂತೆ ತೇಜಸ್ವಿ ಸೂರ್ಯ ದೇವೇಗೌಡರ ಜೊತೆ ಮಾತುಕತೆ ನಡೆಸಿ ಕೆಲಕಾಲ ಚರ್ಚಿಸಿದ್ದಾರೆ.

ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ತಂದಿರುವ ಸುಧಾರಣೆಗಳ ಕುರಿತು ಸಂಸದ ಸೂರ್ಯ ಮಾಜಿ ಪ್ರಧಾನಿಗೆ ವಿವರಿಸಿದರು. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರವು ಸ್ವನಿಧಿಯ ಮೂಲಕ ತಂದ ಮಧ್ಯಸ್ಥಿಕೆಗಳ ಕುರಿತು ಅವರು ಮಾತನಾಡಿದರು.

ಮಕ್ಕಳಿಗೆ ನಮೋ ವಿದ್ಯಾನಿಧಿ ವಿತರಿಸಿದ ದೇವೇಗೌಡ

ಇದರೊಂದಿಗೆ, ನಗರದ ಅಭಿವೃದ್ಧಿಯ ವಿವಿಧ ಅಂಶಗಳನ್ನು ಚರ್ಚಿಸಿದರು. ನಗರಕ್ಕೆ ಕೇಂದ್ರದ ಕೊಡುಗೆ, ವಿಶೇಷವಾಗಿ ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂ ವಸತಿ ಯೋಜನೆ) ಕುರಿತು ಹೆಚ್.ಡಿ.ದೇವೇಗೌಡರ ಜೊತೆ ಸೂರ್ಯ ವಿವರಿಸಿದರು.

ಜನೌಷಧಿ ಕೇಂದ್ರಗಳ ಸಂಖ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು. 2019 ರಲ್ಲಿ 14 ರಿಂದ ಶುರುವಾದ ಜನೌಷಧಿ ಕೇಂದ್ರಗಳು ಇದೀಗ ಬೆಂಗಳೂರು ದಕ್ಷಿಣದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಈ ಮಳಿಗೆಗಳು ಜನರಿಗೆ ಸುಮಾರು 50- 90% ಕಡಿಮೆ ವೆಚ್ಚದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ. ಮಾಸಿಕ ಬಿಲ್‌ಗಳಲ್ಲಿ ಸಾಕಷ್ಟು ಉಳಿತಾಯಕ್ಕೆ ಕಾರಣವಾಗುತ್ತವೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಬೆಂಗಳೂರು ದಕ್ಷಿಣದ ಮತ್ತೊಂದು ಉಪಕ್ರಮವಾದ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಸಹಾಯದಿಂದ ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿರುವ ಬಗ್ಗೆ, "ಮುಂಬರುವ ವರ್ಷಗಳಲ್ಲಿ ಬೆಂಗಳೂರನ್ನು ವಿಶ್ವ ದರ್ಜೆಯ ಮೂಲಸೌಕರ್ಯಗಳೊಂದಿಗೆ ಜಾಗತಿಕ ನಗರವನ್ನಾಗಿ ಮಾಡುವ ಕುರಿತು ನಾನು ಮಾಜಿ ಪ್ರಧಾನಿಯವರ ಮಾರ್ಗದರ್ಶನವನ್ನು ಕೋರಿದೆ. ನನ್ನಂತಹ ಯುವಕರನ್ನು ಭೇಟಿ ಮಾಡಲು ಮತ್ತು ಮಾರ್ಗದರ್ಶನ ನೀಡಲು ಸ್ವಲ್ಪ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಕೆಲಸ ಮತ್ತು ಅನುಭವದಿಂದ ನಾನು ಕಲಿಯುವುದು ಸಾಕಷ್ಟು ಇದೆ” ಎಂದು ಸೂರ್ಯ ತಿಳಿಸಿದರು.

ನಮೋ ವಿದ್ಯಾನಿಧಿ ವಿತರಿಸಿದ ದೇವೇಗೌಡ: ನಮೋ ವಿದ್ಯಾನಿಧಿ ಕಾರ್ಯಕ್ರಮದಡಿಯಲ್ಲಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಸುಮಾರು 10,000 ಪ್ರತಿಭಾವಂತ ಮಕ್ಕಳಿಗೆ ತಲಾ 10,000 ರೂ.ಗಳ ವಿದ್ಯಾರ್ಥಿವೇತನ ನೀಡಲು ಸಂಸದ ತೇಜಸ್ವಿ ಸೂರ್ಯ ಗುರಿ ಹೊಂದಿದ್ದು, ನೇರವಾಗಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಆಯಾ ಶಾಲೆಗಳಿಗೆ ಪಾವತಿಸಲಾಗಿದೆ. ಪ್ರಸ್ತುತ ಬೆಂಗಳೂರು ದಕ್ಷಿಣದಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ದೇವೇಗೌಡರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಗರದ ಆಟೋ ರಿಕ್ಷಾ ಚಾಲಕರ ಹಲವಾರು ಮಕ್ಕಳು ಸೇರಿದಂತೆ ಸುಮಾರು 10 ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ಅನ್ನು ಮಾಜಿ ಪ್ರಧಾನಿಗಳು ಹಸ್ತಾಂತರಿಸಿದರು.

ದೇವೇಗೌಡ ಸರ್ ಅವರಂತಹ ಮೇರು ವ್ಯಕ್ತಿಯಿಂದ ಅನೇಕ ಹಿಂದುಳಿದ ವಿದ್ಯಾರ್ಥಿಗಳಿಗೆ ಚೆಕ್‌ಗಳನ್ನು ಸ್ವೀಕರಿಸುವುದು ಆಹ್ಲಾದಕರ ಅನುಭವ. ಈ ಮಕ್ಕಳಿಗೆ ಚೆಕ್‌ಗಳನ್ನು ನೀಡಲು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರು ಚೆನ್ನಾಗಿ ಅಧ್ಯಯನ ಮಾಡಲು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಬೆಂಬಲಿಸುವಂತೆ ಒತ್ತಾಯಿಸಿದರು. ದೇವೇಗೌಡರು ತಮ್ಮ ರಾಜಕೀಯದಲ್ಲಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿ ಇರಿಸಿದ್ದಾರೆ ಎಂದು ಸೂರ್ಯ ಭೇಟಿಯ ನಂತರ ಹೇಳಿದರು.

ಇದನ್ನೂ ಓದಿ : ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಶಾಸಕರ ನಿಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.